More

    ವರುಣನ ಅಬ್ಬರಕ್ಕೆ ಅಪಾಯ ಮಟ್ಟ ಮೀರಿದ ಯುಮುನಾ ನದಿ: ರಾಷ್ಟ್ರ ರಾಜಧಾನಿಗೆ ಪ್ರವಾಹ ಭೀತಿ

    ನವದೆಹಲಿ: ಉತ್ತರ ಭಾರತದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಕಳೆದ ಮೂರು ದಿನಗಳಲ್ಲಿ 37ಕ್ಕೂ ಹೆಚ್ಚು ಜನರು ಮಳೆರಾಯನ ಅಬ್ಬರಕ್ಕೆ ಬಲಿಯಾಗಿದ್ದಾರೆ. ಇದೀಗ ದೆಹಲಿಯ ಯಮುನಾ ನದಿ ಅಪಾಯ ಮಟ್ಟವನ್ನು ಮೀರಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.

    206.24 ಮೀಟರ್​ ನೀರು

    ಅಪಾಯದ ಮಟ್ಟವಾಗಿರುವ 205.33 ಮೀಟರ್​ ಅನ್ನು ಯಮುನಾ ನದಿ ಮೀರಿದೆ. ಇಂದು ಬೆಳಗ್ಗೆ ಹರಿಯಾಣ ಹತ್ನಿಕುಂಡ್ ಬ್ಯಾರೇಜ್‌ನಿಂದ ನದಿಗೆ ಹೆಚ್ಚಿನ ನೀರನ್ನು ಬಿಡುಗಡೆ ಮಾಡಿದ್ದರಿಂದ ಯಮುನಾ ನದಿಯಲ್ಲಿ 206.24 ಮೀಟರ್​ವರೆಗೆ ನೀರು ತಲುಪಿದ್ದು, ಪ್ರವಾಹ ಸ್ಥಿತಿ ಎದುರಾಗಿದೆ.

    ಇದನ್ನೂ ಓದಿ: ಅಕ್ರಮ ನೋಂದಣಿ ಕಿಂಗ್​ಪಿನ್ ಸೆರೆ: ಆಂಧ್ರದಿಂದ ಬಂಧಿಸಿ ಕರೆತಂದ ಪೊಲೀಸರು; ಈವರೆಗೆ ಐವರು ಜೈಲುಪಾಲು

    ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

    ನಿರೀಕ್ಷೆಗೂ ಮುನ್ನವೇ ನದಿ ಅಪಾಯ ಮಟ್ಟವನ್ನು ಮೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ನದಿ ಅಂಚಿನ ಹಾಗೂ ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸವನ್ನು ಆರಂಭಿಸಲಾಗಿದೆ. ನಗರದ ವಿವಿಧ ಭಾಗಗಳಲ್ಲಿರುವ ಪರಿಹಾರ ಶಿಬಿರಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಯಮುನಾ ನದಿಯ ನೀರಿನ ಮಟ್ಟ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಮೇಲ್ವಿಚಾರಣೆ ಮಾಡಲು ದೆಹಲಿ ಸರ್ಕಾರ 16 ಕಂಟ್ರೋಲ್​ ರೂಮ್​ಗಳನ್ನು ಅಳವಡಿಸಿದೆ. ಇದೇ ಸಮಯದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನೀರಿನ ಸಮಸ್ಯೆ ಎದುರಿಸಲು ಕ್ರಮಗಳನ್ನು ಘೋಷಿಸಿದರು.

    ಒಳಚರಂಡಿ ವ್ಯವಸ್ಥೆ ಉತ್ತಮವಾಗಿಲ್ಲ

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್​, 40 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ರೀತಿಯ ಮಳೆ 1982 ರಲ್ಲಿ ಬಿದ್ದಿತ್ತು. ಆ ಸಂದರ್ಭದಲ್ಲಿ 24 ಗಂಟೆಯಲ್ಲಿ 169 ಮಿ.ಮೀ ಮಳೆಯಾಗಿತ್ತು. ಇದೀಗ ಅದೇ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ದುರದೃಷ್ಟವಶಾತ್ ನಗರದಲ್ಲಿನ ಒಳಚರಂಡಿ ವ್ಯವಸ್ಥೆಯು ಅಂತಹ ವಿಪರೀತ ಮಳೆಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿಲ್ಲ ಎಂದು ಹೇಳಿದರು.

    ಮಳೆ ಮುಂದುವರಿಯಲಿದೆ

    ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಮಳೆರಾಯ ಅಬ್ಬರಿಸುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೇನಾ ಪಡೆಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

    ಇದನ್ನೂ ಓದಿ: ಜಗದಲ್ಲಿ ಸಿಂಹಪಾಲು, ಜನಸಂಖ್ಯೆಯ ಸವಾಲು: ಪ್ರಪಂಚದ ಪ್ರತಿ ನೂರು ಜನರಲ್ಲಿ 17 ಭಾರತೀಯರು

    ಹಿಮಾಚಲ ಪ್ರದೇಶದಲ್ಲಿ ಭೀಕರ ಪ್ರವಾಹ

    ಅತಿ ಹೆಚ್ಚು ಮಳೆಯಾಗುತ್ತಿರುವ ಪ್ರದೇಶಗಳ ಅನೇಕ ನದಿಗಳು ಉಕ್ಕಿ ಹರಿಯುತ್ತಿವೆ. ನಗರ ಮತ್ತು ಪಟ್ಟಣಗಳು ರಸ್ತೆಗಳು ಮತ್ತು ಕಟ್ಟಡಗಳು ಮೊಣಕಾಲಿನಷ್ಟು ಆಳದ ನೀರಿನಿಂದ ಜಲಾವೃತಗೊಂಡಿದೆ. ಅದರಲ್ಲೂ ಹಿಮಾಚಲ ಪ್ರದೇಶದಲ್ಲಿ ಭೀಕರ ಮಳೆಯಾಗುತ್ತಿದ್ದು, ಅತಿ ಕೆಟ್ಟ ಪರಿಣಾಮವನ್ನು ಎದುರಿಸುತ್ತಿದೆ. ದಿಢೀರ್​ ಮಳೆಯಿಂದಾಗಿ ಭೂಕೂಸಿತಗಳು ಮತ್ತು ಪ್ರವಾಹಗಳು ಹೆಚ್ಚಾಗಿದ್ದು, ಅನೇಕ ಮನೆಗಳು ಸೇರಿದಂತೆ ನೂರಾರು ಕೋಟಿಯ ಆಸ್ತಿ ನಾಶವಾಗಿದೆ. (ಏಜೆನ್ಸೀಸ್​)

    ಮದ್ವೆಯಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ದಾರುಣ ಸಾವು: ಮುಗಿಲು ಮುಟ್ಟಿದ ಗಂಡ ಆಕ್ರಂದನ

    ಬದಲಾಯಿತು ಪಾಕ್​ ಮಹಿಳೆಯ ಜೀವನ ಶೈಲಿ: ಮಾಂಸಾಹಾರಿ ಸೀಮಾ ಈಗ ಸಸ್ಯಾಹಾರಿ, ನಿತ್ಯವೂ ದೇವರ ಸೇವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts