More

    ಕಡೆಗೂ ಮೈದಾನದಲ್ಲಿ ನಗು ಚೆಲ್ಲಿದ ಸುನಿಲ್ ನರೈನ್​! ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದ ವಿಡಿಯೋ ವೈರಲ್

    ಚೆನ್ನೈ: ಐಪಿಎಲ್​ ಫೈನಲ್ ಅಂದ್ರೆ ಅದು ರಣರೋಚಕ ಎಂದೇ ಅಪಾರ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿರುತ್ತಾರೆ. ಅದೇ ಭರವಸೆಯನ್ನು ಇಟ್ಟುಕೊಂಡು, ಕೆಕೆಆರ್​ ಮತ್ತು ಎಸ್​ಆರ್​ಎಚ್​ ನಡುವಿನ ಫೈನಲ್ ಹಣಾಹಣಿ ನೋಡಲು ಆಗಮಿಸಿದ್ದ ವೀಕ್ಷಕರ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಯಿತು. ಕಾರಣ, ಅತ್ಯಂತ ಕಳಪೆ ಪ್ರದರ್ಶನ ನೀಡಿದ ಸನ್​ರೈಸರ್ಸ್​ ಪಡೆ ಕೊಲ್ಕತ್ತಾ ತಂಡಕ್ಕೆ ಸುಲಭವಾಗಿ ಗೆಲುವು ಕೊಟ್ಟಿತು. ಇದು ‘ಜಸ್ಟ್​ ಒನ್​ ಸೈಡೆಡ್​ ಮ್ಯಾಚ್’ ಎನ್ನುವಂತೆ ಮಾಡಿತು. ಈ ಸೀಸನ್​ನ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತ ಬಂದ ಶ್ರೇಯಸ್​ ಅಯ್ಯರ್ ಪಡೆ, ಫೈನಲ್‌ನಲ್ಲಿಯೂ ಅದೇ ಪ್ರಾಬಲ್ಯವನ್ನು ಮುಂದುವರಿಸಿ, ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಹಿಡಿದು ಸಂಭ್ರಮಿಸಿತು.

    ಇದನ್ನೂ ಓದಿ: ಗೌತಮ್ ಗಂಭೀರ್​ನ ತಬ್ಬಿಕೊಂಡು ಹಣೆಗೆ ಮತ್ತಿಟ್ಟ ಎಸ್​​ಆರ್​ಕೆ; ಕೆಕೆಆರ್ ಗೆಲವು ಸಂಭ್ರಮಿಸಿದ ಕಿಂಗ್​ ಖಾನ್​

    ಪಂದ್ಯವನ್ನು ಖಚಿತವಾಗಿ ಗೆಲ್ತೀವಿ ಎಂಬುದನ್ನು ಮೊದಲ 8 ಓವರ್​ಗಳಲ್ಲೇ ಅರಿತ ಕೆಕೆಆರ್ ಪಡೆ, ಬೌಂಡರಿ ಲೈನ್​ನಲ್ಲಿ ನಿಂತು, ಸಂಭ್ರಮಿಸಲು ತುದಿಗಾಲಿನಲ್ಲಿ ನಿಂತಿತ್ತು. ಒಂದೆಡೆ ತನ್ನ ತಂಡ ಹೀನಾಯ ಸೋಲು ಅನುಭವಿಸಿತು ಎಂದು ಕ್ಯಾಮರಾ ಮುಂದೆಯೇ ಕಣ್ಣೀರಿಟ್ಟ ಎಸ್​ಆರ್​ಎಚ್​ ಮಾಲೀಕಿ ಕಾವ್ಯಾ ಮಾರನ್​, ತದನಂತರ ಇತರರ ಸಾಂತ್ವಾನದೊಂದಿಗೆ ತಂಡದವರನ್ನು ಚಪ್ಪಾಳೆ ತಟ್ಟಿ, ಹುರಿದುಂಬಿಸಿದರು. ಆದ್ರೆ, ಗೆಲುವಿನ ಕೇಕೆ ಹಾಕಿದ ಕೆಕೆಆರ್ ಆಟಗಾರರು, ವಿಕೆಟ್ ಕಿತ್ತು, ಪರಸ್ಪರ ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು.

    ಈ ಹಿಂದಿನಿಂದಲೂ ನಮಗೆಲ್ಲಾ ತಿಳಿದಿರುವಂತೆ ಕೆಕೆಆರ್​ನ ಸ್ಪೋಟಕ ಬ್ಯಾಟ್ಸ್​ಮನ್​ ಮತ್ತು ಕಿಲಾಡಿ ಬೌಲರ್​ ಸುನಿಲ್ ನರೈನ್​, ಎದುರಾಳಿಗಳ ವಿಕೆಟ್ ಪಡೆದರು, ಆ ಪಂದ್ಯ ರೋಚಕವಾಗಿ ಗೆದ್ದರು ಸಹ ನಗುವಿರಲ್ಲಿ, ಗಂಟು ಹಾಕಿಕೊಂಡ ಮುಖವನ್ನು ಅರಳಿಸಲು ಕೂಡ ಪ್ರಯತ್ನಿಸುತ್ತಿರಲ್ಲಿಲ್ಲ.

    ಇದನ್ನೂ ಓದಿ: ಮಾವಿನ ಹಣ್ಣಿನ ಅತಿಯಾದ ಸೇವನೆಯ ದುಷ್ಪರಿಣಾಮಗಳೇನು? ಮ್ಯಾಂಗೋ ಪ್ರಿಯರು ತಿಳಿಯಬೇಕಾದ ಮಾಹಿತಿಯಿದು…!

    ಇಂತಹ ಸ್ಟಾರ್​ ಆಟಗಾರರನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಿ, ಟೀಕಿಸಿದ್ದರು. ಅದಾದ ಮೇಲೂ ನರೈನ್ ಎಲ್ಲಿಯೂ ನಗು ಬೀರಿದ್ದು, ನಾವ್ಯಾರು ನೋಡಲೇ ಇಲ್ಲ. ಆದ್ರೆ, ನಿನ್ನೆ ಟ್ರೋಫಿ ಗೆಲ್ಲುತ್ತಿದ್ದಂತೆ ಸುನಿಲ್ ನಗು ಚೆಲ್ಲಿದ್ದು, ಕೆಕೆಆರ್ ಫ್ರಾಂಚೈಸಿ ಹಂಚಿಕೊಂಡ ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ,(ಏಜೆನ್ಸೀಸ್).

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಅಂದ್ರೆ, ನೀನು 500 ರನ್​ ಗಳಿಸಿ ಏನು ಫಲ? ಸಂಜುಗೆ ಬೆವರಿಳಿಸಿದ ಮಾಜಿ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts