More

    VIDEO: ಫಿಲಂಫೇರ್​ ಅಥವಾ ಯಾವುದೇ ಸ್ಟುಪಿಡ್​ ಅವಾರ್ಡ್​ ತೆಗೆದುಕೊಳ್ಳಲು ಸಲ್ಲು ಹೋಗಲ್ವಂತೆ: ಏತಕ್ಕಾಗಿ ಈ ನಿರ್ಧಾರ?

    ಮುಂಬೈ: ಫಿಲಂಫೇರ್​ ಅವಾರ್ಡ್ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಬಾಲಿವುಡ್​ನ ಪ್ರಸಿದ್ಧ ನಟ ಸಲ್ಮಾನ್​ ಖಾನ್​ ತಾನು ಯಾವುದೇ ಅವಾರ್ಡ್​ ಫಂಕ್ಷನ್​ಗೆ ಹೋಗಲ್ಲ ಎಂದಿದ್ದಾರೆ. ಅರೇ ಇದೇನಪ್ಪಾ ಹೀಗೆಂದಿದ್ದಾರೆ ಅಂತ ಯೋಚಿಸ್ತಿದೀರಾ? ಹಾಗಾದರೆ ಮುಂದೆ ಓದಿ.

    ನಟ ಸಲ್ಮಾನ್​ ಖಾನ್​ ಅವರ ಹಳೆಯ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಯಾವುದೋ ಸಿನಿಮಾದಲ್ಲಿ “ತಮ್ಮ ಬಗ್ಗೆ ತಮಗೆ ನಂಬಿಕೆ ಇಲ್ಲದವರು ಮಾತ್ರ ಅವಾರ್ಡ್​ ಬಯಸುತ್ತಾರೆ ಎಂದು ನನಗನಿಸುತ್ತೆ. ನಾನು ಫಿಲಂಫೇರ್​ ಆಗಲೀ ಅಥವಾ ಯಾವುದೇ ಸ್ಟುಪಿಡ್​ ಅವಾರ್ಡ್​ ಫಂಕ್ಷನ್​ಗಾಗಲೀ ಹೋಗೋದಿಲ್ಲ. ರಾಷ್ಟ್ರೀಯ ಪ್ರಶಸ್ತಿ ಬಂದರೆ ಮಾತ್ರ ಹೋಗಿ ತಗೋತೀನಿ” ಎಂದು ಡೈಲಾಗ್​ ಹೇಳಿರೋ ವಿಡಿಯೋ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

    ಫೆ.15ರಂದು ಫಿಲಂಫೇರ್​ 2020 ಕಾರ್ಯಕ್ರಮ ನಡೆದಿದ್ದು ಗಲ್ಲಿ ಬಾಯ್​ ಸಿನಿಮಾ ದಾಖಲೆಯೊಂದನ್ನು ಬರೆದಿದೆ. ಬರೋಬ್ಬರಿ 13 ಅವಾರ್ಡ್​ಗಳನ್ನು ಬಾಚಿಕೊಂಡಿರುವ ಈ ಸಿನಿಮಾ ಇದುವರೆಗೂ ಬಾಲಿವುಡ್​ನಲ್ಲಿ ಅತಿ ಹೆಚ್ಚು ಫಿಲಂಫೇರ್​ ​ ಅವಾರ್ಡ್​ ಪಡೆದ ಸಿನಿಮಾ ಎನ್ನುವ ಹೆಮ್ಮೆಗೆ ಪಾತ್ರವಾಗಿದೆ. ಆದರೆ ಗಲ್ಲಿ ಬಾಯ್​ಗೆ ಎಲ್ಲಾ ಅವಾರ್ಡ್​ಗಳು ಹೋಗಿದ್ದು ತಮ್ಮ ನೆಚ್ಚಿನ ನಟ/ನಟಿಯ ಸಿನಿಮಾಕ್ಕೆ ಅವಾರ್ಡ್​ ಸಿಕ್ಕಿಲ್ಲ ಎಂದು ಸಿಟ್ಟಿಗೆದ್ದಿರುವ ಅಭಿಮಾನಿಗಳು ಬಾಯ್​ಕಾಟ್​ ಫಿಲಂಫೇರ್​ ಅಭಿಯಾನವನ್ನು ಆರಂಭಿಸಿದ್ದಾರೆ. #BoycottFilmfare ಎನ್ನುವ ಹ್ಯಾಷ್​ಟ್ಯಾಗ್​ನೊಂದಿಗೆ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದು, ನಿನ್ನೆ ಈ ಹ್ಯಾಷ್​ಟ್ಯಾಗ್​ ಟ್ರೆಂಡಿಂಗ್​ ಲಿಸ್ಟ್ ಸೇರಿಕೊಂಡಿತ್ತು.

    ಇದೀಗ #BoycottFilmfare ಅಭಿಯಾನದ ಬೆನ್ನಲ್ಲೇ ಸಲ್ಮಾನ್​ ಖಾನ್​ ಅವರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದ ಮೂಲಕ ಫಿಲಂಫೇರ್​ ಅವಾರ್ಡ್​ ಬಗ್ಗೆ ತಮ್ಮ ಬೇಸರವನ್ನು ಸಲ್ಲು ಬಾಯ್​ ಫ್ಯಾನ್ಸ್​ ಹೊರಹಾಕುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts