More

    ಬಿಸಿಸಿಐಗೆ ದೇಶಾಭಿಮಾನ ಇಲ್ವಾ? ಅಂಥವರ ಜತೆ ಆಟ ಆಡೋದೇ ನಿರ್ಲಜ್ಜ ಎಂದ ಪ್ರಮೋದ್​ ಮುತಾಲಿಕ್

    ಧಾರವಾಡ: ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್​ ತಂಡ ಗೆದ್ದ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಸಂಭ್ರಮಾಚರಣೆ ಮಾಡಿರುವ ಬಗ್ಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದುಬೈನಲ್ಲಿ ನಡೆದ ಕ್ರಿಕೆಟ್​​ನಲ್ಲಿ ಭಾರತ ಸೋತಿದ್ದಕ್ಕೆ ಭಾರತದಲ್ಲಿ ಕೆಲ ದೇಶದ್ರೋಹಿಗಳು ವಿಜೃಂಭಿಸಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದಿದ್ದಾರೆ. ಇದು ದೇಶದ್ರೋಹಿ‌ ಕೃತ್ಯ” ಎಂದು ಅವರು ಖಂಡಿಸಿದ್ದಾರೆ.

    ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್​, ಕಾಶ್ಮೀರದ ಮೆಡಿಕಲ್ ವಿದ್ಯಾರ್ಥಿನಿಯರು ಪಾಕಿಸ್ತಾನ ಪರ ಘೋಷಣೆ ಹಾಕಿದ್ದಾರೆ. ಇವರು ಭಾರತದ ಅನ್ನ ತಿಂದು ಪಾಕಿಸ್ತಾನ ಪರ ಮಾತನಾಡುತ್ತಾರೆ. ನಾಳೆ ಇವರೇ ಡಾಕ್ಟರ್ ಆಗಿ ಭಾರತೀಯರ ಚಿಕಿತ್ಸೆ ಹೇಗೆ ಮಾಡ್ತಾರೆ. ಇಂತಹ ಮಾನಸಿಕತೆ ಇರುವವರು ಅಪಾಯಕಾರಿ ಎಂದರು.

    ಇದನ್ನೂ ಓದಿ: ಗೃಹ ಸಚಿವ ಅಮಿತ್​ ಷಾ ಭೇಟಿ ಸಂದರ್ಭದಲ್ಲೇ ಪಾಕ್​ ವಿಜಯೋತ್ಸವ!

    “ಇದೇ ರೀತಿ ರಾಜಸ್ಥಾನದಲ್ಲಿ ಒಬ್ಬ ಟೀಚರ್ ಸಹ ಸಂಭ್ರಮಿಸಿದ್ದಾರೆ. ಇವರು ವಿದ್ಯಾರ್ಥಿಗಳಿಗೆ ಏನು ಪಾಠ ಮಾಡಬಹುದು.. ಪಾಕಿಸ್ತಾನ ಗೆದ್ದ ಸಂದರ್ಭದಲ್ಲಿ ಕೆಲವು ಮುಸ್ಲಿಮರು ಹೀಗೆ ಘೋಷಣೆ ಹಾಕಿದ್ದು ಅಪಾಯಕಾರಿ” ಎಂದಿರುವ ಮುತಾಲಿಕ್,​ ಭಾರತ ತಂಡ ಪಾಕಿಸ್ತಾನದ ಮೇಲೆ ಕ್ರಿಕೆಟ್​ ಆಡಲೇಬಾರದಿತ್ತು ಎಂದಿದ್ದಾರೆ.

    “ಇವರು ಕ್ರಿಕೆಟ್​​ನೇ ಆಡಬಾರದಿತ್ತು. ಪಾಕಿಸ್ತಾನ ಗಡಿಯಲ್ಲಿ ನಮ್ಮ ಸೈನಿಕರ ಮೇಲೆ ಹಾಗೂ ನಾಗರೀಕರ ಮೇಲೆ ಗುಂಡು ಹಾರಿಸುತ್ತಿದ್ದಾರೆ. ಅಂಥವರ ಜೊತೆ ಭಾರತ ಆಟ ಆಡುವುದೇ ನಿರ್ಲಜ್ಜ ಸಂಗತಿ. ಬಿಸಿಸಿಐಗೆ ದೇಶಾಭಿಮಾನ ಇಲ್ಲವಾ?” ಎಂದು ಪ್ರಶ್ನಿಸಿದ ಮುತಾಲಿಕ್, ಪಾಕಿಸ್ತಾನ ಪರ ಮಾನಸಿಕತೆ ಅತ್ಯಂತ ಅಪಾಯಕಾರಿ. ನಮ್ಮ ದೇಶದ ದೇಶ ಭಕ್ತರು ಈ ಮಾನಸಿಕತೆ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದರು. (ದಿಗ್ವಿಜಯ ನ್ಯೂಸ್)

    ಬನಿಯನ್ನಲ್ಲಿ ಬ್ಲೂಟೂತ್​ ಡಿವೈಸ್​! ಪರೀಕ್ಷೆಯಲ್ಲಿ ನಕಲು ಮಾಡಲು ಹೈಟೆಕ್​ ಮಾರ್ಗ!

    ನದಿಯಲ್ಲಿ ಮೀನು ಹಿಡಿಯಲು ಹೋದ ಬಾಲಕನನ್ನು ಎಳೆದೊಯ್ದ ಮೊಸಳೆ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts