More

    ರೈತರ ಹಿತ ಕಾಯಲು ಬಿಜೆಪಿ ಸರ್ಕಾರ ಬದ್ಧ

    ತುಮಕೂರು: ರೈತರು ಮತ್ತು ಅಕ್ಕಿ ಗಿರಣಿ ಮಾಲೀಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಹೇಳಿದರು.

    ನಗರದ ಸಪ್ತಗಿರಿ ಆಗ್ರೋ ಇಂಡಸ್ಟ್ರೀಸ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕನಿಷ್ಠ ಬೆಂಬಲ ಯೋಜನೆಯಡಿ ಬಳ್ಳಾರಿ ಜಿಲ್ಲೆಗೆ ಸಂಬಂಧಪಟ್ಟಂತೆ ಭತ್ತ ಖರೀದಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಬಿಎಸ್‌ವೈ ಮಾದರಿಯಲ್ಲಿ ನಾವು ಕಾರ್ಯನಿರ್ವಹಿಸುವುದಾಗಿ ಹೇಳಿದ ಸಚಿವ ಕೆ. ಗೋಪಾಲಯ್ಯ, ಉತ್ತರ ಪ್ರದೇಶ ಮತ್ತು ಬೇರೆ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಉದ್ದಿಮೆಗಳಿಗೆ ನೀಡಿರುವ ಸೌಲಭ್ಯಗಳನ್ನು ರಾಜ್ಯದಲ್ಲಿಯೂ ನೀಡಲು ಶ್ರಮಿಸುವುದಾಗಿ ತಿಳಿಸಿದರು.
    ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ರೈತರು ಮತ್ತು ಆಹಾರಕ್ಕೆ ಸಂಬಂಧಿಸಿದಂತಹ ಉದ್ದಿಮೆಗಳಿಗೆ ತೊಂದರೆಯಾಗದಂತೆ ಕಾರ್ಯಕ್ರಮ ರೂಪಿಸಬೇಕು ಎಂದರು.

    ಅರಣ್ಯ ಸಚಿವ ಆನಂದ್‌ಸಿಂಗ್, ಸಿರಗುಪ್ಪ ಶಾಸಕ ಸೋಮಲಿಂಗಪ್ಪ, ರಾಜ್ಯ ಆಹಾರ ನಿಗಮದ ಎಂಡಿ ಎನ್.ವಿ.ಪ್ರಸಾದ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತೆ ಶಮ್ಮಲ ಇಕ್ಬಾಲ್, ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ಕಾ.ರಾಮೇಶ್ವರಪ್ಪ, ಡಿಸಿಎಫ್ ಗಿರೀಶ್, ವಿಶ್ವರಾಧ್ಯ, ಪ್ರಸಾದ್, ಸಪ್ತಗಿರಿ ಆಗ್ರೋ ಇಂಡಸ್ಟ್ರೀಸ್ ಮಾಲೀಕ ಶ್ರೀಧರ್‌ಬಾಬು ಮತ್ತಿತರರು ಇದ್ದರು. ಸಚಿವ ಕೆ.ಗೋಪಾಲಯ್ಯ ಹಾಗೂ ಅರಣ್ಯ ಸಚಿವ ಆನಂದ್‌ಸಿಂಗ್ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು. ಶ್ರೀಮಠದ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.

    ನರಭಕ್ಷಕ ಚಿರತೆ ಗುರುತಿಸಲು ಸಾಧ್ಯವಾಗ್ತಿಲ್ಲ: ತುಮಕೂರು: ಕುಣಿಗಲ್ ತಾಲೂಕು ವ್ಯಾಪ್ತಿಯಲ್ಲಿ ಈವರೆಗೂ 30 ಚಿರತೆಗಳನ್ನು ಸೆರೆಹಿಡಿಯಲಾಗಿದೆ. ಆದರೆ, ನರಭಕ್ಷಕ ಚಿರತೆ ಗುರುತಿಸಲು ಸಾಧ್ಯವಾಗಿಲ್ಲ ಎಂದು ಅರಣ್ಯ ಸಚಿವ ಆನಂದ್‌ಸಿಂಗ್ ಹೇಳಿದರು.

    ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯವಾಗಿ ಅಲ್ಲಲ್ಲಿ ಬೆಳೆದು ನಿಂತಿರುವ ಪೊದೆಗಳನ್ನು ತೆರವುಗೊಳಿಸಿದರೆ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಚಿರತೆಗಳನ್ನು ಸೆರೆಹಿಡಿಯಬಹುದು. ಚಿರತೆ ದಾಳಿಗೆ ಕಡಿವಾಣ ಹಾಕಬಹುದು ಎಂದರು. ದಾಳಿ ಮಾಡುತ್ತಿರುವ ಚಿರತೆಯನ್ನು ಗುಂಡಿಟ್ಟು ಕೊಲ್ಲಲು ಆದೇಶ ಮಾಡಿದರೂ ಅದರಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಚಿರತೆ ಯಾವುದು ಎಂದು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ಮುಂದಿನ ವಾರ ಹಿರಿಯ ಅಧಿಕಾರಿಗಳು ಮತ್ತು ತುಮಕೂರು ತಾಲೂಕಿನ ಚಿರತೆ ಹಾವಳಿ ಇರುವಂತಹ ಪ್ರದೇಶದ ಶಾಸಕರ ಜತೆ ಸಭೆ ನಡೆಸಲಾಗುವುದು. ಚಿರತೆ ಹಾವಳಿ ತಡೆಗಟ್ಟಲು ಮಧ್ಯಪ್ರದೇಶ, ಗುಜರಾತ್ ನಲ್ಲಿರುವ ನುರಿತವರ ಸಲಹೆ ಪಡೆಯಲಿದ್ದೇವೆ ಎಂದರು.

    ಗ್ರಾಮಸ್ಥರ ಸಲಹೆ ಕೂಡ ಪಡೆಯಲಾಗಿದೆ. ಮುಖ್ಯವಾಗಿ ಅಲ್ಲಲ್ಲಿ ಬೆಳೆದು ನಿಂತಿರುವ ಪೊದೆಗಳನ್ನು ತೆರವುಗೊಳಿಸಿದರೆ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಚಿರತೆಗಳನ್ನು ಸೆರೆಹಿಡಿಯಬಹುದು. ಚಿರತೆ ದಾಳಿಗೆ ಕಡಿವಾಣ ಹಾಕಬಹುದು ಎಂದರು. ಪೊದೆಗಳನ್ನು ತೆರವುಗೊಳಿಸುವ ಕುರಿತಂತೆ ಕಂದಾಯ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ಕೂಡ ನಡೆಸಲಾಗುತ್ತಿದೆ ಎಂದರು.

    ರಾಜ್ಯದ ಮೂರು ನಾಲ್ಕು ಜಿಲ್ಲೆಗಳಲ್ಲಿ ಸರ್ಕಾರ ಭತ್ತ ಖರೀದಿಸುತ್ತಿದ್ದು, ರೈತರು ಹೆಚ್ಚಿನ ಬೆಳೆ ಬೆಳೆದಾಗ ಇಂತಹ ರೈಸ್ ಮಿಲ್ ಸಂಸ್ಥೆಗಳು ಉಳಿದುಕೊಳ್ಳಲಿದ್ದು ಇಲಾಖೆಯಿಂದ ಅಕ್ಕಿಯ ಗುಣಮಟ್ಟ ಪರಿಶೀಲಿಸಿದ ನಂತರ ಸಿಎಂ ಜತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.
    ಕೆ.ಗೋಪಾಲಯ್ಯ ಆಹಾರ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts