More

    ಜಾನಪದ ವಿದ್ವಾಂಸ ಡಾ.ತೀ.ನಂ.ಶಂಕರನಾರಾಯಣ ನಿಧನ..

    ಬೆಂಗಳೂರು: ಜಾನಪದ ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದ ಹಿರಿಯ ಜಾನಪದ ವಿದ್ವಾಂಸ, ಸಾಹಿತಿ ಡಾ.ತೀ.ನಂ ಶಂಕರನಾರಾಯಣ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಈ ದಿನ ಸಂಜೆ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರದ ಅಂತಿಮದರ್ಶನಕ್ಕಾಗಿ ಶಿವಮೊಗ್ಗದ ಎಆರ್​ಬಿ ಕಾಲನಿಯ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ.

    ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾಗಿದ್ದ ಡಾ. ತೀ.ನಂ. ಶಂಕರನಾರಾಯಣ, ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾರತಿಯ ವಿಭಾಗದಲ್ಲಿ ಜಾನಪದ ತಜ್ಞರಾಗಿ ಡಾ.ತಿ.ನಂ ಶಂಕರನಾರಾಯಣ 30 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದರು. ಕರ್ನಾಟಕ ಕಾಡುಗೊಲ್ಲರ ನಂಬಿಕೆಗಳು ಮತ್ತು ಸಂಪ್ರದಾಯಗಳು ಎಂಬ ಇವರ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಲಭಿಸಿತ್ತು.

    ಸಿರಿಯಜ್ಜಿ ಪ್ರತಿಷ್ಠಾನ ನೀಡುವ ‘ಸಿರಿಬೆಳಗು ಪ್ರಶಸ್ತಿ’ಗೆ ಶಂಕರನಾರಾಯಣ ಅವರನ್ನು ಆಯ್ಕೆ ಮಾಡಲಾಗಿತ್ತು. ಮೇ.29ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭವಿದ್ದು, ಅದಕ್ಕೆ ಆಗಮಿಸುವಂತೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಕಲಮರಳ್ಳಿ ಆಹ್ವಾನ ನೀಡಿದ್ದರು. ಆದರೆ ಅದಕ್ಕೂ ಮೊದಲೇ ಶಂಕರನಾರಾಯಣ ಇಹಲೋಕ ತ್ಯಜಿಸಿದ್ದಾರೆ. ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷರು, ಕಾರ್ಯದರ್ಶಿಗಳು ಸೇರಿ ಇತರರು ಶಂಕರನಾರಾಯಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು…

    ಹೆಂಡತಿ ತವರಿಗೆ ಹೋದ್ಲು ಅಂತ ಮಗಳ ಜತೆ ಆತ್ಮಹತ್ಯೆಗೆ ಯತ್ನಿಸಿದ ಗಂಡ; ಆಮೇಲಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು ಡಿಜಿಪಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts