More

    ಕೆಪಿಎಸ್‌ಸಿಯಿಂದ ಗ್ರೂಪ್ ‘ಬಿ’ಗೆ ನೇಮಕಾತಿ; ಸ್ಪರ್ಧಾ ಪರೀಕ್ಷೆ ಮೂಲಕ ಹುದ್ದೆಗಳ ಭರ್ತಿ

    ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರಿ ಇಲಾಖೆಗಳಿಗೆ ನೇಮಕಾತಿ ನಡೆಸುವ ಗುರಿ ಹೊಂದಿದೆ. ಇತ್ತೀಚೆಗೆ ಗ್ರೂಪ್ ಎ ಹಾಗೂ ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದ ಆಯೋಗವು, ಇದೀಗ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಮತ್ತಷ್ಟು ಗ್ರೂಪ್-ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಸರ್ಕಾರಿ ನೌಕರಿಯ ಕನಸು ಕಂಡಿರುವ ಹಲವರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದಾಗಿದ್ದು, ಹುದ್ದೆಯ ಸಂಪೂರ್ಣ ವಿವರ ಇಲ್ಲಿದೆ.

    ಒಟ್ಟು ಹುದ್ದೆ: 327

    ಹುದ್ದೆ ವಿವರ
    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 100
    ಜಲ ಸಂಪನ್ಮೂಲ ಇಲಾಖೆ 90
    ಭೂಮಾಪನ, ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಇಲಾಖೆ 27
    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 40
    ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ 23
    ಜಲಸಂಪನ್ಮೂಲ ಇಲಾಖೆ 10
    ಕಾರ್ಖಾನೆ, ಬಾಯ್ಲರ್ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ 12
    ಅಂತರ್ಜಲ ನಿರ್ದೇಶನಾಲಯ 25

    ಹುದ್ದೆ ಹೆಸರು: ಸಹಾಯಕ ಇಂಜಿನಿಯರ್(ಸಿವಿಲ್), ಸಹಾಯಕ ನಿರ್ದೇಶಕರು(ಕಾರ್ಖಾನೆ/ಭೂದಾಖಲೆ/ಬಾಯ್ಲರ್), ಪತ್ರಾಂಕಿತ ವ್ಯವಸ್ಥಾಪಕರು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಭೂವಿಜ್ಞಾನಿ

    ವಿದ್ಯಾರ್ಹತೆ
    ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಹುದ್ದೆಗೆ ಅನುಗುಣವಾಗಿ ಸಿವಿಲ್ ಇಂಜಿನಿಯರಿಂಗ್/ಮೆಕ್ಯಾನಿಕಲ್ ಇಂಜಿನಿಯರಿಂಗ್/ಬಿ.ಟೆಕ್/ಬಿಇ/ಇತರ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಲು ಅರ್ಹರು.

    ವಯೋ ಅರ್ಹತೆ: ಕೆಪಿಎಸ್‌ಸಿ ನಿಯಮಾನುಸಾರ ಕನಿಷ್ಠ 18 ಹಾಗೂ ಗರಿಷ್ಠ 35 ವರ್ಷ ವಯೋಮಿತಿ ಮಾನದಂಡವಾಗಿದೆ. 2ಎ/2ಬಿ/3ಎ/3ಬಿಯವರಿಗೆ 3 ವರ್ಷ, ಎಸ್ಸಿ/ಎಸ್ಟಿ/ಪ್ರವರ್ಗ-1ಕ್ಕೆ 5 ವರ್ಷ, ಅಂಗವಿಕಲರು ಹಾಗೂ ವಿಧವೆಯರಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿವೆ.

    ಅರ್ಜಿ ಶುಲ್ಕ: ಮಾಜಿ ಸೈನಿಕರಿಗೆ 50ರೂ., ಪ್ರವರ್ಗ 2ಎ/2ಬಿ/3ಎ/3ಬಿಗೆ 150ರೂ. ಹಾಗೂ ಸಾಮಾನ್ಯ ವರ್ಗದವರಿಗೆ 300ರೂ. ಅರ್ಜಿ ಶುಲ್ಕ ಆನ್‌ಲೈನ್ ಮುಖೇನ ಪಾವತಿಸಬೇಕಿದೆ.

    ಅಭ್ಯರ್ಥಿ ಆಯ್ಕೆ ಹೀಗಿರಲಿದೆ…
    ಕೆಪಿಎಸ್‌ಸಿ ನಡೆಸುವ ಸ್ಪರ್ಧಾಪರೀಕ್ಷೆ ಹಾಗೂ ಸಂದರ್ಶನ ಮುಖೇನ ಅಭ್ಯರ್ಥಿಗಳು ಗಳಿಸುವ ಶೇಕಡವಾರು ಪ್ರಮಾಣ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮದನ್ವಯ ಆಯ್ಕೆ ನಡೆಯಲಿದೆ.

    ವೇತನ ಶ್ರೇಣಿ
    ಸಹಾಯಕ ಇಂಜಿನಿಯರ್(ಸಿವಿಲ್), ಸಹಾಯಕ ನಿರ್ದೇಶಕರು(ಭೂದಾಖಲೆ), ಕಲ್ಯಾಣಾಧಿಕಾರಿ – 43,100ರೂ.-83,900ರೂ.
    ಸಹಾಯಕ ನಿರ್ದೇಶಕರು(ವಾಣಿಜ್ಯ)-45,300ರೂ.-88,300ರೂ.
    ಸಹಾಯಕ ಇಂಜಿನಿಯರ್(ಮೆಕ್ಯಾನಿಕಲ್), ಸಹಾಯಕ ನಿರ್ದೇಶಕರು(ಕೈಗಾರಿಕೆ/ಬಾಯ್ಲರ್ಸ್‌), ಭೂವಿಜ್ಞಾನಿ-43,100ರೂ.-83,900ರೂ.

    ಅರ್ಜಿ ಇಲ್ಲಿ ಸಲ್ಲಿಸಿ
    bit.ly/3TfNVHI

    ಅರ್ಜಿ ಸಲ್ಲಿಕೆ ಪ್ರಾರಂಭ: 15.04.2024
    ಅರ್ಜಿ ಸಲ್ಲಿಕೆಗೆ ಕೊನೇ ದಿನ: 14.05.2024

    ಹೆಚ್ಚಿನ ವಿವರ: bit.ly/3PnfVId / bit.ly/3TBzJKD

    ಬಿಎಂಟಿಸಿಯಲ್ಲಿ ನಿರ್ವಾಹಕ ಹುದ್ದೆ; ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts