More

    ಜಾಮಿಯಾ ವಿವಿ ವಿದ್ಯಾರ್ಥಿಗಳ ಪರ ವಹಿಸಿದ್ದ ನಟಿ ತಾಪ್ಸಿ ಪನ್ನು ಅಭಿನಯದ ‘ತಪ್ಪಡ್’​ಗಿಲ್ಲ ತೆರಿಗೆ

    ಇಂಡೋರ್​: ಬಾಲಿವುಡ್​ ನಟಿ ತಾಪ್ಸಿ ಪನ್ನು ನಟಿಸಿರುವ ತಪ್ಪಡ್ ಸಿನಿಮಾವನ್ನು ತೆರಿಗೆ ರಹಿತ ಎಂದು ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಮಧ್ಯಮ ವರ್ಗದ ಹೆಣ್ಣು ಮಗಳೊಬ್ಬಳು ಗಂಡನ ಮನೆಯಲ್ಲಿ ಅನುಭವಿಸುವ ಸವಾಲುಗಳನ್ನು ಎತ್ತಿ ತೋರಿಸಿರುವ ಈ ಸಿನಿಮಾಕ್ಕೆ ಮೂರು ತಿಂಗಳುಗಳ ಕಾಲ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಹಾಕಲಾಗುವುದಿಲ್ಲ ಎಂದು ತಿಳಿಸಲಾಗಿದೆ.

    ಅನುಭವ್​ ಸಿಂಗ್​ ನಿರ್ದೇಶಿಸಿರುವ ಮಹಿಳಾ ಪ್ರಧಾನ ಚಿತ್ರವಾದ ತಪ್ಪಡ್​ ಸಿನಿಮಾದಲ್ಲಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಧ್ಯಮ ವರ್ಗದ ವಿದ್ಯಾವಂತ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾಪ್ಸಿ ಸಾಮಾನ್ಯ ಹೆಣ್ಣು ಮಗಳ ಕರುಣಾಜನಕ ಕಥೆಯನ್ನು ಹೇಳಲಿದ್ದಾರೆ. ಈ ಸಿನಿಮಾ ಶುಕ್ರವಾರದಂದು(ಫೆ.28) ಬಿಡುಗಡೆಯಾಗಲಿದೆ.

    ಸಿನಿಮಾಗಳಿಗೆ ಶೇ.18 ತೆರಿಗೆಯನ್ನು ಹಾಕಲಾಗುತ್ತದೆ. ಆದರೆ ಒಳ್ಳೆಯ ಸಂದೇಶವನ್ನು ಹೊಂದಿರುವ ಈ ಚಿತ್ರಕ್ಕೆ ತೆರಿಗೆ ಹಾಕಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

    ನಟಿ ತಾಪ್ಸಿ ಪನ್ನು ಸಿಎಎ ವಿರುದ್ಧ ಹೋರಾಟ ಮಾಡಿದ್ದ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಬೆಂಬಲಿಸಿ, ಲಾಠಿ ಚಾರ್ಜ್​ ಮಾಡಿದ್ದ ದೆಹಲಿ ಪೊಲೀಸರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿಂದೆ ದೀಪಿಕಾ ಪಡುಕೋಣೆ ನಟಿಸಿದ್ದ ಚಪಾಕ್​ ಸಿನಿಮಾಕ್ಕೂ ಸಹ ಮಧ್ಯಪ್ರದೇಶದ ಸರ್ಕಾರ ತೆರಿಗೆ ವಿಧಿಸುವುದಿಲ್ಲ ಎಂದು ತಿಳಿಸಿತ್ತು. ಅದಾದ ನಂತರ ನಟಿ ಜೆಎನ್​ಯು ವಿದ್ಯಾರ್ಥಿಗಳ ಜತೆ ನಿಂತು ಸಿಎಎ ವಿರುದ್ಧದ ಹೋರಾಟಕ್ಕೆ ಬೆಂಬಲಿಸಿದ ನಂತರ ಬಾಯ್​ಕಾಟ್​ ಚಪಾಕ್​ ಎಂಬ ದೊಡ್ಡ ಮಟ್ಟದ ಆಂದೋಲನ ನಡೆದಿತ್ತು. ಇದರಿಂದಾಗಿ ಚಪಾಕ್​ ಸಿನಿಮಾ ನಿರೀಕ್ಷೆಯಷ್ಟು ಯಶಸ್ಸು ಕಂಡಿರಲಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts