More

    ಭಾರತದ ಯೂಟ್ಯೂಬರ್​​ಗಳಿಗೆ ಕಹಿ ಸುದ್ದಿ : ಜೂನ್​ನಿಂದ ತೆರಿಗೆ ಪಡೆಯಲಿದೆ ಗೂಗಲ್

    ನವದೆಹಲಿ : ಭಾರತ ಮತ್ತು ಅಮೆರಿಕ ಬಿಟ್ಟು ಬೇರೆ ದೇಶಗಳಲ್ಲಿ ಯೂಟ್ಯೂಬ್​ ವಿಡಿಯೋ ಮಾಡಿ ಹಣ ಸಂಪಾದಿಸುತ್ತಿರುವ ನೆಟ್ಟಿಗರಿಗೆ ಗೂಗಲ್ ಕಹಿ ಸುದ್ದಿ ನೀಡಿದೆ. ಬರುವ ಜೂನ್ ತಿಂಗಳಿಂದ ಅಮೆರಿಕ ಆಚೆಯ ಯೂಟ್ಯೂಬರ್​ಗಳಿಗೆ ಪಾವತಿಸುವ ಹಣದಲ್ಲಿ ಶೇ.24 ರಷ್ಟು ತೆರಿಗೆ ಕಡಿತಗೊಳಿಸಬೇಕಾಗುವುದು ಎಂದು ಗೂಗಲ್ ಮಾಹಿತಿ ನೀಡಿದೆ.

    ಯೂಟ್ಯೂಬ್​ ನಡೆಸುವ ಗೂಗಲ್​ ಕಂಪೆನಿ ತನ್ನ ಯೂಟ್ಯೂಬರ್​​ಗಳಿಗೆ ಕಳುಹಿಸಿರುವ ಈಮೇಲ್​ನಲ್ಲಿ, ‘ಅಮೆರಿಕದ ಹೊರಗಿನ ಯೂಟ್ಯೂಬ್​ ವಿಡಿಯೋ ಕ್ರಿಯೇಟರ್​​ಗಳಿಗೆ ಪಾವತಿ ಮಾಡುವ ಹಣದಲ್ಲಿ ಅಮೆರಿಕದ ತೆರಿಗೆಗಳನ್ನು ಕಡಿತಗೊಳಿಸಬೇಕಾಗಿರುವ’ ಬಗ್ಗೆ ತಿಳಿಸಿದೆ. ಹೀಗಾಗಿ ವೀಕ್ಷಕರಿಂದ ಬರುವ ಆದಾಯದ ಮೊತ್ತದಲ್ಲಿ ಭಾರತೀಯ ಮತ್ತು ಅಮೆರಿಕೇತರ ಪ್ರದೇಶಗಳ ಯೂಟ್ಯೂಬರ್​ಗಳ ಆದಾಯದಲ್ಲಿ ಇಳಿಕೆ ಉಂಟಾಗಲಿದೆ.

    ಇದನ್ನೂ ಓದಿ: ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    “ಮುಂದಿನ ಕೆಲವು ವಾರಗಳಲ್ಲಿ ನಿಮ್ಮಿಂದ ಕಡಿತಗೊಳಿಸಬೇಕಾದ ತೆರಿಗೆ ಮೊತ್ತವನ್ನು ನಿರ್ಣಯ ಮಾಡುವುದಕ್ಕಾಗಿ ಆಡ್​​ಸೆನ್ಸ್​​ನಲ್ಲಿ ನಿಮ್ಮ ತೆರಿಗೆ ಮಾಹಿತಿಯನ್ನು ಸಲ್ಲಿಸಲು ನಾವು ಕೇಳಲಿದ್ದೇವೆ. ಮೇ 31, 2021ರೊಳಗೆ ನೀವು ಮಾಹಿತಿ ಸಲ್ಲಿಸದಿದ್ದಲ್ಲಿ ನಿಮ್ಮ ಒಟ್ಟು ಆದಾಯದ ಶೇ. 24 ರಷ್ಟನ್ನು ಗೂಗಲ್ ಕಡಿತ ಮಾಡಬೇಕಾಗುವುದು” ಎಂದು ಅಧಿಕೃತ ಸಂದೇಶದಲ್ಲಿ ಹೇಳಿದೆ.

    ಜಾಹೀರಾತು ವೀಕ್ಷಣೆಗಳು, ಯೂಟ್ಯೂಬ್ ಪ್ರೀಮಿಯಂ, ಸೂಪರ್ ಚಾಟ್, ಸೂಪರ್ ಸ್ಟಿಕ್ಕರ್‌ಗಳು ಮತ್ತು ಚಾನೆಲ್ ಸದಸ್ಯತ್ವಗಳ ಮೂಲಕ ಅಮೆರಿಕದ ವೀಕ್ಷಕರಿಂದ ಗಳಿಸುವ ಆದಾಯದಿಂದ ತೆರಿಗೆಯನ್ನು ಕಡಿತಗೊಳಿಸುವ ಪ್ರಸ್ತಾವನೆ ಇದಾಗಿದೆ. ಒಂದು ಪ್ಲಸ್​ ಪಾಯಿಂಟ್​ ಎಂದರೆ, ಸೂಕ್ತ ತೆರಿಗೆ ದಾಖಲೆಗಳನ್ನು ಒದಗಿಸಿದಲ್ಲಿ ಅಮೆರಿಕದ ಹೊರಗಿನ ವೀಕ್ಷಕರಿಂದ ಸಂಪಾದಿಸುವ ಹಣಕ್ಕೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಆದರೆ ನಿರ್ಲಕ್ಷ್ಯ ವಹಿಸಿದಲ್ಲಿ ಯೂಟ್ಯೂಬ್​​ನಿಂದ ಪಡೆಯುತ್ತಿರುವ ಸಂಪೂರ್ಣ ಮಾಸಿಕ ಗಳಿಕೆಯ ಮೇಲೆ ಶೇ. 24 ತೆರಿಗೆ ಕಟ್ಟಬೇಕು.

    ಇದನ್ನೂ ಓದಿ: ರಾಜ್ಯದ ಜನತೆಗೆ ಎಚ್ಚರಿಕೆಯ ಗಂಟೆ ಬಾರಿಸಿದ ಸಚಿವ ಡಾ.ಸುಧಾಕರ್​!

    ತೆರಿಗೆ ವಿವರ : ಉದಾಹರಣೆಗೆ, ಯೂಟ್ಯೂಬ್​ನಿಂದ ತಿಂಗಳಿಗೆ ಒಟ್ಟು 1000 ಡಾಲರ್ ಸಂಪಾದಿಸುತ್ತಿದ್ದು, ಅದರಲ್ಲಿ 100 ಡಾಲರ್​ ಅಮೆರಿಕದ ವೀಕ್ಷಕರಿಂದ ಬರುತ್ತಿದ್ದರೆ – ತೆರಿಗೆ ಮಾಹಿತಿ ಸಲ್ಲಿಸಿದಲ್ಲಿ ಕೇವಲ 100 ಡಾಲರ್ ಮೇಲೆ ಶೇ. 15 ರಷ್ಟು ಅಂದರೆ 15 ಡಾಲರ್ ಕಟ್ಟಬೇಕು; ತೆರಿಗೆ ಮಾಹಿತಿ ಸಲ್ಲಿಸದಿದ್ದಲ್ಲಿ ಇಡೀ 1000 ಡಾಲರ್ ಮೇಲೆ ಶೇ. 24ರಷ್ಟು ಅಂದರೆ 240 ಡಾಲರ್ ಕಟ್ಟಬೇಕು. ಆದ್ದರಿಂದ ಅಮೆರಿಕದ ವೀಕ್ಷಕರು ಕಡಿಮೆ ಇರುವಂತಹ ಯೂಟ್ಯೂಬರ್​ಗಳೂ ಸೂಕ್ತ ಮಾಹಿತಿ ಸಲ್ಲಿಸಿ ಆದಾಯ ಪೋಲಾಗದಂತೆ ತಡೆಯಬಹುದು ಎಂದು ಗೂಗಲ್ ಎಚ್ಚರಿಸಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬಿಎಸ್​​ಎನ್​ಎಲ್​ : ಹೊಸ ಪ್ರೀಪೇಯ್ಡ್​ ಗ್ರಾಹಕರಿಗೆ ಆಕರ್ಷಕ ಸೌಲಭ್ಯ

    ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !

    VIDEO| ‘ಇದಪ್ಪಾ ನಿಜವಾದ ಕ್ರಿಕೆಟ್​ !’ ಮೈಕೆಲ್ ವಾಘನ್ ಶೇರ್​ ಮಾಡಿದ ವಿಡಿಯೋ ನೋಡಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts