More

    ಶಿಕ್ಷಕಿ, ಆಕೆಯ ಪತಿಗೆ 14 ಲಕ್ಷ ರೂ. ವಂಚನೆ

    ಶಿವಮೊಗ್ಗ: ಆನ್‌ಲೈನ್‌ಲ್ಲಿ ಪಾರ್ಟ್‌ಟೈಮ್ ಕೆಲಸ ಹುಡುಕುತ್ತಿದ್ದ ಶಿಕ್ಷಕಿಗೆ ಮತ್ತು ಆಕೆಯ ಪತಿಗೆ 14 ಲಕ್ಷ ರೂ. ವಂಚಿಸಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಕೆಲಸದ ಬಗ್ಗೆ ಹುಡುಕಾಟ ನಡೆಸಿದ್ದಾಗ ಶಿಕ್ಷಕಿ ವಾಟ್ಸ್‌ಆ್ಯಪ್ ನಂಬರ್‌ಗೆ ಆನ್‌ಲೈನ್ ಕೆಲಸದ ಬಗ್ಗೆ ಮಾಹಿತಿ ಬಂದಿತ್ತು. ಆ ಲಿಂಕ್ ಅನ್ನು ತೆರೆದ ಬಳಿಕ ಸಂಸ್ಥೆಯೊಂದರ ಹೆಸರಲ್ಲಿ ಐಡಿ ಕ್ರಿಯೇಟ್ ಮಾಡಿ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿತ್ತು. ಪ್ರತಿ ಟಾಸ್ಕ್‌ಗೆ ಹಣ ಪಾವತಿಸಿಕೊಂಡು ಲಾಭಾಂಶ ವರ್ಗಾಯಿಸಲಾಗಿತ್ತು.
    ಆನಂತರ ಶಿಕ್ಷಕಿಯ ಖಾತೆಯಿಂದ 10 ಸಾವಿರ ರೂ. ಹಾಗೂ ಆಕೆಯ ಪತಿಯ ಬ್ಯಾಂಕ್ ಖಾತೆಯಿಂದ 13.93 ಲಕ್ಷ ರೂ. ವರ್ಗಾಯಿಸಿಕೊಳ್ಳಲಾಗಿದೆ. ಶಿಕ್ಷಕಿ ನೀಡಿದ ದೂರಿನ ಮೇರೆಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts