ಝಾನ್ಸಿ: ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದ ಇಬ್ಬರು ಹುಡುಗಿಯರ ಪ್ರೇಮಕಥೆ ವಿಚಿತ್ರ ತಿರುವುಗಳನ್ನು ಪಡೆದಿದೆ. ಮೊದಲಿಗೆ ನಿರೀಕ್ಷೆಯಂತೆಯೇ ಇವರು ತಮ್ಮ ಕುಟುಂಬದ ವಿರೋಧವನ್ನು ಎದುರಿಸಿದ್ದರು. ಇದಾದ ಮೇಲೆ ಒಬ್ಬರು ಲಿಂಗ ಪರಿವರ್ತನೆ ಮಾಡಿಸಿಕೊಂಡಾಗ ಎಲ್ಲವೂ ಬದಲಾಗಿದ್ದು ಈಗ ಇಬ್ಬರೂ ಒಬ್ಬರನ್ನು ಒಬ್ಬರು ದ್ವೇಷ ಭಾವನೆಯಿಂದ ನೋಡುತ್ತಿದ್ದಾರೆ.
ಸೋನಲ್ ಎನ್ನುವ ಹುಡುಗಿಯ ಮನೆಗೆ ಸನಾ ಎನ್ನುವಾಕೆ ಪೇಯಿಂಗ್ ಗೆಸ್ಟ್ ಆಗಿ ಆಗಮಿಸಿದ್ದಳು. 2016ರಲ್ಲಿ ಅದೇ ಮನೆಯ ಮೇಲಿನ ಮಹಡಿಯಲ್ಲಿ ತಂಗಿದ್ದರು. ಇಬ್ಬರು ಹುಡುಗಿಯರು ಮೊದಲು ಸ್ನೇಹಿತರಾಗಿದ್ದರು. ಜೊತೆಗೆ ಇದ್ದ ನಾಲ್ಕು ತಿಂಗಳೊಳಗೆ ಅದು ಪ್ರೀತಿಯಾಗಿ ಪರಿವರ್ತನೆ ಆಗಿತ್ತು. ಆದರೆ, ಸೋನಾಲ್‌ನ ಕುಟುಂಬ, ಅವರ ಸಂಬಂಧವನ್ನು ಒಪ್ಪದೇ ಸನಾಳನ್ನು ರೂಂ ಖಾಲಿ ಮಾಡುವಂತೆ ಹೇಳಲಾಗಿತ್ತು.
2017ರರಲ್ಲಿ ಝಾನ್ಸಿಯಲ್ಲಿ ಸರ್ಕಾರಿ ನೌಕರಿ ಮಾಡುತ್ತಿದ್ದ ಸನಾಗೆ ಸರ್ಕಾರದಿಂದ ಕ್ವಾರ್ಟರ್ಸ್ ಲಭ್ಯ ಆಗಿತ್ತು. ಹೀಗಾಗಿ ಆಕೆ ತನ್ನ ಮನೆ ಬಿಟ್ಟು ಅಲ್ಲಿಗೆ ತೆರಳಿದ್ದಳು. ಅದಾದ ಕೆಲವೇ ದಿನಗಳ ನಂತರ ಆಕೆಯೊಡನೆ ಸೋನಲ್ ಕೂಡ ವಾಸಿಸಲು ಶುರು ಮಾಡಿದ್ದಳು. ಮೆಲ್ಲಮೆಲ್ಲನೇ ಸೋನಲ್, ಸನಾಗೆ ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವಂತೆ ಒಪ್ಪಿಸಿದ್ದಾಳೆ.
ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ಸನಾ, ಕಡೆಗೆ 2020ರ ಜೂನ್ ತಿಂಗಳಲ್ಲಿ ತನ್ನ ಹೆಸರನ್ನು ಸೋಹೈಲ್ ಖಾನ್ ಎಂದು ಬದಲಾಯಿಸಿಕೊಂಡಿದ್ದಳು. ಆಸ್ಪತ್ರೆಯ ದಾಖಲೆಗಳಲ್ಲಿ ಸೋನಲ್, ತನ್ನನ್ನು ತಾನು ‘ಸೋಹೈಲ್ ಖಾನ್’ನ ಪತ್ನಿ ಎಂದೇ ಸಹಿ ಹಾಕಿದ್ದಳು. ಈ ನಡುವೆ ಸೋನಲ್ಗೂ ನೌಕರಿ ಮಾಡಬೇಕು ಎಂದು ಆಸೆಯಾಗಿ 2022ರಲ್ಲಿ ಯಥಾರ್ಥ್ ಆಸ್ಪತ್ರೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಳು.
ಆದರೂ, ಸೊಹೈಲ್ ಅಲಿಯಾಸ್ ಸನಾಗೆ ಸೋನಾಲ್‌ನ ನಡವಳಿಕೆಯಲ್ಲಿ ಬದಲಾವಣೆಯನ್ನು ಗಮನಿಸಿದ್ದಾರೆ. ಸೋನಲ್ ಸೋಹೈಲ್ನ ಕಡೆಗೆ ಹೆಚ್ಚಿನ ಗಮನ ನೀಡುತ್ತಿರಲಿಲ್ಲ. ಬದಲಾಗಿ ಆಕೆ ತನ್ನ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯುತ್ತಿದ್ದಳು.
ಇದರಿಂದಾಗಿ ಇಬ್ಬರ ನಡುವೆ ಸಂಬಂಧ ಹದಗೆಟ್ಟಿದೆ. ಸೋನಾಲ್ ತನ್ನ ಸೋಹೈಲ್ ಅಲಿಯಾಸ್ ಸನಾಳನ್ನು ಅವಾಯ್ಡ್ ಮಾಡಲು ಪ್ರಾರಂಭಿಸಿದಳು. ಇದರಿಂದಾಗಿ ಆಗಾಗ್ಗೆ ಅವರ ನಡುವೆ ಜಗಳಗಳಿಗೆ ಕಾರಣವಾಗಿದೆ.
ಒಂದು ರಾತ್ರಿ, ಸೊಹೈಲ್, ಸೋನಾಲ್ ಅಳುವುದನ್ನು ನೋಡಿದ್ದು ಈ ಸಂದರ್ಭ ಆಕೆ ಇಬ್ಬರೊಂದಿಗೆ ಗ್ರೂಪ್ ಕಾಲ್ಲ್ಲಿ ತನ್ನ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿರುವುದನ್ನು ಕೇಳಿಸಿಕೊಂಡಿದ್ದಾನೆ(ಳೆ).
ಈ ನಡುವೆ ಸೋಹೈಲ್ಗೆ ಸೋನಾಲ್ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಜ್ಞಾನ್ ಎಂಬುವವರೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ಸೋನಲ್ಳನ್ನು ಪ್ರಶ್ನಿಸಿದಾಗ, ಸೋನಾಲ್ ಅವರು ಜ್ಞಾನ್ ಜೊತೆ ವಾಸಿಸಲು ಬಯಸಿದ್ದಳು ಎಂದು ಹೇಳಿದ್ದಾಳೆ. ಸೋನಾಲ್, ಶೀಘ್ರದಲ್ಲೇ ಸೊಹೈಲ್ ಅನ್ನು ಬಿಟ್ಟು ಮನೆಗೆ ಮರಳಿದ್ದಾಳೆ. ಇದಾದ ಮೇಲೆ ಆಕೆ ಮತ್ತು ಆಕೆಯ ಕುಟುಂಬದವರು ಸೊಹೈಲ್ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ಕಿರುಕುಳದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದರು.
ಸೋಹೈಲ್ ಪೊಲೀಸರ ಮುಂದೆ ತನ್ನ ಇಡೀ ಕಥೆಯನ್ನು ವಿವರಿಸಿದ್ದಾರೆ. ನಂತರ ಸೋನಾಲ್ಳನ್ನು ವಿಚಾರಣೆಗೆ ಪೊಲೀಸರು ಕರೆದರೂ ಆಕೆ ಹಾಜರಾಗಲಿಲ್ಲ. ನಂತರ ಸೊಹೈಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಸೋನಾಲ್, ನ್ಯಾಯಾಲಯದ ಮುಂದೆ ಹಾಜರಾಗುವುದನ್ನು ತಪ್ಪಿಸಿದ್ದರು. ಜನವರಿ 18ರಂದು ಸೋನಾಲ್ ಅವರನ್ನು ಬಂಧಿಸಲಾಗಿದ್ದು ಈಗ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಮುಂದಿನ ವಿಚಾರಣೆ ಫೆಬ್ರವರಿ 23ರಂದು ನಡೆಯಲಿದೆ. (ಏಜೆನ್ಸೀಸ್)