More

    ಸಂಚಾರಿ ನಿಯಮ ಪಾಲಿಸಿ ಅಪಘಾತ ತಪ್ಪಿಸಿ

    ಮುಂಡರಗಿ: ಪ್ರತಿಯೊಬ್ಬರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಎಲ್ಲ ಸವಾರರು ಸುರಕ್ಷಿತವಾಗಿ ಸಂಚರಿಸಬಹುದು. ಸುರಕ್ಷತಾ ದೃಷ್ಟಿಯಿಂದ ಪಟ್ಟಣದ ಪ್ರಮುಖ ಸರ್ಕಲ್‌ಗಳಲ್ಲಿ ಥರ್ಡ್ ಐ ಸಿಸಿ ಕ್ಯಾಮಾರಾ ಅಳವಡಿಸಲಾಗಿದೆ ಎಂದು ಪಿಎಸ್‌ಐ ಸುಮಾ ಗೊರಬಾಳ ಹೇಳಿದರು.

    ಪಟ್ಟಣದಲ್ಲಿ ಶುಕ್ರವಾರ ಬೈಕ್ ಸವಾರರಿಗೆ ಹೂವು ನೀಡುವ ಮೂಲಕ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಥರ್ಡ್ ಐ ಸಿಸಿ ಕ್ಯಾಮಾರಾ ಮೂಲಕ ಹೆಲ್ಮೆಟ್ ಧರಿಸದಿರುವರು, ತ್ರಿಬಲ್ ರೈಡಿಂಗ್, ಕಾರ್‌ನಲ್ಲಿ ಸೀಟ್‌ಬೆಲ್ಟ್ ಹಾಕದವರ ಬಗ್ಗೆ ವಾಹನದ ನಂಬರ್ ಮೂಲಕವೇ ಮಾಲೀಕರ ಮನೆಗೆ ದಂಡದ ನೋಟಿಸ್ ಹೋಗಲಿದೆ. ಈ ಬಗ್ಗೆ ಜಾಗೃತಿ ಹೊಂದುವ ಮೂಲಕ ತಪ್ಪದೆ ಸಂಚಾರ ನಿಯಮವನ್ನು ಪಾಲಿಸಬೇಕು ಎಂದರು.

    ಹೆಲ್ಮೆಟ್ ಧರಿಸಿದ ಬೈಕ್ ಸವಾರರಿಗೆ ಹೂನೀಡಿ ಶುಭ ಕೋರಿದರು. ಪೊಲೀಸ್ ಸಿಬ್ಬಂದಿ ಎನ್.ಬಿ. ಪೂಜಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts