More

    ಒಮಿಕ್ರಾನ್​​ ತಡೆಗೆ ಸರ್ಕಾರ ಸಜ್ಜು; ರಾಜ್ಯದಲ್ಲಿ ಜಾರಿಯಾಗುವ ಹೊಸ ನಿಯಮಗಳಿವು

    ಬೆಂಗಳೂರು: ಕರ್ನಾಟಕದಲ್ಲಿ ಎರಡು ಒಮಿಕ್ರಾನ್​ ರೂಪಾಂತರಿ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರೊನಾ ಬೆಡ್​​ಗಳು, ಆಕ್ಸಿಜನ್ ಮತ್ತು ಅಗತ್ಯ ಔಷಧಿಗಳ ವ್ಯವಸ್ಥೆ ಸೇರಿದಂತೆ ಕೋವಿಡ್​ ನಿಯಂತ್ರಣ ಕೊಠಡಿಗಳನ್ನು ಪುನರಾರಂಭ ಮಾಡಲು ಸರ್ಕಾರ ನಿರ್ಧರಿಸಿದೆ. ಇಂದು ನಗರದಲ್ಲಿ ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

    ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್.ಅಶೋಕ್, ಒಮಿಕ್ರಾನ್ ರೂಪಾಂತರಿಯ ಎರಡು ಪ್ರಕರಣಗಳು ಪತ್ತೆಯಾಗಿವೆ. ಈ ರೂಪಾಂತರಿಯ ತೀವ್ರತೆಯ ಬಗ್ಗೆ ಅಧ್ಯಯನದ ವರದಿ ಬಂದಿಲ್ಲ. ಆದರೆ, ಅನೌಪಚಾರಿಕ ಮಾಹಿತಿಯ ಪ್ರಕಾರ ರೋಗಲಕ್ಷಣಗಳು ಸೌಮ್ಯವಾಗಿದ್ದು, ಸಾವುಗಳಿಲ್ಲ ಎನ್ನಲಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ: ಪಾಕ್​ ಗಾಳಿಯಿಂದ ದೆಹಲಿ ಕಲುಷಿತವಾಗ್ತಿದೆ: ಸುಪ್ರೀಂ ಕೋರ್ಟ್​ ಮುಂದೆ ಯುಪಿ ಸರ್ಕಾರ

    ರಾಜ್ಯದಲ್ಲಿ ಒಮಿಕ್ರಾನ್​ ಅಥವಾ ಈ ಮುಂಚಿನ ಡೆಲ್ಟಾ ರೂಪಾಂತರಿಯ ಕರೊನಾ ಸೋಂಕು ಹೆಚ್ಚಾಗದಂತೆ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪಾಲಕರು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆ ಮಾತ್ರ ಅವರ ಮಕ್ಕಳಿಗೆ ಶಾಲೆ-ಕಾಲೇಜಿಗೆ ಅವಕಾಶ ನೀಡಲಾಗುವುದು. ಶಾಲೆ-ಕಾಲೇಜುಗಳಲ್ಲಿ ಸಮಾರಂಭ ಅಥವಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಹಾಗಿಲ್ಲ. ಮದುವೆ ಸಮಾರಂಭಗಳಿಗೆ 500 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಶಾಲೆ-ಕಾಲೇಜು, ಚಿತ್ರಮಂದಿರ, ಮಾಲ್ ಸಿಬ್ಬಂದಿಗೆ ಕರೊನಾ ಲಸಿಕೆಯ ಎರಡೂ ಡೋಸ್ ಕಡ್ಡಾಯವಾಗಿರುತ್ತದೆ ಎಂದು ಅಶೋಕ್​ ತಿಳಿಸಿದರು.

    ಒಮಿಕ್ರಾನ್​ ಹರಡಲು ಕಾರಣವಾಗಿದೆ ಎಂದು ಭಾವಿಸಲಾಗಿರುವ ಖಾಸಗಿ ಹೋಟೆಲ್​ನಲ್ಲಿ ನಡೆದ ವೈದ್ಯರ ಸಮ್ಮೇಳನದ ಬಗ್ಗೆ ಹಾಗೂ ಶಂಕಿತ ವೈದ್ಯರಿಗೆ ನೆಗೆಟಿವ್ ವರದಿ ಲಭಿಸಿರುವ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆಗೆ ಆದೇಶ ನೀಡಲಾಗಿದೆ. ಒಮಿಕ್ರಾನ್ ಸೋಂಕಿತರೆಂದು ಶಂಕಿಸಲಾದ 10 ಮಂದಿ ನಾಪತ್ತೆಯಾಗಿದ್ದು, ಅವರನ್ನು ಹುಡುಕಿ ಪತ್ತೆ ಹಚ್ಚಲು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದೂ ಅಶೋಕ್​ ತಿಳಿಸಿದರು.

    ಇದನ್ನೂ ಓದಿ: ರಾಜ್ಯದಲ್ಲಿ 16 ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ: ಶಾಸಕ ಎಚ್​.ಕೆ. ಪಾಟೀಲ್​ ಸ್ಫೋಟಕ ಹೇಳಿಕೆ

    ಕ್ರಿಸ್​​ಮಸ್ ಹಾಗೂ ಹೊಸ ವರ್ಷದ ಸಂದರ್ಭಗಳಿಗೆ ನಿರ್ಬಂಧಗಳನ್ನು ವಿಧಿಸಬೇಕೇ ಎಂಬ ಬಗ್ಗೆ ಮತ್ತೊಮ್ಮೆ ಸಭೆ ನಡೆಸಲಾಗುವುದು. ಬೆಳಗಾವಿ ಅಧಿವೇಶನ ಅಬಾಧಿತವಾಗಿ ನಡೆಯುವುದು. ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾತ್ರ ಟೆಸ್ಟ್ ಕಡ್ಡಾಯವಾಗಿರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಪರೀಕ್ಷಾ ಯಂತ್ರಗಳನ್ನು ಅಳವಡಿಸಲಾಗುವುದು ಎಂದರು.

    ಬರೋಬ್ಬರಿ 2.15 ಕೋಟಿ ರೂ. ಸಂಬಳ! ಐಐಟಿ ವಿದ್ಯಾರ್ಥಿಗೆ ಬಂಪರ್​ ಆಫರ್​​

    ವಿಕಿ-ಕತ್ರೀನಾ ಮದುವೆಗಾಗಿ ಸಿದ್ಧತಾ ಸಭೆ; ವೈರಲ್​ ಆಗಿದೆ ಜಿಲ್ಲಾಧಿಕಾರಿಯ ನೋಟೀಸ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts