More

    ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ರಾಹುಲ್​ ಗಾಂಧಿ ಕೊಟ್ಟ ಮೊದಲ ಪ್ರತಿಕ್ರಿಯೆ ಹೀಗಿದೆ…

    ನವದೆಹಲಿ: ಲೋಕಸಭಾ ಸದಸ್ಯ ಸ್ಥಾನದಿಂದ ತಮ್ಮನ್ನು ಅನರ್ಹಗೊಳಸಿದರ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ನಾನು ಯಾವುದೇ ಬೆಲೆ ತರಲು ಸಿದ್ಧ ಎಂಬ ಮಾತುಗಳನ್ನಾಡಿದ್ದಾರೆ.

    2019ರ ಮಾನಹಾನಿ ಪ್ರಕರಣದಲ್ಲಿ ರಾಹುಲ್​ ಗಾಂಧಿ ಅವರನ್ನು ಸೂರತ್​ ನ್ಯಾಯಾಲಯ ದೋಷಿ ಎಂದು ತೀರ್ಪು ಪ್ರಕಟಿಸಿದ ದಿನದ ಬೆನ್ನಲ್ಲೇ ರಾಹುಲ್​ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್​, ನಾನು ಭಾರತೀಯರ ಧ್ವನಿಗಾಗಿ ಹೋರಾಡುತ್ತಿದ್ದೇನೆ. ಇದಕ್ಕಾಗಿ ನಾನು ಯಾವುದೇ ಬೆಲೆ ತರಲು ಸಿದ್ಧ ಎಂದು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ: ಹುಡುಗಿ ಕೂರಿಸಿಕೊಂಡು ಬೇಕಾಬಿಟ್ಟಿ ಬೈಕ್​ ಚಲಾಯಿಸ್ತೀರಾ? ಹಾಗಿದ್ರೆ ಹುಷಾರ್​! ಈ ಸ್ಟೋರಿ ಓದಲೇಬೇಕು

    ಕೇರಳದ ವಯನಾಡು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಲೋಕಸಭಾ ಸದಸ್ಯ ರಾಹುಲ್​ ಗಾಂಧಿ ಅವರು 2019ರ ಮಾನಹಾನಿ ಪ್ರಕರಣದಲ್ಲಿ 2023ರ ಮಾರ್ಚ್​ 23ರಂದು ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಭಾರತದ ಸಂವಿಧಾನದ ಪ್ರಜಾಪ್ರತಿನಿಧಿ ಕಾಯಿದೆ 1951 ಸೆಕ್ಷನ್​ 8ರ ಆರ್ಟಿಕಲ್​ 102(1)(e) ಅಡಿಯಲ್ಲಿ ರಾಹುಲ್​ ಗಾಂಧಿ ಅವರನ್ನು ಲೋಕಸಭಾ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಲೋಕಸಭೆಯ ಕಾರ್ಯದರ್ಶಿ ನೋಟಿಫಿಕೇಶನ್​ ಹೊರಡಿಸಿದ್ದಾರೆ.

    ಅನರ್ಹಗೊಳಿಸಿರುವುದರಿಂದ ಕೇರಳದ ವಯನಾಡು ಕ್ಷೇತ್ರ ಇದೀಗ ಖಾಲಿ ಉಳಿದಿದೆ. ಚುನಾವಣಾ ಆಯೋಗ ವಿಶೇಷ ಚುನಾವಣೆಯನ್ನು ನಡೆಸಲಿದೆ. ದೆಹಲಿಯಲ್ಲಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲು ರಾಹುಲ್​ ಗಾಂಧಿಗೆ ಒಂದು ತಿಂಗಳ ಕಾಲಾವಕಾಶ ಸಿಗಲಿದೆ.

    ಈ ನಿರ್ಧಾರದ ಹಿಂದೆ ಕುತಂತ್ರ ಅಡಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಸರ್ಕಾರಕ್ಕೆ ಕಠಿಣ ಪ್ರಶ್ನೆಗಳ ಮೂಲಕ ರಾಹುಲ್​ ಕಠಿಣ ಸವಾಲಾಗಿದ್ದರು. ಅವರ ಬಾಯಿ ಮುಚ್ಚಿಸಲು ಕೇಂದ್ರ ಸರ್ಕಾರ ಈ ನಡೆ ಅನುಸರಿಸಿದೆ ಎಂದು ಕಾಂಗ್ರೆಸ್​ ಆರೋಪ ಮಾಡಿದರೆ, ರಾಹುಲ್​ ಅವರನ್ನು ಅನರ್ಹಗೊಳಿಸಿರುವುದು ಕಾನೂನುಬದ್ಧ ಎಂದು ಬಿಜೆಪಿ ಸಮರ್ಥನೆ ನೀಡಿದೆ. ನ್ಯಾಯಾಲಯ ಸ್ವತಂತ್ರವಾಗಿದ್ದು, ಅವರ (ರಾಹುಲ್​ ಗಾಂಧಿ) ಹೇಳಿಕೆ ಮೇಲೆ ಕೋರ್ಟ್​ ತೀರ್ಪು ನೀಡಿದೆ ಎಂದು ಬಿಜೆಪಿ ಹೇಳಿದೆ.

    ಲೋಕಸಭಾ ಕಾರ್ಯದರ್ಶಿಯ ನೋಟಿಫಿಕೇಶನ್​ಗೆ ಕಾಂಗ್ರೆಸ್​ನ ಹಿರಿಯ ನಾಯಕ ಮನೀಶ್​ ತಿವಾರಿ ಅವರು ಪ್ರತಿಕ್ರಿಯೆ ನೀಡಿದ್ದು, ಅನರ್ಹಗೊಳಿಸಿರುವುದು ತಪ್ಪಾದ ನಿರ್ಧಾರ ಎಂದಿದ್ದಾರೆ. ಓರ್ವ ಸಂಸದನನ್ನು ಲೋಕಸಭಾ ಕಾರ್ಯದರ್ಶಿ ಅನರ್ಹಗೊಳಿಸುವಂತಿಲ್ಲ. ಚುನಾವಣಾ ಆಯೋಗದ ಸಮಾಲೋಚನೆಯೊಂದಿಗೆ ರಾಷ್ಟ್ರಪತಿಗಳು ಈ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

    ಇದನ್ನೂ ಓದಿ: 4.5 ಲಕ್ಷ ರೂ.ಗೆ ನವಜಾತ ಶಿಶುವನ್ನು ಮಾರಾಟ ಮಾಡಿದ ತಾಯಿ, 11 ಮಂದಿ ಅರೆಸ್ಟ್​​

    ನಿನ್ನೆ (ಮಾ. 23) ಸೂರತ್​ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ರಾಹುಲ್​ ಗಾಂಧಿ 30 ದಿನಗಳ ವರೆಗೆ ಜಾಮೀನು ಪಡೆದುಕೊಂಡಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಐಪಿಸಿ ಸೆಕ್ಷನ್ 504ರ ಅಡಿಯಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಲಾಗಿದ್ದು, ಈ ಸೆಕ್ಷನ್ ಅಡಿಯಲ್ಲಿ ಗರಿಷ್ಠ ಸಂಭವನೀಯ ಶಿಕ್ಷೆ ಎರಡು ವರ್ಷಗಳಾಗಿದೆ. ಇದೀಗ ಜಾಮೀನು ಪಡೆದಿರುವುದರಿಂದ ಸದ್ಯಕ್ಕೆ ರಾಹುಲ್​ ಅವರು ಜೈಲು ಶಿಕ್ಷೆಯಿಂದ ಪಾರಾಗಿದ್ದಾರೆ.

    ಏನಿದು ಪ್ರಕರಣ?
    2019ರ ಲೋಕಸಭೆ ಚುನಾವಣೆ ವೇಳೆ ಭಾಷಣ ಮಾಡ್ತಿದ್ದ ರಾಹುಲ್ ಗಾಂಧಿ, ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ಅವರು, ಎಲ್ಲ ಮೋದಿಗಳೂ ಕಳ್ಳರು. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದರು.

    ರಾಹುಲ್​ ಹೇಳಿಕೆಯಿಂದ ಸಿಟ್ಟಿಗೆದ್ದಿದ್ದ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ, ದೂರು ದಾಖಲು ಮಾಡಿದ್ದರು. 2019ರ ಏಪ್ರಿಲ್​​​ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್​​ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ನ್ಯಾಯಾಲಯ ರಾಹುಲ್​ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. (ಏಜೆನ್ಸೀಸ್​)

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ವಿಜಯಾನಂದ’ ಬಯೋಪಿಕ್ ಪ್ರದರ್ಶನ; ನೂರಾರು ಜನರಿಂದ ವೀಕ್ಷಣೆ, ಮೆಚ್ಚುಗೆ

    ರಾಜ್ಯದಲ್ಲಿ ಮೂರು ದಿನ ಮಳೆ: ಹಲವು ಜಿಲ್ಲೆಗಳಲ್ಲಿ ಸೆಖೆ ಅನುಭವ

    ‘ಕಥಕ್ಕಳಿ’ ನೃತ್ಯದ ಪ್ರಕಾರ ಮಾತ್ರವಲ್ಲ ಊರಿನ ಹೆಸರು ಹೌದು..!; ಈ ಸುದ್ದಿ ಓದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts