More

    ಗೂಗಲ್ ಪೇಗೂ ಪೇ ಮಾಡ್ಬೇಕು; ಹಣ ಕಳಿಸೋದಕ್ಕೂ ಸದ್ಯದಲ್ಲೇ ಚಾರ್ಜ್​

    ನವದೆಹಲಿ: ಒಂದರಿಂದ ಸಾವಿರಾರು ರೂಪಾಯಿಗಳವರೆಗೆ ಕುಳಿತಲ್ಲಿಂದಲ್ಲೇ ಕ್ಷಣಮಾತ್ರದಲ್ಲಿ ಖರ್ಚಿಲ್ಲದೆ ಕಳುಹಿಸಲು ಅದೆಷ್ಟೋ ಮಂದಿ ಗೂಗಲ್ ಪೇ ಬಳಸುತ್ತಿದ್ದಾರೆ. ಆದರೆ ಹೀಗೆ ಗೂಗಲ್ ಪೇ ಮೂಲಕ ಉಚಿತವಾಗಿ ಹಣ ಕಳುಹಿಸುವ ವ್ಯವಸ್ಥೆ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ!

    ಹೌದು.. ಸದ್ಯದಲ್ಲೇ ಗೂಗಲ್​ ಪೇ ಮೂಲಕ ಹಣ ಕಳುಹಿಸುವುದಕ್ಕೂ ಶುಲ್ಕ ಪಡೆಯಲಾಗುತ್ತದೆ. ಮುಂದೆ ಹಣ ಕಳುಹಿಸುವುದಕ್ಕೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬ ಬಗ್ಗೆ ಗೂಗಲ್ ಪೇ ಸ್ಪಷ್ಟವಾಗಿ ಹೇಳದಿದ್ದರೂ, ಗೂಗಲ್​ ಪೇ ವ್ಯವಸ್ಥೆ ಮುಂದೆ ಉಚಿತವಾಗಿ ಲಭಿಸುವುದಿಲ್ಲ ಎಂಬ ಮಾಹಿತಿಯನ್ನು ಅದು ಬಿಟ್ಟುಕೊಟ್ಟಿದೆ. ಅಮೆರಿಕದ ಬಳಕೆದಾರರಿಗೆ ಸಾಕಷ್ಟು ಹೊಸ ಫೀಚರ್ಸ್​ ಒದಗಿಸಿರುವ ಗೂಗಲ್ ಪೇ ಅಲ್ಲಿನ ತನ್ನ ಲೋಗೋ ಕೂಡ ಬದಲಿಸಿದೆ.

    2021ರ ಜನವರಿಯಿಂದ ಗೂಗಲ್​ ಪೇ ಸದ್ಯದ ಹಣ ವರ್ಗಾವಣೆ ವ್ಯವಸ್ಥೆ ಸ್ಥಗಿತಗೊಳಿಸಲಿದ್ದು, ಬದಲಿಗೆ ಇನ್​ಸ್ಟಂಟ್ ಮನಿ ಟ್ರಾನ್ಸ್​​ಫರ್ ಸಿಸ್ಟಮ್​ ಅಳವಡಿಸಲಿದೆ. ಆ ಬಳಿಕ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆ ಎನ್ನಲಾಗಿದೆ. (ಏಜೆನ್ಸೀಸ್​)

    ಫೆಬ್ರವರಿಯಿಂದ ವ್ಯಾಕ್ಸಿನೇಷನ್ ಆರಂಭ; ಲಸಿಕೆಯ ಪೂರ್ಣ ವೆಚ್ಚ ಭರಿಸಲಿದೆ ಕೇಂದ್ರ- ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ

    Video | ಇಷ್ಟ್​ ಚಿಕ್ ಹುಡುಗ ಸಾಯಿಸ್ತೀನಿ ಅಂದಿದ್ಯಾಕೆ!; ಈ ವಿಡಿಯೋ ನೋಡಿದ್ರೆ ನೀವು ಫಿದಾ ಆಗ್ತೀರಿ!

    ಹಳಿಗೆ ಮರಳಿದ ಶರ್ವಿುಳಾ; ನೋವು ಮರೆಯುವ ಹಾದಿಯಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts