More

  ಇನ್ನೂ ಮುಗಿಯದ ಕಬ್ಜ, ಸಾಹಸಪ್ರಿಯರಿಗೆ ಹಬ್ಬ

  • ಚಿತ್ರ: ಕಬ್ಜ
  • ನಿರ್ದೇಶನ: ಆರ್. ಚಂದ್ರು
  • ನಿರ್ಮಾಣ: ಆರ್. ಚಂದ್ರು
  • ತಾರಾಗಣ: ಉಪೇಂದ್ರ, ಸುದೀಪ್, ಶಿವರಾಜಕುಮಾರ್, ಶ್ರೀಯಾ ಶರಣ್, ಮುರಳಿ ಶರ್ಮ, ನವಾಬ್ ಶಾ ಮುಂತಾದವರು

  | ಚೇತನ್ ನಾಡಿಗೇರ್ ಬೆಂಗಳೂರು

  ಇನ್ಮೇಲೆ ಯಾವುದೇ ಕಾರಣಕ್ಕೂ ಆಯುಧ ಮುಟ್ಟಬಾರದು ಎಂದು ಆಣೆ ಮಾಡುವಂತೆ ಹೇಳುತ್ತಾಳೆ ಮಧುಮತಿ. ಆತ ಇನ್ನೇನು ಆಕೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಬೇಕು ಎನ್ನುವಷ್ಟರಲ್ಲೇ ಆಯುಧಗಳನ್ನು ಹಿಡಿದ ಹಲವು ರೌಡಿಗಳು ಸುತ್ತುವರೆಯುತ್ತಾರೆ. ಅವನಿಗೆ ಬೇರೆ ದಾರಿಯೇ ಇರುವುದಿಲ್ಲ. ತನ್ನನ್ನು ಉಳಿಸಿಕೊಳ್ಳುವುದಕ್ಕೆ, ಆಕೆಯನ್ನು ಕಾಪಾಡುವುದಕ್ಕೆ ಅನಿವಾರ್ಯವಾಗಿ ಆಯುಧ ಹಿಡಿಯುತ್ತಾನೆ. ದೇಶಸೇವೆ ಮಾಡಬೇಕು ಎಂದು ಬಯಸುವ ಸ್ವಾತಂತ್ರ್ಯ ಹೋರಾಟಗಾರನ ಮುಗ್ಧ ಮಗ ತನ್ನದಲ್ಲದ ತಪ್ಪಿಗೆ ಭೂಗತಲೋಕದಲ್ಲಿ ದೊಡ್ಡ ಡಾನ್ ಆಗಿ ಮೆರೆಯುತ್ತಾನೆ.

  ‘ಕಬ್ಜ’ ಚಿತ್ರದ ಕಥೆ ಏನು ಎಂದರೆ ಇಷ್ಟು ಹೇಳಬಹುದು. ಮಿಕ್ಕಂತೆ ‘ಕಬ್ಜ’ ಚಿತ್ರವನ್ನು ಅಷ್ಟು ಸುಲಭಕ್ಕೆ ಹಿಡಿದಿಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಇಲ್ಲಿ ಅಸಂಖ್ಯ ಪಾತ್ರಗಳಿವೆ, ಆ ಪಾತ್ರಗಳಿಗೆ ಚಿತ್ರ-ವಿಚಿತ್ರ ಹೆಸರುಗಳಿವೆ, ಹಲವು ತಿರುವುಗಳಿವೆ, ಬೇರೆಬೇರೆ ಕಾಲಘಟ್ಟಗಳಿವೆ. ಹಾಗಾಗಿ, ಅವೆಲ್ಲವನ್ನೂ ನೆನಪಿನಲ್ಲಿಟ್ಟುಕೊಂಡು ವಿವರಿಸುವುದು ಅಷ್ಟು ಸುಲಭವಲ್ಲ. ಇಷ್ಟಕ್ಕೂ ಚಿತ್ರಮಂದಿರದ ಹೊರಬಂದ ಮೇಲೆ ನೋಡಿದ್ದೆಲ್ಲವೂ ನೆನಪಿನಲ್ಲುಳಿಯುತ್ತದೆ ಎಂದು ಹೇಳುವುದು ಸಹ ಕಷ್ಟ. ಅದಕ್ಕೆ ಕಾರಣಗಳೂ ಇವೆ. ಮೊದಲನೆಯದಾಗಿ ಇದೊಂದು ಜಟಿಲವಾದ ಚಿತ್ರಕಥೆ. ಚಿತ್ರ ಮೊದಲು ಈಗಿನ ಕಾಲಘಟ್ಟದಲ್ಲಿ ಪ್ರಾರಂಭವಾಗಿ, ಸ್ವಾತಂತ್ರ್ಯಪೂರ್ವಕ್ಕೆ ಹೋಗಿ, ಕೊನೆಗೆ 1975ರಲ್ಲಿ ಮುಕ್ತಾಯವಾಗುತ್ತದೆ. ಹೀಗೆ ಕಥೆ ಹಲವು ಕಾಲಘಟ್ಟಗಳಲ್ಲಿ ಮತ್ತು ಅಸಂಖ್ಯ ಪಾತ್ರಗಳ ನಡುವೆ ಸಾಗುವುದರಿಂದ ಅಷ್ಟಾಗಿ ಸ್ಪಷ್ಟತೆ ಸಿಗುವುದಿಲ್ಲ. ಎರಡನೆಯದಾಗಿ, ‘ಕಬ್ಜ’ ಇನ್ನೂ ಮುಗಿದಿಲ್ಲ.

  ಇದನ್ನೂ ಓದಿ: ಫಿಲಂ ಚೇಂಬರ್​ನಲ್ಲಿ ‘ಉರಿಗೌಡ-ನಂಜೇಗೌಡ’ ಹೆಸರು ನೋಂದಾಯಿಸಿದ ಮುನಿರತ್ನ

  ಹೌದು, ‘ಕಬ್ಜ’ ಕಥೆಯನ್ನು ಒಂದು ನಿರ್ಣಾಯಕ ಹಂತಕ್ಕೆ ತಂದು ನಿಲ್ಲಿಸಿದ್ದಾರೆ ಚಂದ್ರು. ಮುಂದೇನಾಗುತ್ತದೆ ಎಂಬುದನ್ನು ಎರಡನೆಯ ಭಾಗದಲ್ಲೇ ನೋಡಿ ಅರ್ಥ ಮಾಡಿಕೊಳ್ಳಬೇಕು. ಬೇಕಾದರೆ ಸದ್ಯ ಮಧ್ಯಂತರ ಎಂದು ಪರಿಗಣಿಸಬಹುದೇನೋ? ಈಗ ಒಂದಿಷ್ಟು ವಿಷಯಗಳನ್ನು ಮಾತ್ರ ಚಂದ್ರು ಹೇಳಿದ್ದಾರೆ. ಮಿಕ್ಕಂತೆ ಕಥೆ ಮುಗಿಯುವುದಕ್ಕೆ, ಚಿತ್ರ ಅರ್ಥವಾಗುವುದಕ್ಕೆ ಎರಡನೆಯ ಭಾಗವನ್ನೂ ನೋಡಬೇಕು. ಹಾಗಾಗಿಯೇ, ವಿಮರ್ಶೆ ಮತ್ತು ವಿಶ್ಲೇಷಣೆ ಎರಡೂ ಕಷ್ಟ. ಅದನ್ನು ಹೊರತುಪಡಿಸಿದರೆ, ಈ ಚಿತ್ರ ಆಕ್ಷ್ಯನ್​ಪ್ರಿಯರಿಗೆ ರಸದೂಟ ಎನ್ನುವುದರಲ್ಲಿ ಎರಡು ಮಾತಿಲ್ಲ.

  ಇದನ್ನೂ ಓದಿ: ಲಾಟರಿಯಲ್ಲಿ 75 ಲಕ್ಷ ರೂ. ಗೆದ್ದ ಬಳಿಕ ಹೆದರಿ ಪೊಲೀಸ್ ಠಾಣೆಗೆ ಹೋದ ಕಾರ್ಮಿಕ!

  ‘ಕಬ್ಜ’ ಚಿತ್ರದ ಟ್ರೇಲರ್ ನೋಡಿದ ಹಲವರು, ಚಿತ್ರದಲ್ಲಿ ‘ಕೆಜಿಎಫ್’ ಪ್ರಭಾವ ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟರು. ನಿರ್ದೇಶಕ ಆರ್. ಚಂದ್ರು ಸಹ ಆ ಚಿತ್ರದಿಂದ ಸ್ಪೂರ್ತಿ ಪಡೆದೇ ಈ ಚಿತ್ರ ಮಾಡಿದ್ದಾಗಿ ಹೇಳಿದ್ದರು. ‘ಕೆಜಿಎಫ್’ ಪ್ರಭಾವ ಚಂದ್ರು ಮೇಲೆ ಜಾಸ್ತಿಯೇ ಆಗಿದೆ ಎಂದರೆ ತಪ್ಪಿಲ್ಲ. ಅದೇ ತರಹದ ಕೆಲವು ಅಮಾನುಷ ಪಾತ್ರಗಳು, ಶೈಲಿ, ಮೇಕಿಂಗ್, ತಂತ್ರ, ಗ್ರಾಫಿಕ್ಸ್ ಈ ಚಿತ್ರದಲ್ಲೂ ಮುಂದುವರೆದಿದೆ. ಸಾಕಷ್ಟು ತಯಾರಿ ಮಾಡಿಕೊಂಡೇ ಕಣಕ್ಕಿಳಿದಿದ್ದಾರೆ ಚಂದ್ರು. ಆದರೆ, ಇಂಥದ್ದೊಂದು ದೊಡ್ಡ ಕ್ಯಾನ್ವಾಸ್​ನ ಚಿತ್ರಕ್ಕೆ ಇನ್ನೂ ತಯಾರಿ ಬೇಕಿತ್ತೇನೋ?

  ಇದನ್ನೂ ಓದಿ: ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ ‘ಹೊಗೆ’ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?

  ಉಪೇಂದ್ರ ಇದುವರೆಗೂ ಸಾಕಷ್ಟು ರೌಡಿಸಂ ಚಿತ್ರಗಳಲ್ಲಿ ನಟಿಸಿದ್ದರೂ, ಈ ಚಿತ್ರವೇ ಬೇರೆ. ಅರ್ಕೆಶ್ವರ ಪಾತ್ರದಲ್ಲಿ ಅವರ ಸಾಮರ್ಥ್ಯವನ್ನು ಇನ್ನಷ್ಟು ಬಳಸಿಕೊಳ್ಳಬಹುದಿತ್ತು. ಸುದೀಪ್ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಸ್ವಲ್ಪ ಹೊತ್ತೇ ಆದರೂ, ಅವರ ಧ್ವನಿ ಇಡೀ ಚಿತ್ರವನ್ನು ಮುನ್ನಡೆಸುತ್ತಾ ಹೋಗುತ್ತದೆ. ಶಿವರಾಜಕುಮಾರ್ ಅವರ ಪಾತ್ರಕ್ಕೆ ಮುಂದುವರೆದ ಭಾಗದಲ್ಲಷ್ಟೇ ಸ್ಪಷ್ಟತೆ ಸಿಗಬೇಕು. ಶ್ರೀಯಾ ಶರಣ್ ಮುದ್ದಾಗಿ ಕಂಡರೂ, ಅವರ ಭಾಷೆ ಬಹಳ ಗ್ರಾಂಥಿಕವಾಗಿದೆ. ಮುರಳಿ ಶರ್ಮ ತುಟಿಚಲನೆಗೂ, ಸಂಭಾಷಣೆಗೆ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಮಿಕ್ಕಂತೆ ಅಸಂಖ್ಯ ಪಾತ್ರಗಳಿವೆಯಾದರೂ, ಆ ಪೈಕಿ ಗಮನ ಸೆಳೆಯುವುದು ಅಶ್ವತ್ಥ್ ನೀನಾಸಂ ಅವರ ಪಾತ್ರ ಮಾತ್ರ. ಇದೊಂದು ಅಪ್ಪಟ ತಂತ್ರಜ್ಞರ ಸಿನಿಮಾ. ಛಾಯಾಗ್ರಾಹಣ, ಕಲಾನಿರ್ದೇಶನ, ಸಂಗೀತ ಈ ಎಲ್ಲ ವಿಭಾಗಗಳೂ ಗಮನಸೆಳೆಯುತ್ತವೆ. ಹಿನ್ನೆಲೆ ಸಂಗೀತದಲ್ಲಿ ರವಿ ಬಸ್ರೂರು ಕೆಲವೊಮ್ಮೆ ವಯಲೆಂಟ್ ಆಗುತ್ತಾರೆ.

  ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

  ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts