More

    ಲೈವ್‌ಸ್ಟ್ರೀಮಿಂಗ್ ಮಾಡುವಾಗಲೇ ಫುಡ್‌ವ್ಲಾಗರ್‌ನ ‘ಕಥೆ ಮುಗಿಸಿದ’ ಪ್ರತಿಸ್ಪರ್ಧಿ!

    ನೇಪಾಳ: ಚೀನಾದ ಖ್ಯಾತ ಫುಡ್‌ವ್ಲಾಗರ್‌ ಫೆಂಗ್ ಝೆಂಗ್ಯುಂಗ್ ಮೇಲೆ ಕಠ್ಮಂಡುವಿನ ಇಂದ್ರ ಚೌಕ್ ಮಾರುಕಟ್ಟೆಯಲ್ಲಿ ಮಾರಂಣಾತಿಕ ಹಲ್ಲೆ ನಡೆದಿದೆ. ಈ ಘಟನೆ ಡಿ.04ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರತಿಸ್ಪರ್ಧಿ ವ್ಲಾಗರ್​​​ಗಳಾದ ಗ್ಯಾನ್ ಸೌಜಿಯಾಂಗ್ ಮತ್ತು ಲಿ ಚುಜಾನ್ ಚಾಕುವಿನಿಂದ ಇರಿದಿದ್ದಾರೆ. ಫುಡ್‌ವ್ಲಾಗರ್‌ ಫೆಂಗ್ ಝೆಂಗ್ಯುಂಗ್ ಚಿಕಿತ್ಸೆ ಫಲಕಾರಿಯಾದಗೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

    ಫುಡ್‌ವ್ಲಾಗರ್‌ ಫೆಂಗ್ ಝೆಂಗ್ಯುಂಗ್ ಮೇಲೆ ದಾಳಿ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೆಂಗ್ ಝೆಂಗ್ಯುಂಗ್ ಕಠ್ಮಂಡುವಿನ ಇಂದ್ರ ಚೌಕ್ ಮಾರುಕಟ್ಟೆಯಲ್ಲಿ ಲೈವ್​ ಸ್ಟ್ರೀಮೀಂಗ್ ಮಾಡುತ್ತಿದ್ದ. ಈ ವೇಳೆ ಮಾರಣಾಂತಿಕ ದಾಳಿ ನಡೆದಿದೆ. ದ್ವೇಷದ ಹಿನ್ನೆಲೆಯಲ್ಲಿ ನಡೆದ ಈ ದಾಳಿಯಲ್ಲಿ, ಫೆಂಗ್ ಝೆಂಗ್ಯುಂಗ್​ನ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಚಾಕು ಇರಿತವಾಗಿತ್ತು.

    ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಘಟನೆ ನೋಡಿದ ಜನರ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಜನರು ಫೆಂಗ್ ಝೆಂಗ್ಯುಂಗ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಾದ ಗ್ಯಾನ್ ಸೌಜಿಯಾಂಗ್ ಮತ್ತು ಲಿ ಚುಜಾನ್​ನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts