More

    14 ವರ್ಷದ ಮಗಳ ಮೇಲೆ 9 ತಿಂಗಳು ರೇಪ್​ ಮಾಡಿದ ಅಪ್ಪ! ಅಮ್ಮನನ್ನು ಕೊಲೆ ಮಾಡುವುದಾಗಿ ಹೆದರಿಸಿ ಕಾಮದಾಸೆ ತೀರಿಸಿಕೊಳ್ಳುತ್ತಿದ್ದ!

    ವಡೋದರ: ಮಕ್ಕಳನ್ನು ಅಪ್ಪ ಅಮ್ಮ ಸರಿಯಾದ ದಾರಿಯಲ್ಲಿ ಬೆಳೆಸಬೇಕು. ಆದರೆ ಕೆಲವೊಮ್ಮೆ ಅದೇ ಅಪ್ಪ ಅಮ್ಮನೇ ಸರಿಪಡಿಸಲಾಗದಂತಹ ತಪ್ಪುಗಳನ್ನು ಮಾಡಿಬಿಡುತ್ತಾರೆ. ಅದೇ ರೀತಿ ತಪ್ಪು ದಾರಿ ಹಿಡಿದ ತಂದೆಯೊಬ್ಬ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ರೇಪ್​ ಮಾಡಿರುವ ಘಟನೆ ಗುಜರಾತ್​ನ ವಡೋದರದಲ್ಲಿ ನಡೆದಿದೆ.

    ಇದನ್ನೂ ಓದಿ: ಇಲ್ಲಿ ಮದುವೆಗೆ ಹೆಣ್ಣಿನ ಒಪ್ಪಿಗೆ ಬೇಕಿಲ್ಲ; ಕಿಡ್ನಾಪ್​ ಮಾಡಿ ಮದುವೆಯಾದರೆ ಅದು ಕ್ರೈಂ ಅಲ್ಲ

    ಅಪ್ಪ ಅಮ್ಮ ಮತ್ತು ಮೂವರು ಮಕ್ಕಳ ಕುಟುಂಬವದು. ಅಪ್ಪ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಕಳೆದ ಒಂಬತ್ತು ತಿಂಗಳಿನಿಂದ ದುಷ್ಕೃತ್ಯವೊಂದಕ್ಕೆ ಕೈ ಹಾಕಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ 14 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಆಕೆ ವಿರೋಧಿಸಿದ್ದಕ್ಕೆ, ಆಕೆಯ ಅಮ್ಮ ಮತ್ತು ಅಕ್ಕಂದಿರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ.

    ಒಂಬತ್ತು ತಿಂಗಳ ಹಿಂದೆ ಒಮ್ಮೆ ಈ ರೀತಿ ಕಾಮದಾಸೆ ತೀರಿಸಿಕೊಂಡ ಅಪ್ಪನಿಗೆ ಆಮೇಲೆ ಅದು ಚಟವಾಗಿ ಬದಲಾಗಿದೆ. ಆಗಾಗ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಇತ್ತೀಚೆಗೆ ಬಾಲಕಿಯ ಋತುಸ್ರಾವದಲ್ಲಿ ಏರುಪೇರಾಗಿದೆ. ಅದರಿಂದಾಗಿ ತಾಯಿ ಆಕೆಯನ್ನು ಪ್ರಶ್ನಿಸಿದ್ದಾಳೆ. ಆಗ ನಡೆದ ಎಲ್ಲ ಘಟನೆಯನ್ನು ಬಾಲಕಿ ಕಣ್ಣೀರು ಸುರಿಸುತ್ತ ವಿವರಿಸಿದ್ದಾಳೆ. ತನ್ನ ಗಂಡನ ದುಷ್ಟತನವನ್ನು ಅರಿತು, ಆತನನ್ನು ಪ್ರಶ್ನಿಸಿದಾಗ, ‘ಬಾಯಿ ಮುಚ್ಚಿಕೊಂಡಿರು, ಇಲ್ಲವಾದರೆ ಪೂರ್ತಿ ಕುಟುಂಬವನ್ನೇ ಕೊಂದು ಬಿಡುತ್ತೇನೆ’ ಎಂದು ಬೆದರಿಸಿದ್ದಾನೆ.

    ಇದನ್ನೂ ಓದಿ: ಇನ್ಫೋಸಿಸ್ ನಾರಾಯಣಮೂರ್ತಿ ಪುತ್ರಿ ಬ್ರಿಟನ್ ರಾಣಿಗಿಂತ ಶ್ರೀಮಂತೆ! ಆಸ್ತಿ ಮುಚ್ಚಿಟ್ಟಿದ್ದೇ ಈಗ ಆಕೆಯ ಪತಿಗೆ ಕಂಟಕವಾಯ್ತು!

    ಅಪ್ಪನ ಈ ಕ್ರೂರತ್ವವನ್ನು ಕಂಡು ಬೆದರಿದ್ದ ಮೊದಲನೇ ಮಗಳು ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಅಣ್ಣನ ಹೆಂಡತಿ ಜತೆ ತಮ್ಮನ ರೊಮ್ಯಾನ್ಸ್​! ಮೈದುನನಿಗೆ ಮದುವೆ ಫಿಕ್ಸ್​ ಆಗಿದ್ದಕ್ಕೆ ಅತ್ತಿಗೆ ಮಾಡಿದ್ದೇನು ಗೊತ್ತಾ?

    ಹೆಂಡತಿ ಪ್ರೀತಿಯಿಂದ ಮಾಡಿಕೊಟ್ಟ ಟೀ ಕುಡಿದ ಪತಿ ಸಾವು, ಸ್ವಲ್ಪ ಹೊತ್ತಲ್ಲೇ ಆಸ್ಪತ್ರೆ ಸೇರಿದ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts