More

    ನ.1 ರಿಂದ ರೈತರಿಗೆ ಬೆಳೆ ಸಾಲದ ಪ್ರಕ್ರಿಯೆ ಸರಳ; ಸುಲಭ ಆನ್​ಲೈನ್​ ಸಲ್ಲಿಕೆಗೆ FRUITS ತಂತ್ರಾಂಶ!

    ಬೆಂಗಳೂರು: ರೈತರು ಬೆಳೆ ಸಾಲ ಪಡೆಯಲು ಇದೀಗ ಮತ್ತಷ್ಟು ಸರಳ ಪ್ರಕ್ರಿಯೆ ರೂಪಿಸಲಾಗಿದೆ. ಕೃಷಿ ಸಾಲ ಪಡೆಯಲು ರೈತರು ಬ್ಯಾಂಕಿನಿಂದ ನಮೂನೆ-3 ಘೋಷಣಾ ಪ್ರಮಾಣ ಪತ್ರವನ್ನು ಉಪ ನೋಂದಣಾಧಿಕಾರಿಗಳ ಕಚೇರಿಗೆ ಖುದ್ದು ಹೋಗಿ ಸಲ್ಲಿಸಿ ಪಹಣಿಯಲ್ಲಿ ನಮೂದಿಸುವ ಅಗತ್ಯವಿಲ್ಲ. ಇದೀಗ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಇ-ಆಡಳಿತ ಇಲಾಖೆಯ ಫ್ರೂಟ್ಸ್ ವೆಬ್‌ಸೈಟ್‌ಗೆ ಸಂಯೋಜನೆ ಮಾಡಲಾಗಿದೆ.

    ಈ FRUITS ತಂತ್ರಾಂಶದ ಮೂಲಕ ಆನ್​​ಲೈನ್​ ಮುಖಾಂತರ ಡಿಜಿಟಲ್ ಸಹಿವುಳ್ಳ ಘೋಷಣಾ ಪತ್ರವನ್ನು (ಫಾರಂ-3) ಉಪನೋಂದಣಿ ಕಚೇರಿಗಳಲ್ಲೇ ಕಾವೇರಿ ತಂತ್ರಾಂಶದಲ್ಲಿ ಫೈಲಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಇದನ್ನು ಪ್ರಾಯೋಗಿಕವಾಗಿ ದಾವಣಗೆರೆ, ಚಿಕ್ಕಬಳ್ಳಾಪುರ, ಅಥಣಿ, ಹುಬ್ಬಳ್ಳಿ ಉತ್ತರ, ಪಾವಗಡ ಮತ್ತು ರಾಯಚೂರು ಜಿಲ್ಲೆಯ ಎಲ್ಲ ಉಪನೋಂದಣಿ ಕಚೇರಿಗಳಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಈ ಯೋಜನೆ ಯಶಸ್ವಿಯಾಗಿದ್ದು, ರಾಜ್ಯದ ಎಲ್ಲ ಉಪನೋಂದಣಿ ಕಚೇರಿಗಳಲ್ಲಿ ನ.1 ರಿಂದ ಇದನ್ನು ಕಡ್ಡಾಯ ಮಾಡಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಪಿ.ಎನ್.ರವೀಂದ್ರ ಸುತ್ತೋಲೆ ಹೊರಡಿಸಿದ್ದಾರೆ.

    ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯಿತು #KFCಕನ್ನಡಬೇಕು!

    ಈ ಮೊದಲು ರೈತರು ಸಾಲ ಪಡೆದ ಮೇಲೆ ಉಪನೋಂದಣಿ ಕಚೇರಿಗೆ ಖುದ್ದು ಹೋಗಿ ನಮೂನೆ-3 ಅನ್ವಯ ಘೋಷಣಾ ಪ್ರಮಾಣ ಪತ್ರ ಸಲ್ಲಿಸಿ ಪಹಣಿಯಲ್ಲಿ ನಮೂದಿಸಬೇಕಿತ್ತು. ಆನಂತರ ಸಾಲ ತೀರಿದ ಮೇಲೆ ಪಹಣಿಯಿಂದ ಕೈಬಿಡಲು ಸಹ ನಮೂನೆ-3 ಸಲ್ಲಿಸಬೇಕಿತ್ತು. ಈ ಪ್ರಕ್ರಿಯೆ ವಿಳಂಬ ಆಗುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಫ್ರೂಟ್ಸ್​ ವೆಬ್‌ಸೈಟ್ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜಿಸಲಾಗಿದೆ. ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬಹುದು ಎಂದಿದ್ದಾರೆ.

    ಬಿಸಿಸಿಐಗೆ ದೇಶಾಭಿಮಾನ ಇಲ್ವಾ? ಅಂಥವರ ಜತೆ ಆಟ ಆಡೋದೇ ನಿರ್ಲಜ್ಜ ಎಂದ ಪ್ರಮೋದ್​ ಮುತಾಲಿಕ್

    ಆಳಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದ ಜೀವಂತ ತಿಮಿಂಗಿಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts