More

    ಊಟದ ಬದಲು ಗಾಂಜಾ ಸಪ್ಲೈ ಮಾಡುತ್ತಿದ್ದ ಫುಡ್ ಡೆಲಿವರಿ ಬಾಯ್​​!

    ಆಂಧ್ರಪ್ರದೇಶ: ಒಂದೆಡೆ ಮಾದಕ ದ್ರವ್ಯ ಮಾರಾಟಗಾರರ ಜಾಲ ವಿಸ್ತಾರವಾಗುತ್ತಿದೆ. ಇವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಈ ನಡುವೆ ಹದಿಹದಿಯದ ಮಂದಿಯೆಲ್ಲಾ ಡ್ರಗ್ಸ್​, ಗಾಂಜಾ ಮುಂತಾದ ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ಕೆಲವರು ಡ್ರಗ್ಸ್​, ಗಾಂಜಾ ಪೂರೈಕೆದಾರರಾಗಿ ಬದಲಾಗುತ್ತಿದ್ದಾರೆ. ಇದೀಗ ಇಲ್ಲೊಬ್ಬ 20 ವರ್ಷದ ಯುವಕ ಡ್ಲಗ್ ಪೂರೈಕೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

    ಹೌದು, ಆಂಧ್ರಪ್ರದೇಶದ ನಿತೀಶ್ ಎಂಬ ಯುವಕ ಸಣ್ಣ ವಯಸ್ಸಿನಲ್ಲೇ ಗಾಂಜಾ ಪೂರೈಕೆ ಮಾಡಿ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾನೆ. ನಿತೀಶ್ ಝೋಮ್ಯಾಟೋ ಕಂಪೆನಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಈತನಿಗೆ ರಾಹುಲ್ ಎಂಬ ಗಾಂಜಾ ಪೆಡ್ಲರ್ ಒಬ್ಬನ ಪರಿಚಯವಾಗಿದೆ. ನಂತರ ತನ್ನ ಝೋಮ್ಯಾಟೋ ಕಂಪೆನಿಯ ಫುಡ್ ಡೆಲಿವರಿ ಬ್ಯಾಗಿನೊಳಗೆ ಗಾಂಜಾ​ ಇಟ್ಟುಕೊಂಡು, ಮಾದಕ ವ್ಯಸನಿಗಳಿಗೆ ಹಂಚುತ್ತಿದ್ದ ಎಂದು ತನಿಖೆಯ ನಂತರ ಪೊಲೀಸರು ತಿಳಿಸಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಈತ ಫುಡ್ ಡೆಲಿವರಿ ಮಾಡಿಕೊಂಡಿದ್ದಾನೆ ಎಂದೇ ನಂಬಿದ್ದರು. ಹಾಗಾಗಿ ನಿತೀಶ್ ಕೆಲಸದ ಮೇಲೆ ಯಾರಿಗೂ ಅನುಮಾನ ಬಂದಿಲ್ಲ.

    ಡಿ.11ರಂದು ನಿತೇಶ್, ರಾಹುಲ್​ನಿಂದ 5 ಸಾವಿರ ರೂ. ಮೌಲ್ಯದ ಗಾಂಜಾ ಪಡೆದುಕೊಂಡು ಡೆಲಿವರಿ ಮಾಡಲು ಹೊರಟಿದ್ದ. ಆದರೆ ಈತನ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ಮುಂಚಿತವಾಗಿ ಬಂದಿತ್ತು. ಹೀಗಾಗಿ ಮಾರ್ಗಮಧ್ಯೆ ನಿತೇಶ್​ನನ್ನು ತಡೆದು ನಿಲ್ಲಿಸಿದ್ದಾರೆ. ನಂತರ ವಾಹನದಲ್ಲಿದ್ದ ಝೋಮ್ಯಾಟೋ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts