More

    ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿ ಮೃತ್ಯು

    ಬಂಟ್ವಾಳ: ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಬಿದ್ದು ಯುವತಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ರೈಲ್ವೆ ಸೇತುವೆಯಲ್ಲಿ ನಡೆದಿದೆ.

    ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ನಿವಾಸಿ ನಯನಾ ಎಂ.ಜಿ.(26) ಮೃತಪಟ್ಟವರು. ಯುವತಿ ರೈಲಿನಿಂದ ನದಿಗೆ ಹಾರಿರುವುದಾಗಿ ಹೇಳಲಾಗುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ಮೂಡಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದ್ದು, ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

    ಬೆಳಗ್ಗೆ 6.25ಕ್ಕೆ ಆಗಮಿಸುವ ಬೆಂಗಳೂರು-ಮಂಗಳೂರು-ಕಣ್ಣೂರು ರೈಲಿನಲ್ಲಿ ಬಂದಿದ್ದ ನಯನಾ ಕೈಕುಂಜದ ಸೇತುವೆಯ ಮೇಲೆ ರೈಲಿನ ಚಲನೆ ನಿಧಾನವಾಗುತ್ತಿದ್ದಂತೆ ತಡೆಬೇಲಿ ಇಲ್ಲದ ಜಾಗ ನೋಡಿ ನದಿಗೆ ಧುಮುಕಿರಬಹುದು ಎಂದು ಸಂಶಯಿಸಲಾಗಿದೆ. ಇದನ್ನು ನೋಡಿ ಸಹಪ್ರಯಾಣಿಕರು ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳೀಯ ಜೀವರಕ್ಷಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಗೂಡಿನಬಳಿಯ ನೇತ್ರಾವತಿ ಜೀವರಕ್ಷಕ ತಂಡದ ಸದಸ್ಯರು, ಮೃತದೇಹ ಪತ್ತೆಹಚ್ಚಿ, ದಡಕ್ಕೆ ತಂದಿದ್ದಾರೆ. ಯುವತಿ ಕುಳಿತುಕೊಂಡಿದ್ದ ಸೀಟಿನಲ್ಲಿದ್ದ ಬ್ಯಾಗ್ ಅನ್ನು ರೈಲ್ವೆ ಸಿಬ್ಬಂದಿ ಬಿ.ಸಿ.ರೋಡಿನ ಪೊಲೀಸರಿಗೆ ನೀಡಿ ವಿಚಾರ ತಿಳಿಸಿದ್ದಾರೆ. ಕೇರ್ ಆಫ್ ಎಂ.ವಿ.ಗೋವಿಂದ ರಾಜು, ಪಡಸಾಲಹಟ್ಟಿ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲೂಕು, ತುಮಕೂರು ಜಿಲ್ಲೆ ಹೊಸಕೆರೆ ತುಮಕೂರು ಎಂಬ ವಿಳಾಸ ಹೊಂದಿರುವ ಆಧಾರ್ ಕಾರ್ಡ್ ಮೃತ ಯುವತಿ ಬ್ಯಾಗಿನಲ್ಲಿ ದೊರಕಿದೆ. ಇದರ ಆಧಾರದಲ್ಲಿ ಈಕೆಯ ಹೆಸರು ನಯನಾ ಎಂ.ಜಿ. ಎಂದು ಹೇಳಲಾಗಿದ್ದು, 26 ವರ್ಷದವರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts