More

    ಕಾರು ತಡೆದ ಟ್ರಾಫಿಕ್​ ಪೊಲೀಸ್​: ನಡುರಸ್ತೆಯಲ್ಲೇ ಯುವತಿಯಿಂದ ಭಾರೀ ಹೈಡ್ರಾಮ, ವಿಡಿಯೋ ವೈರಲ್​

    ನವದೆಹಲಿ: ಟ್ರಾಫಿಕ್ ಪೊಲೀಸರು ಪ್ರಾಥಮಿಕವಾಗಿ ರಸ್ತೆ ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ಸಂಚಾರ ನಿಯಮಗಳ ಜಾರಿ ಹಾಗೂ ದಿನವಿಡೀ ಸಂಚಾರ ನಿರ್ವಹಣೆಯೇ ಅವರ ಮುಖ್ಯ ಕರ್ತವ್ಯವಾಗಿರುತ್ತದೆ. ಹೀಗಿದ್ದರೂ ಸಂಚಾರ ನಿಯಮ ಉಲ್ಲಂಘನೆಯ ವರದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.

    ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಕಟ್ಟಿಹಾಕಲೆಂದೇ ಸರ್ಕಾರ ಮೋಟಾರು ವಾಹನ ನಿಯಮಗಳನ್ನು ಜಾರಿ ಮಾರಿದೆ. ಇದರ ಪ್ರಕಾರ ವಾಹನ ಚಾಲಕನ ಬಳಿ ಡ್ರೈವಿಂಗ್ ಲೈಸೆನ್ಸ್, ಮೋಟಾರು ವಾಹನ ನೋಂದಣಿ ಪತ್ರಗಳು, ವಿಮೆ ಸೇರಿದಂತೆ ಕೆಲವು ಪ್ರಮಾಣಪತ್ರಗಳು ಇರಲೇಬೇಕು. ಈ ದಾಖಲೆಗಳನ್ನು ಪರಿಶೀಲಿಸುವುದೇ ಸಂಚಾರಿ ಪೊಲೀಸರು ಕರ್ತವ್ಯವು ಆಗಿದೆ. ಇದಕ್ಕೆ ವಾಹನ ಸವಾರರು ಕೂಡ ಸಹಕರಿಸಬೇಕು. ಆದರೆ, ಕೆಲವು ಸಂದರ್ಭದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ನಡೆಯುತ್ತದೆ. ಅದಕ್ಕೆ ಪೊಲೀಸರು ಮತ್ತು ಸವಾರರು ಇಬ್ಬರು ಒಂದೊಂದು ಸಂದರ್ಭದಲ್ಲಿ ಕಾರಣರಾಗುತ್ತಾರೆ. ರಸ್ತೆಯಲ್ಲೇ ಕಚ್ಚಾಡುವ ಘಟನೆಗಳು ಸಾಮಾನ್ಯವಾಗಿರುತ್ತವೆ.

    ಇದನ್ನೂ ಓದಿ: ನಾರಿಶಕ್ತಿ ಸಂಭ್ರಮ: ಮಹಿಳಾ ದಿನದ ವಿಶೇಷ, ವರ್ಷದ ಮಹಿಳೆ ಪ್ರಶಸ್ತಿ

    ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಯಲ್ಲೇ ಕುಳಿತು ಹೈಡ್ರಾಮ ಮಾಡಿದ್ದಾಳೆ. ಪೊಲೀಸ್​ ಸಿಬ್ಬಂದಿ ಕಾರನ್ನು ತಡೆದು ದಾಖಲೆಗಳನ್ನು ಕೇಳಿದ್ದಕ್ಕೆ ಅಸಮಾಧಾನಗೊಂಡ ಯುವತಿ ಪೊಲೀಸ್​ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದು, ನಡು ರಸ್ತೆಯಲ್ಲೇ ರಂಪಾಟ ಮಾಡಿದ್ದಾಳೆ.

    ವಿಡಿಯೋದಲ್ಲಿ ಏನಿದೆ?
    ವಿಡಿಯೋದಲ್ಲಿ ಹುಡುಗಿಯರ ಗುಂಪು ಮುಖಕ್ಕೆ ಮುಖವಾಡಗಳನ್ನು ಹಾಕಿಕೊಂಡು ಕಾರಿನೊಳಗೆ ಕುಳಿತಿರುವುದು ಕಂಡುಬರುತ್ತದೆ. ಕಾರನ್ನು ಚೆಕ್​ಪಾಯಿಂಟ್​ನಲ್ಲಿ ಪೊಲೀಸ್​ ಸಿಬ್ಬಂದಿ ದಾಖಲೆಗಳನ್ನು ಕೇಳುವಾಗ ಕಾರನ್ನು ಓಡಿಸುವ ಯುವತಿ, “ನೀವು ಏನು ಅವಿವೇಕದ ಕೆಲಸ ಮಾಡುತ್ತಿದ್ದೀರಿ?” ಎಂದು ಕೂಗುತ್ತಾಳೆ. ಬಳಿಕ ಕೋಪಗೊಳ್ಳುವ ಯುವತಿ ಪೇಪರ್‌ಗಳನ್ನು ಕಿಟಕಿಯಿಂದ ಹೊರಗೆ ರಸ್ತೆಯ ಮೇಲೆ ಎಸೆದು, ನೀವೆಲ್ಲರೂ ಅಪಾರ ತೊಂದರೆಯನ್ನು ಸೃಷ್ಟಿಸುತ್ತಿದ್ದೀರಿ ಎಂದು ಪೊಲೀಸ್​ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕುತ್ತಾಳೆ. ಓರ್ವ ಪೊಲೀಸ್​ ಸಿಬ್ಬಂದಿ ಯುವತಿಯ ಅಸಭ್ಯತೆಯನ್ನು ಪ್ರಶ್ನಿಸಿದಾಗ, ಹಿಂದಿನಿಂದ ಇನ್ನೊಬ್ಬ ಹುಡುಗಿ ಕಾರಿನಿಂದ ಕೆಳಗಿಳಿದು ರಸ್ತೆಯಿಂದ ಪೇಪರ್​ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾಳೆ. ಆದರೆ, ಕಾರು ಚಲಾಯಿಸುತ್ತಿದ್ದ ಯುವತಿ ಕಾರಿನ ಬಾಗಿಲನ್ನು ತೆಗೆದು, ಜೋರಾಗಿ ಮುಚ್ಚಿ, ಜೋರಾಗಿ ಕೂಗುತ್ತಾ ಪೊಲೀಸರತ್ತ ಹೆಜ್ಜೆ ಹಾಕುತ್ತಾಳೆ. ಕೂಗಾಡುತ್ತಲೇ ಕಣ್ಣೀರು ಸುರಿಸುತ್ತಾಳೆ ಮತ್ತು ಕಾರಿನ ಬಾಗಿಲಿಗೆ ಒರಗಿಕೊಂಡು ನಡುರಸ್ತೆಯಲ್ಲಿ ಆಕೆ ಕುಳಿತುಕೊಳ್ಳುತ್ತಾಳೆ. ಪೊಲೀಸರು ಆಕೆಯ ವರ್ತನೆಯನ್ನು ನೋಡಿ ಆಶ್ಚರ್ಯಚಕಿತರಾಗಿ, ಅವಳು ಏಕೆ ಇಂತಹ ಕೆಲಸಗಳನ್ನು ಮಾಡುತ್ತಿದ್ದಾಳೆ ಎಂದು ಕೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಈ ಹೈಡ್ರಾಮ ಸ್ವಲ್ಪ ಸಮಯದವರೆಗೆ ಮುಂದುವರಿಯುತ್ತದೆ ಮತ್ತು ಪೊಲೀಸರು ತನ್ನ ಕಾರಿನೊಳಗೆ ಹೋಗುವಂತೆ ಯುವತಿಯನ್ನು ಕೇಳಿಕೊಳ್ಳುತ್ತಾರೆ. ಅಲ್ಲಿಗೆ ಆಕೆಯ ಹೈಡ್ರಾಮಕ್ಕೆ ತೆರೆ ಬೀಳುತ್ತದೆ ಮತ್ತು ಪೊಲೀಸರು ಕೂಡ ನಿಟ್ಟುಸಿರುವ ಬಿಡುತ್ತಾರೆ.

    ಇದನ್ನೂ ಓದಿ: ನಾಳೆ ದ್ವಿತೀಯ ಪಿಯು ಪರೀಕ್ಷೆ ಆರಂಭ; 35 ಪರೀಕ್ಷಾ ಕೇಂದ್ರದಲ್ಲಿ ಸಕಲ ಸಿದ್ಧತೆ

    ವಿಡಿಯೋವನ್ನು ಘರ್​ ಕೆ ಕಲೇಶ್​ ಹೆಸರಿನ ಟ್ವಿಟರ್​ ಪೇಜ್​ನಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಒಂದು ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. ಬಹುಶಃ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ವಾಹನಗಳ ಚಲನೆಯನ್ನು ನಿರ್ಬಂಧಿಸಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇದೀಗ ಆ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರಿಗೆ ಸಹಕರಿಸದ ಯುವತಿಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ದಕ್ಷಿಣ ಭಾರತ ಸಿನಿಮಾರಂಗದಿಂದ ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಬ್ಯಾನ್​! ಕಾರಣ ಹೀಗಿದೆ….

    ರಾಜ್ಯಕ್ಕೆ ಹೊಕ್ಕಿರುವ ಘನತ್ಯಾಜ್ಯ ಭೂತ: ಪ್ರತಿದಿನ 11,044 ಟನ್ ಉತ್ಪಾದನೆ

    ಪರೀಕ್ಷೆ ಸಮಯದಲ್ಲೂ ನೆಮ್ಮದಿ ಹೇಗೆ!?; ಇಲ್ಲಿದೆ ಮಕ್ಕಳಿಗೆ ಸಲಹೆ-ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts