More

    ಮನೆಯಲ್ಲಿಯೇ ಕುಳಿತು PF ಹಣವನ್ನು ಹಿಂಪಡೆಯುವುದು ಹೇಗೆ? ಇಲ್ಲಿದೆ ಹಂತ ಹಂತದ ಪ್ರಕ್ರಿಯೆ

    ಬೆಂಗಳೂರು: ಹೆಚ್ಚಿನ ಉದ್ಯೋಗಿಗಳು ತಮ್ಮ ನಿವೃತ್ತಿಯ ನಂತರ ಪಿಎಫ್ ಹಣವನ್ನು ಬಳಸಲು ಬಯಸುತ್ತಾರೆ. ಆದರೆ, ಕೆಲವರು ತಮ್ಮ ಅಗತ್ಯದ ಸಮಯದಲ್ಲಿ ಪಿಎಫ್ ಹಣವನ್ನು ಹಿಂಪಡೆಯಲು ಇಷ್ಟಪಡುತ್ತಾರೆ. ನಿಮ್ಮ ನಿವೃತ್ತಿಯ ಮೊದಲೇ ಉಪಯುಕ್ತವಾದ ಪಿಎಫ್ (ಭವಿಷ್ಯ ನಿಧಿ) ಹಣವನ್ನು ಹಿಂಪಡೆಯಲು ನೀವು ಬಯಸಿದರೆ, ಅದು ಕಷ್ಟವೇನಲ್ಲ. ಆನ್‌ಲೈನ್ ವಿಧಾನದಲ್ಲಿ ನೀವು ಪ್ರಾವಿಡೆಂಟ್ ಫಂಡ್ ಅಂದರೆ ಪಿಎಫ್ ಹಣವನ್ನು ಅಗತ್ಯವಿರುವ ಸಮಯದಲ್ಲಿ ಸುಲಭವಾಗಿ ಹಿಂಪಡೆಯಬಹುದು.

    ಹೌದು…ನೀವು ಬಯಸಿದರೆ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಪಿಎಫ್ ಹಣವನ್ನು ಹಿಂಪಡೆಯಬಹುದು. ಆದರೆ ಇದಕ್ಕೂ ಮೊದಲು ನೀವು ಇಪಿಎಫ್ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ಅಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರವೇ ನೀವು ಹಣವನ್ನು ಹಿಂಪಡೆಯಬಹುದು. ಪಿಎಫ್ ಹಣವನ್ನು ಹಿಂಪಡೆಯುವ ಆ ಮಾರ್ಗ ಯಾವುದು ತಿಳಿಯೋಣ ಬನ್ನಿ…

    ಲಾಗಿನ್ ಆಗಿ
    *EPFO ನ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
    *EPF ಖಾತೆಗೆ ಲಾಗಿನ್ ಮಾಡಲು UAN ಮತ್ತು ಪಾಸ್‌ವರ್ಡ್ ಬಳಸಿ.
    * ಲಾಗಿನ್ ಅನ್ನು ದೃಢೀಕರಿಸಲು ಕ್ಯಾಪ್ಚಾ ನಮೂದಿಸಿ.
    * ಲಭ್ಯವಿರುವ ಆಯ್ಕೆಗಳಿಂದ ‘ಮ್ಯಾನೇಜ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
    * ಇದರ ನಂತರ ‘KYC’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
    * ಈಗ ಆನ್‌ಲೈನ್ ಸೇವೆಯ ಆಯ್ಕೆ ಇರುತ್ತದೆ, ಅದನ್ನು ಆಯ್ಕೆಮಾಡಿ.
    * ಕ್ಲೈಮ್ ಫಾರ್ಮ್ ಅನ್ನು ಭರ್ತಿ ಮಾಡಿ
    * ಮುಂದುವರಿಯುತ್ತಾ Claim (Form 31, 19 ಮತ್ತು 10 ಸಿ)’ ಆಯ್ಕೆಮಾಡಿ.
    * ಪುಟದಲ್ಲಿ ತೋರಿಸಿರುವ ಮಾಹಿತಿಯನ್ನು ಪರಿಶೀಲಿಸಿ.
    * ಈ ಸಮಯದಲ್ಲಿ KYC ಮತ್ತು ಹೆಚ್ಚುವರಿ ಸೇವೆಗಳ ಬಗ್ಗೆ ಮಾಹಿತಿಯನ್ನು ಪರಿಶೀಲಿಸಿ.
    * ನಿಮ್ಮ ನೋಂದಾಯಿತ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕಿಗಳನ್ನು ನಮೂದಿಸಿ ಮತ್ತು ಪರಿಶೀಲಿಸು ಕ್ಲಿಕ್ ಮಾಡಿ.

    ಮುಂದಿನ ಪ್ರಕ್ರಿಯೆಯಲ್ಲಿ ನೀವು ಇಪಿಎಫ್ ಕ್ಲೈಮ್ ಮೊತ್ತವನ್ನು ನಮೂದಿಸಿದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳುವ ನಿಮ್ಮ ಆನ್‌ಲೈನ್ ಅಂಡರ್‌ಟೇಕಿಂಗ್ ಪ್ರಮಾಣಪತ್ರಕ್ಕಾಗಿ ‘Yes’ ಆಯ್ಕೆ ಮಾಡಬೇಕಾಗುತ್ತದೆ.

    ಇದರ ನಂತರ ‘Proceed for Online Claim’ ಮೇಲೆ ಕ್ಲಿಕ್ ಮಾಡಿ. ನಿಮಗೆ Full EPF Settlement, EPF Part Withdrawal ಮತ್ತು ಅವಶ್ಯಕತೆಗೆ ಅನುಗುಣವಾಗಿ Pension Withdrawal ಆಯ್ಕೆಗಳನ್ನು ತೋರಿಸಲಾಗುತ್ತದೆ. ಇವುಗಳಲ್ಲಿ ಒಂದನ್ನು ನೀವು ಮುಂದೆ ಅಪ್ಲೈ ಮಾಡಬಹುದು. ಈಗ ಅಗತ್ಯವಿರುವ ಮೊತ್ತವನ್ನು ನಮೂದಿಸಿ.

    ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. Withdrawal ಪೂರ್ಣಗೊಳ್ಳುವ ಮೊದಲು ಉದ್ಯೋಗದಾತರು ಈ ರಿಕ್ವಸ್ಟ್ ಅನ್ನು ಸಹ ಅನುಮೋದಿಸಬೇಕು. ನೀವು ಅರ್ಜಿ ಸಲ್ಲಿಸಿದ ನಂತರ 15 ರಿಂದ 20 ದಿನಗಳಲ್ಲಿ ನಿಮ್ಮ ಖಾತೆಗೆ ಅವರು ಹಣವನ್ನು ಕಳುಹಿಸಬಹುದು.

    ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
    ನೀವು ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಬಯಸಿದರೆ ಅದನ್ನು SMS ಮೂಲಕ ತಿಳಿದುಕೊಳ್ಳಬಹುದು. ನಿಮ್ಮ PF ಖಾತೆಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಯಿಂದ 011 22901406 ಡಯಲ್ ಮಾಡಿ. ಇದಾದ ನಂತರ, ಸಂದೇಶದ ಮೂಲಕ ನಿಮ್ಮ ಫೋನ್‌ಗೆ ಪಿಎಫ್ ಬ್ಯಾಲೆನ್ಸ್ ಕುರಿತು ಮಾಹಿತಿ ಬರುತ್ತದೆ.

    ಪ್ರಧಾನ ಮಂತ್ರಿಯಿಂದ ಮುಖ್ಯ ನ್ಯಾಯಮೂರ್ತಿಯವರೆಗೆ…ಉನ್ನತ ಹುದ್ದೆಗಳನ್ನು ಅಲಂಕರಿಸಿದ ಭಾರತದ ಮೊದಲ ಮಹಿಳೆಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts