More

    ಕೆಪಿಎಸ್‌ಸಿ ಸದಸ್ಯತ್ವದ ನೆಪದಲ್ಲಿ 4.10 ಕೋಟಿ ವಂಚನೆ; ಸಿಸಿಬಿಯಿಂದ ನಾಲ್ವರ ಸೆರೆ

    ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‌ಸಿ) ಸದಸ್ಯತ್ವ ಕೊಡಿಸುವುದಾಗಿ ಉಪನ್ಯಾಸಕಿಗೆ ನಂಬಿಸಿ 4.10 ಕೋಟಿ ರೂ. ಪಡೆದು ವಂಚಿಸಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ತಾವರೆಕೆರೆಯ ಭುವನಪ್ಪ ಲೇಔಟ್ ನಿವಾಸಿ ರಿಯಾಜ್ ಅಹ್ಮದ್ (41), ಮಲ್ಲೇಶ್ವರದ ಯೂಸುಫ್ ಸುಬ್ಬೆಕಟ್ಟೆ (47), ಮೂಡಿಗೆರೆಯ ಸಿ.ಚಂದ್ರಪ್ಪ (44) ಮತ್ತು ಕನಕಪುರದ ಉಯ್ಯಂಬಳ್ಳಿಯ ರುದ್ರೇಶ್ (35) ಬಂಧಿತರು. ಕಲುಬುರ್ಗಿ ಮೂಲದ ಉಪನ್ಯಾಸಕಿ ಎಂ. ನೀಲಮ್ಮ ಬೆಳಮಗಿ ಎಂಬುವರಿಗೆ ಕೆಪಿಎಸ್‌ಸಿ ಸದಸ್ವತ್ಯ ಕೊಡಿಸುವುದಾಗಿ ಆಮಿಷವೊಡ್ಡಿ 4.10 ಕೋಟಿ ರೂ. ಪಡೆದು ವಂಚಿಸಿದ್ದರು. ಈ ಕೇಸಿನಲ್ಲಿ ಚೇತನ್, ಶಂಕರ್, ಮಹೇಶ್, ಹರ್ಷವರ್ಧನ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

    ಕಲುಬುರ್ಗಿಯ ಕಾಲೇಜಿನಲ್ಲಿ ಉಪನ್ಯಾಸಕಿ ನೀಲಮ್ಮ, ದಂಪತಿ ಕಾರ್ಯಕ್ರಮಗಳಿಗೆ ಬೆಂಗಳೂರಿಗೆ ಬಂದು ಹೋಗುವಾಗ ರಿಯಾಜ್ ಪರಿಚಯನಾಗಿದ್ದ. ರಾಜಕೀಯ ಮುಖಂಡರಿಗೆ ಭಾಷಾಂತರ ಮಾಡಿಕೊಡುತ್ತಿದ್ದ. ಹಾಗಾಗಿ ಅವರೊಂದಿಗೆ ೆಟೋ ತೆಗೆಸಿಕೊಂಡು ತೀರ ಆತ್ಮೀಯ ಎಂದು ಬಿಂಬಿಸಿಕೊಂಡಿದ್ದ ರಿಯಾಜ್, ನನಗೆ ರಾಜಕೀಯ ಮುಖಂಡರು, ಮುಖ್ಯಮಂತ್ರಿ, ರಾಜ್ಯಪಾಲರು ನೇರ ಸಂಪರ್ಕ ಇರುವುದಾಗಿ ನೀಲಮ್ಮ ಅವರಿಗೆ ನಂಬಿಸಿದ್ದ.
    ಕೆಪಿಎಸ್‌ಸಿ ಸದಸ್ಯತ್ವ ಕೊಡಿಸುತ್ತೆನೆ. ಅದಕ್ಕಾಗಿ 15-20 ಕೋಟಿ ರೂ. ಸರ್ಕಾರಕ್ಕೆ ಕೊಡಬೇಕು. ಅಷ್ಟು ಹಣ ಕೊಡಲು ಒಪ್ಪಿದರೆ ನಿಮಗೆ ಸದಸ್ಯತ್ವ ಸ್ಥಾನ ಕೊಡಿಸುವುದಾಗಿ ಆಮಿಷವೊಡ್ಡಿದ್ದ. ಇದಕ್ಕೆ ಒಪ್ಪಿದ ನೀಲಮ್ಮ ದಂಪತಿಯಿಂದ ಹಂತ ಹಂತವಾಗಿ ನಗದು ಮತ್ತು ಬ್ಯಾಂಕ್‌ಗಳ ಮೂಲಕ 4.10 ಕೋಟಿ ರೂ.ಅನ್ನು ಎಂಟು ತಿಂಗಳ ಅವಧಿಯಲ್ಲಿ ವಸೂಲಿ ಮಾಡಿದ್ದರು.

    ನೀಲಮ್ಮ ಅವರಿಗೆ ನಂಬಿಸುವ ಉದ್ದೇಶಕ್ಕೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಟಿಪ್ಪಣಿ,ನಡಾವಳಿ, ನಕಲಿ ಸಹಿಗಳನ್ನು ಮಾಡಿ ರಾಜ್ಯಪಾಲರ ಹೆಸರಿನಲ್ಲಿ ಸುಳ್ಳು ರಾಜ್ಯ ಪತ್ರವನ್ನು ಸೃಷ್ಟಿಸಿ ಮೋಸ ಮಾಡಿದ್ದರು. ಕೊನೆಗೆ ದಾಖಲೆಗಳು ನಕಲಿ ಎಂಬುದು ಗೊತ್ತಾದ ಮೇಲೆ ನೀಲಮ್ಮ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು.
    ಇದರ ಮೇರೆಗೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಅದೇ ದಿನ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತಿಬ್ಬರ ಸುಳಿವು ಲಭ್ಯವಾಗಿದೆ. ಬಂಧಿತ ನಾಲ್ವರಿಂದ 40 ಲಕ್ಷ ರೂ. ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

    ಈ ಹಿಂದೆಯೂ ವಂಚಿಸಿದ್ದ :

    ಬಂಧಿತ ಯೂಸುಫ್, ಈ ಹಿಂದೆಯೂ ಹಲವರಿಗೆ ವಂಚನೆ ಮಾಡಿದ್ದ. ಈ ಬಗ್ಗೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಉಳಿದವರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಮೋದಿ ಅಣ್ಣನ ಮಗ ನನ್ನ ಸ್ನೇಹಿತ :

    ಕೆಪಿಎಸ್‌ಸಿಗೆ ಅರ್ಜಿ ಸಲ್ಲಿಸುವಂತೆ ನೀಲಮ್ಮ ಅವರಿಗೆ ಪುಸಲಾಯಿಸಿದ್ದ ರಿಯಾಜ್, ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಣ್ಣನ ಮಗ ನನ್ನ ಸ್ನೇಹಿತ. ಅಲ್ಲದೆ, ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಸಹ ನೇರ ಪರಿಚಯ ಇದ್ದು, ಅವರಿಗೆ ತಿಳಿಸಿ ನಿಮಗೆ ಕೆಪಿಎಸ್‌ಸಿ ಸದಸ್ಯತ್ವ ಕೊಡಿಸುತ್ತೆವೆ ಎಂದು ನಂಬಿಸಿದ್ದರು. ಹಣ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts