More

    ಇರ್ಫಾನ್​ಗೆ ಅತ್ಯುತ್ತಮ ನಟ ಮತ್ತು ಜೀವಮಾನ ಸಾಧನೆ ಪ್ರಶಸ್ತಿ; ಹಲವು ಟ್ರೋಫಿ ಗೆದ್ದ ‘ಥಪ್ಪಡ್’ ಚಿತ್ರ

    ನವದೆಹಲಿ : 66ನೇ ಫಿಲ್ಮ್​ಫೇರ್ ಪ್ರಶಸ್ತಿ ಪ್ರದಾನ ಸಮಾರಂಭವು ನಿನ್ನೆ ಮುಂಬೈನಲ್ಲಿ ನಡೆಯಿತು. ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿಯು ‘ಅಂಗ್ರೇಜಿ ಮೀಡಿಯಂ’ ಚಿತ್ರದ ನಟನೆಗಾಗಿ ಮರಣೋತ್ತರವಾಗಿ ಇರ್ಫಾನ್​ ಖಾನ್ ಅವರಿಗೆ ಲಭಿಸಿದೆ. ಅತ್ಯುತ್ತಮ ನಟಿ ಪ್ರಶಸ್ತಿಯು ‘ಥಪ್ಪಡ್’ ಚಿತ್ರದ ನಟನೆಗಾಗಿ ತಾಪ್ಸೀ ಪನ್ನು ಅವರಿಗೆ ಲಭಿಸಿದೆ.

    ‘ಥಪ್ಪಡ್’​ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಯೊಂದಿಗೆ ಅತ್ಯುತ್ತಮ ಕಥೆ, ಸಂಪಾದನೆ, ಹಿನ್ನೆಲೆ ಸಂಗೀತ, ಧ್ವನಿ ವಿನ್ಯಾಸಗಳಿಗೂ ಪ್ರಶಸ್ತಿಗಳನ್ನು ಪಡೆದುಕೊಂಡಿತು. ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ‘ಗುಲಾಬೊ ಸಿತಾಬೊ’ ಚಿತ್ರದ ನಟನೆಗಾಗಿ ಬೆಸ್ಟ್ ಆ್ಯಕ್ಟರ್ (ಕ್ರಿಟಿಕ್ಸ್) ಪ್ರಶಸ್ತಿ ಲಭಿಸಿತು. ಸಾಯಿಫ್​ ಅಲಿ ಖಾನ್​ಗೆ ‘ತಾನ್ಹಾಜಿ: ದಿ ಅನ್ಸಂಗ್ ವಾರಿಯರ್’ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದರೆ, ಕಾಜಲ್​ ನಿರ್ಮಿಸಿದ ‘ದೇವಿ’ ಚಿತ್ರಕ್ಕೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಲಭಿಸಿತು.

    ಇದನ್ನೂ ಓದಿ: ‘ಫರಹಾನ್ ಹ್ಯಾಸ್ ಟು ಫಾಲೋ ರಾಂಚೋ’ ಎಂದು ಕರೊನಾ ಸುದ್ದಿ ಕೊಟ್ಟ ನಟ !

    ಕಳೆದ ವರ್ಷ ಏಪ್ರಿಲ್​ನಲ್ಲಿ, ದೀರ್ಘಕಾಲ ಕ್ಯಾನ್ಸರ್​ನಿಂದ ನರಳಿ ತಮ್ಮ 53 ನೇ ವಯಸ್ಸಿನಲ್ಲಿ ಸಾವಪ್ಪಿದ ಪ್ರತಿಭಾನ್ವಿತ ನಟ ಇರ್ಫಾನ್​ರಿಗೆ ಲೈಫ್​ಟೈಮ್ ಅಚೀವ್​ಮೆಂಟ್​ ಅವಾರ್ಡ್ ಕೂಡ ನೀಡಲಾಯಿತು. ಈ ಟ್ರೋಫಿಗಳನ್ನು ಇರ್ಫಾನ್​ ಅವರ ಮಗ ಬಾಬಿಲ್ ಸ್ವೀಕರಿಸಿದರು. (ಏಜೆನ್ಸೀಸ್)

    -: 2021ರ ಫಿಲ್ಮ್​ಫೇರ್ ಪ್ರಶಸ್ತಿಗಳ ವಿಜೇತರ ಪಟ್ಟಿ ಹೀಗಿದೆ :-

    ಅತ್ಯುತ್ತಮ ಚಿತ್ರ – ಥಪ್ಪಡ್
    ಅತ್ಯುತ್ತಮ ನಿರ್ದೇಶಕ – ಓಂ ರೌತ್ (ತಾನ್ಹಾಜಿ: ದಿ ಅನ್ಸಂಗ್ ವಾರಿಯರ್ ಚಿತ್ರಕ್ಕಾಗಿ)
    ಅತ್ಯುತ್ತಮ ಚಲನಚಿತ್ರ (ವಿಮರ್ಶಕರು) – ಪ್ರತೀಕ್ ವತ್ಸ್ (ಈಬ್ ಅಲ್ಲೆ ಓಹ್! ಚಿತ್ರ)
    ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟ ಇರ್ಫಾನ್ (ಆಂಗ್ರೇಜಿ ಮೀಡಿಯಂ ಚಿತ್ರಕ್ಕಾಗಿ)
    ಅತ್ಯುತ್ತಮ ನಟ (ವಿಮರ್ಶಕರು) – ಅಮಿತಾಬ್ ಬಚ್ಚನ್ (ಗುಲಾಬೊ ಸೀತಾಬೊ ಚಿತ್ರಕ್ಕಾಗಿ)
    ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ – ತಾಪ್ಸೀ ಪನ್ನು (ಥಪ್ಪಡ್ ಚಿತ್ರಕ್ಕಾಗಿ)
    ಅತ್ಯುತ್ತಮ ನಟಿ (ವಿಮರ್ಶಕರು) – ತಿಲೋತ್ತಮಾ ಶೋಮ್ (ಸರ್ ಚಿತ್ರಕ್ಕಾಗಿ)
    ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ – ಸೈಫ್ ಅಲಿ ಖಾನ್ (ತಾನ್ಹಾಜಿ: ದ ಅನ್ಸಂಗ್ ವಾರಿಯರ್ ಚಿತ್ರಕ್ಕಾಗಿ)
    ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ – ಫಾರೋಖ್ ಜಾಫರ್ (ಗುಲಾಬೊ ಸೀತಾಬೊ ಚಿತ್ರಕ್ಕಾಗಿ)
    ಅತ್ಯುತ್ತಮ ಕಥೆ – ಅನುಭವ್ ಸುಶೀಲಾ ಸಿನ್ಹಾ ಮತ್ತು ಮೃನ್ಮಯಿ ಲಗೂ ವೈಕುಲ್ (ಥಪ್ಪಡ್)
    ಅತ್ಯುತ್ತಮ ಚಿತ್ರಕಥೆ – ರೋಹೆನಾ ಗೆರಾ (ಸರ್)
    ಅತ್ಯುತ್ತಮ ಸಂಭಾಷಣೆ – ಜುಹಿ ಚತುರ್ವೇದಿ (ಗುಲಾಬೊ ಸೀತಾಬೊ)
    ಅತ್ಯುತ್ತಮ ಚೊಚ್ಚಲ ನಿರ್ದೇಶಕ – ರಾಜೇಶ್ ಕೃಷ್ಣನ್ (ಲೂಟ್‌ಕೇಸ್ ಚಿತ್ರಕ್ಕಾಗಿ)
    ಅತ್ಯುತ್ತಮ ಚೊಚ್ಚಲ ನಟಿ ಅಲಯಾ ಎಫ್. (ಜವಾನಿ ಜಾನೆಮನ್ ಚಿತ್ರಕ್ಕಾಗಿ)
    ಅತ್ಯುತ್ತಮ ಸಂಗೀತ ಆಲ್ಬಮ್ – ಪ್ರೀತಮ್- (ಲುಡೋ)
    ಅತ್ಯುತ್ತಮ ಸಾಹಿತ್ಯ – ಗುಲ್ಜಾರ್ (ಛಪ್ಪಕ್ ಚಿತ್ರದ ಛಪ್ಪಕ್ ಗೀತೆ)
    ಅತ್ಯುತ್ತಮ ಹಿನ್ನೆಲೆ ಗಾಯಕ – ರಾಘವ್ ಚೈತನ್ಯ – ಏಕ್ ತುಕ್ಡಾ ಧೂಪ್ (ಥಪ್ಪಡ್)
    ಅತ್ಯುತ್ತಮ ಹಿನ್ನೆಲೆ ಗಾಯಕಿ – ಆಸೀಸ್ ಕೌರ್- ಮಲಾಂಗ್ (ಮಲಾಂಗ್)
    ಜೀವಮಾನ ಸಾಧನೆ ಪ್ರಶಸ್ತಿ – ಇರ್ಫಾನ್
    ಅತ್ಯುತ್ತಮ ಆಕ್ಷನ್ – ರಂಜಾನ್ ಬುಲಟ್, ಆರ್​​.ಪಿ.ಯಾದವ್ (ತಾನ್ಹಾಜಿ : ದಿ ಅನ್ಸಂಗ್ ವಾರಿಯರ್)
    ಅತ್ಯುತ್ತಮ ಹಿನ್ನೆಲೆ ಸಂಗೀತ – ಮಂಗೇಶ್ ಉರ್ಮಿಳಾ ಧಕ್ಡೆ (ಥಪ್ಪಡ್)
    ಅತ್ಯುತ್ತಮ ಛಾಯಾಗ್ರಹಣ – ಅವಿಕ್ ಮುಖೋಪಾಧ್ಯಾಯ (ಗುಲಾಬೊ ಸೀತಾಬೋ)
    ಅತ್ಯುತ್ತಮ ನೃತ್ಯ ಸಂಯೋಜನೆ – ಫರಾಹ್ ಖಾನ್- ದಿಲ್ ಬೆಚಾರಾ ಹಾಡು (ದಿಲ್ ಬೆಚಾರಾ)
    ಅತ್ಯುತ್ತಮ ವೇಷಭೂಷಣ ವಿನ್ಯಾಸ – ವೀರಾ ಕಪೂರ್ ಇ. (ಗುಲಾಬೊ ಸೀತಾಬೊ)
    ಅತ್ಯುತ್ತಮ ಸಂಪಾದನೆ – ಯಶಾ ಪುಷ್ಪಾ ರಾಮ್‌ಚಂದಾನಿ (ಥಪ್ಪಡ್)
    ಅತ್ಯುತ್ತಮ ನಿರ್ಮಾಣ ವಿನ್ಯಾಸ – ಮಾನಸಿ ಧ್ರುವ್ ಮೆಹ್ತಾ (ಗುಲಾಬೊ ಸೀತಾಬೊ)
    ಅತ್ಯುತ್ತಮ ಧ್ವನಿ ವಿನ್ಯಾಸ – ಕಾಮೋದ್ ಖರಡೆ (ಥಪ್ಪಡ್)
    ಅತ್ಯುತ್ತಮ ವಿಎಫ್‌ಎಕ್ಸ್ – ಪ್ರಸಾದ್ ಸುತರ್ (ಎನ್​ವೈ ವಿಎಫ್‌ಎಕ್ಸ್ ವಾಲಾ) (ತಾನ್ಹಾಜಿ: ದ ಅನ್‌ಸಂಗ್ ವಾರಿಯರ್ ಚಿತ್ರಕ್ಕಾಗಿ)
    ಕಿರುಚಿತ್ರ ಪ್ರಶಸ್ತಿಗಳು
    ಅತ್ಯುತ್ತಮ ಚಿತ್ರ (ಫಿಕ್ಷನ್) – ಶಿವರಾಜ್ ವೈಚಲ್ (ಅರ್ಜುನ್)
    ಅತ್ಯುತ್ತಮ ಚಿತ್ರ (ನಾನ್-ಫಿಕ್ಷನ್) – ನಿತೇಶ್ ರಮೇಶ್ ಪರುಲೇಕರ್ (ಬ್ಯಾಕ್ಯಾರ್ಡ್ ವೈಲ್ಡ್​ಲೈಫ್ ಸಾಂಕ್ಚುವರಿ)
    ಅತ್ಯುತ್ತಮ ನಟಿ – ಪೂರ್ತಿ ಸವರ್ದೇಕರ್ ​​(ದ ಫಸ್ಟ್ ವೆಡ್ಡಿಂಗ್)
    ಅತ್ಯುತ್ತಮ ನಟ – ಅರ್ಣವ್ ಅಬ್ದಗಿರೆ (ಅರ್ಜುನ್)
    ಅತ್ಯುತ್ತಮ ಚಿತ್ರ (ಜನಪ್ರಿಯ ಆಯ್ಕೆ) ದೇವಿ

    “ರೊಕ್ಕ ಕೊಟ್ಟು ಗೋವಾಗೆ ಕಳಿಸ್ತಿದಾರೆ…” ಸಿಡಿ ಲೇಡಿಯ ಎರಡನೇ ಆಡಿಯೋದಲ್ಲಿ ಸ್ಫೋಟಕ ಮಾಹಿತಿ!

    ಏರ್ ಇಂಡಿಯಾ ಖಾಸಗೀಕರಣಕ್ಕೆ ದಿನಗಣನೆ; ಶೇ. 100 ರಷ್ಟು ಬಂಡವಾಳ ಹಿಂತೆಗೆತ

    ಪ್ರೇಮ ನಿವೇದನೆಗೆ ಹೀಗೊಂದು ‘ಮಾರ್ಗ’! ರಸ್ತೆ ಮೇಲೆ ‘ಐ ಲವ್ ಯು’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts