More

    ‘ಕಬ್ಜ’ ಚಿತ್ರದ ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್​ …

    ಬೆಂಗಳೂರು: ಉಪೇಂದ್ರ, ಸುದೀಪ್​ ಅಭಿನಯದ ‘ಕಬ್ಜ’ ಚಿತ್ರವು ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ, ಚಿತ್ರದ ಮೊದಲ ದಿನದ ಕಲೆಕ್ಷನ್​ ಎಷ್ಟಿರಬಹುದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದ್ದು, ಈಗ ಚಿತ್ರತಂಡವೇ ಮೊದಲ ದಿನ ಕಲೆಕ್ಷನ್​ ಎಷ್ಟು ಎಂದು ಬಹಿರಂಗಪಡಿಸಿವೆ.

    ಇದನ್ನೂ ಓದಿ: ಮದ್ವೆ ಹಿಂದಿದೆ ಅದೊಂದು ಪ್ಲಾನ್​: ಪವಿತ್ರಾ ಲೋಕೇಶ್​ ವಿರುದ್ಧ ಮಾಜಿ ಪತಿ ಸುಚೇಂದ್ರ ಪ್ರಸಾದ್ ಗಂಭೀರ ಆರೋಪ​

    ಅಂದಹಾಗೆ, ‘ಕಬ್ಜ’ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಭಾರತಾದ್ಯಂತ ಚಿತ್ರಮಂದಿರಗಳಿಂದ 54ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ ಎಂದು ಚಿತ್ರತಂಡವೇ ಖಚಿತಪಡಿಸಿದೆ. ಈ ಪೈಕಿ, ಕರ್ನಾಟಕದಿಂದಲೇ 20 ಕೋಟಿ ರೂ. ಗಳಿಕೆ ಆಗಿದೆಯಂತೆ. ಇನ್ನು, ಉತ್ತರ ಭಾರತದಲ್ಲಿ ಹಿಂದಿ ಅವತರಣಿಕೆಯಿಂದ 12 ಕೋಟಿ ರೂ. ಗಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

    ಮಿಕ್ಕಂತೆ ಆಂಧ್ರ ಮತ್ತು ತೆಲಂಗಾಣದಿಂದ 7 ಕೋಟಿ ರೂ, ತಮಿಳುನಾಡಿನಿಂದ 5 ಕೋಟಿ, ಕೇರಳದಿಂದ ಮೂರು ಕೋಟಿ ರೂ. ಬಂದಿದೆಯಂತೆ. ಇನ್ನು, ಚಿತ್ರವು ಅಮೆರಿಕ ಸೇರಿದಂತೆ ಬೇರೆ ರಾಷ್ಟ್ರಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಿದ್ದು, ಎಲ್ಲ ದೇಶಗಳಿಂದ ನಾಲ್ಕು ಕೋಟಿ ರೂ.ವರೆಗೂ ಬರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ, ಚಿತ್ರದ ಕಲೆಕ್ಷನ್​ 54 ಕೋಟಿ ರೂ. ಆಗಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ.

    ಇದನ್ನೂ ಓದಿ: ಪುನೀತ್ ಹುಟ್ಟು, ಅಭಿಮಾನಿಗಳ ಹಬ್ಬ

    ‘ಕಬ್ಜ’ ಚಿತ್ರವನ್ನು ಆರ್​. ಚಂದ್ರ ನಿರ್ಮಿಸಿ-ನಿರ್ದೇಶಿಸಿದ್ದು, ಉಪೇಂದ್ರ, ಸುದೀಪ್, ಶ್ರೇಯಾ ಶರಣ್​, ಮುಕುಲ್ ಶರ್ಮ, ಅನೂಪ್​ ರೇವಣ್ಣ, ಅಶ್ವತ್ಥ್​ ನೀನಾಸಂ, ಕಬೀರ್​ ದುಹಾನ್​ ಸಿಂಗ್​, ಪ್ರಮೋದ್​ ಶೆಟ್ಟಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಶಿವರಾಜಕುಮರ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಎರಡನೆಯ ಭಾಗಕ್ಕೆ ಲೀಡ್​ ಕೊಡುತ್ತಾರೆ. ರವಿ ಬಸ್ರೂರು ಸಂಗೀತ, ಎ.ಜೆ. ಶೆಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಇನ್ನೂ ಮುಗಿಯದ ಕಬ್ಜ, ಸಾಹಸಪ್ರಿಯರಿಗೆ ಹಬ್ಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts