More

    ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

    ಸಿಂಧನೂರು: ತಾಲೂಕಿನ ಆರ್.ಎಚ್.ಕ್ಯಾಂಪ್-2ರಲ್ಲಿ ಕಿಡಿಗೇಡಿಗಳ ಗುಂಪು ಜು.16 ರಂದು ಏಕಾಏಕಿ ದಾಂಧಲೆ ನಡೆಸಿ, ಕ್ಯಾಂಪ್ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿರುವುದನ್ನು ಖಂಡಿಸಿ, ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗುರುವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಆಡಳಿತಸೌಧದ ಮುಂದೆ ಪ್ರತಿಭಟನೆ ನಡೆಸಲಾಯಿತು.

    ತಾಲೂಕು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ಇಲ್ಲಿ ಎಲ್ಲ ಸಮುದಾಯಗಳ ಜನರು ಪರಸ್ಪರ ಶಾಂತಿ, ಸೌಹಾರ್ದತೆಗೆ ಹಾಗೂ ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಈ ಹಿಂದೆ ಕೆಲವು ಮತೀಯ ಶಕ್ತಿಗಳು ಶಾಂತಿ ಕದಡಲು ನಡೆಸಿದ ವ್ಯವಸ್ಥಿತ ಸಂಚುಗಳನ್ನು ಜನರೇ ಬಯಲಿಗೆಳೆದು ವಿಫಲಗೊಳಿಸುವ ಮೂಲಕ ಸೌಹಾರ್ದ ಸಂದೇಶ ಸಾರಿದ ಉದಾಹರಣೆಗಳಿವೆ.

    ಇದನ್ನೂ ಓದಿ: ಖಾಕಿ ಬೀಸಿದ ಬಲೆಗೆ ಸಿಕ್ಕಿಬಿದ್ದ ವಿದೇಶ ಪ್ರಯಾಣದ ಸಿದ್ಧತೆಯಲ್ಲಿದ್ದ ಶಂಕಿತ ಉಗ್ರ ಆರೀಫ್​

    ಈ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕೋಮುಭಾವನೆ ಪ್ರಚೋದಿಸುವ, ಧ್ವೇಷಭಾವನೆ ಕೆರಳಿಸುವ, ಧಾರ್ಮಿಕ ವಿಷಯಗಳನ್ನು ಎಳೆದು ತಂದು ಆ ಮೂಲಕ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ.

    ನೆರವಿಗೆ ಬರಬೇಕು

    ಗುಂಪು ಹಲ್ಲೆ ಮಾಡುವುದು, ಹಲ್ಲೆಗೆ ಪ್ರಚೋದನೆ ನೀಡುವುದು ಕಾನೂನು ರೀತಿಯಲ್ಲಿ ದಂಡನಾರ್ಹವಾಗಿದ್ದು ಯಾರೇ ತಪ್ಪು ಮಾಡಿದರೂ ಕ್ರಮ ಜರುಗಿಸಬೇಕು. ಸಮಸ್ಯೆಗೊಳಗಾದವರ ನೆರವಿಗೆ ಬರಬೇಕು. ಘಟನೆ ತನಿಖೆಗೊಳಪಡಿಸಬೇಕು. ಶಾಲೆ-ಕಾಲೇಜು ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು. ಘಟನೆಗೆ ಸಂಬಂಧಿಸಿದಂತೆ ಜಾತಿ-ಧರ್ಮದ ಕೋಮು ಬಣ್ಣ ಬಳಿಯುವುದು ಸರಿಯಲ್ಲ.

    ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಬಸವಂತರಾಯಗೌಡ ಕಲ್ಲೂರು, ಚಂದ್ರಶೇಖರ ಗೊರೇಬಾಳ, ಅಶೋಕ ನಂಜಲದಿನ್ನಿ, ಅಬ್ದುಲ್‌ಸಮದ್ ಚೌದ್ರಿ, ಮಂಜುನಾಥ ಗಾಂಧಿನಗರ, ಬಸವರಾಜ ಹಸಮಕಲ್, ಉಮಾಶಂಕರ, ಎ.ಗೋಪಾಲಕೃಷ್ಣ, ಹುಸೇನಸಾಬ್, ಅಬು ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts