More

    ರಾಜ್ಯದಲ್ಲಿ 16 ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ: ಶಾಸಕ ಎಚ್​.ಕೆ. ಪಾಟೀಲ್​ ಸ್ಫೋಟಕ ಹೇಳಿಕೆ

    ಗದಗ: ರಾಜ್ಯದಲ್ಲಿ 16 ಒಮಿಕ್ರಾನ್​ ಪ್ರಕರಣಗಳು ಪತ್ತೆಯಾಗಿವೆ ಎಂದು ಕಾಂಗ್ರೆಸ್​ ಶಾಸಕ ಎಚ್​.ಕೆ. ಪಾಟೀಲ್​ ಅವರು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

    ಗದಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ಸಂಜೆ ಬಂದ ವರದಿ ಪ್ರಕಾರ ರಾಜ್ಯದಲ್ಲಿ 16 ಒಮಿಕ್ರಾನ್ ಪತ್ತೆಯಾಗಿವೆ ಎಂದು ತಿಳಿಸಿದರು.

    ಒಮಿಕ್ರಾನ್ ಟೆಸ್ಟ್​ನಲ್ಲಿ ಆ ರೀತಿ ವರದಿ ಬಂದಿದೆ. ನನಗೆ ಬಂದಿರುವ ಅನಧಿಕೃತವಾದ ಮಾಹಿತಿ ಇದು. ಆದರೂ, ಇದು ಬಹಳ ಗಂಭೀರವಾದ ಸುದ್ದಿಯಾಗಿದ್ದು, ತುಂಬಾ ಎಚ್ಚರಿಕೆವಹಿಸುವ ಅಗತ್ಯವಿದೆ ಎಂದು ಹೇಳಿದರು.

    ರಾಜಧಾನಿ ಬೆಂಗಳೂರಿನಲ್ಲಿ ನ.21ರಿಂದ ನ.23ರವೆರಗೆ ಖಾಸಗಿ ಹೋಟೆಲ್‌ನಲ್ಲಿ ನಡೆದ ವೈದ್ಯರ ಅಂತಾರಾಷ್ಟ್ರೀಯ ಸಮ್ಮೇಳನದಿಂದಲೇ ದೇಶದಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಲು ಮೂಲ ಕಾರಣವಾಗಿದೆ ಎಂದು ತಿಳಿದುಬಂದಿದೆ. ರಾಜಧಾನಿಯ ಖಾಸಗಿ ಹೋಟೆಲ್‌ನಲ್ಲಿ ವಿವಿಧ ದೇಶಗಳ ವೈದ್ಯರನ್ನು ಒಳಗೊಂಡ ಅಂತಾರಾಷ್ಟ್ರೀಯ ವೈದ್ಯರ ಸಮ್ಮೇಳನ ನಡೆಸಲಾಗಿದೆ. ಅದರಲ್ಲಿ ನ.20ರಿಂದ ಬಂದಿದ್ದ ಆಫ್ರಿಕದ ವೈದ್ಯರು ಭಾಗವಹಿಸಬೇಕಿತ್ತು. ಆದರೆ, ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಕ್ವಾರಂಟೈನ್ ಆಗಿದ್ದರು. ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ವರದಿ ಬಂದಿದೆ. ಇದನ್ನು ಮುಂದಿಟ್ಟುಕೊಂಡು ವೈದ್ಯರ ಸಮ್ಮೇಳನದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲೇ ಹರಡಿತು ಒಮಿಕ್ರಾನ್!: ಎಲ್ಲವೂ ಗುಟ್ಟುಗುಟ್ಟು.. ಮಾಡಲಾಯಿತೇ ನಿರ್ಲಕ್ಷ್ಯ?

    ಎಚ್ಚರ.. ಎಚ್ಚರ.. ಹೊರಗೆಲ್ಲೂ ಹೋಗದವರಿಗೂ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೂ ಬಂದಿದೆ ಒಮಿಕ್ರಾನ್​!

    ಹಳೇ ಸ್ಕೂಟರ್​ಗೆ ಇ-ವಾಹನ ರೂಪ!; ಬೆಂಗಳೂರಿನಲ್ಲಿ ಸಿದ್ಧವಾಯ್ತು ಭಾರತದ ಮೊದಲ ದೇಶೀಯ ತಂತ್ರಜ್ಞಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts