More

    ಮಸಾರಿ ಭಾಗದಲ್ಲಿ ಎಳ್ಳು ಬಿತ್ತನೆ ಅಧಿಕ

    ಯಲಬುರ್ಗಾ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶನಿವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ಬಿತ್ತನೆಗೆ ಜಮೀನು ಸಿದ್ಧಗೊಳಿಸಿದ ರೈತರು ಹೆಸರು, ತೊಗರಿ, ಎಳ್ಳು, ಮೆಕ್ಕೆಜೋಳ, ಸಜ್ಜೆ ಮತ್ತು ಸೂರ್ಯಕಾಂತಿ ಬಿತ್ತನೆಗೆ ಮುಂದಾಗಿದ್ದಾರೆ.

    ಮಸಾರಿ ಭಾಗದಲ್ಲಿ ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಎಳ್ಳು ಬಿತ್ತನೆಯಾಗಿದೆ. ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಳ್ಳುವ ಅಗತ್ಯ ಬೀಜಗಳ ದಾಸ್ತಾನು ಮಾಡಲಾಗಿದೆ. ಯಲಬುರ್ಗಾ, ಬೇವೂರು, ಮಂಗಳೂರು, ಕುಕನೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಆಯಾ ಪ್ರದೇಶಗಳಿಗೆ ಅಗತ್ಯವಿರುವ ಬೀಜಗಳ ವಿತರಣೆ ಕಾರ್ಯ ನಾಲ್ಕೈದು ದಿನದಿಂದ ನಡೆದಿದೆ. ಯಲಬುರ್ಗಾ, ಕುಕನೂರು, ಮಂಗಳೂರು ಹೋಬಳಿಯಲ್ಲಿ ಹೆಸರು, ತೊಗರಿ, ಬೇವೂರು ಭಾಗದಲ್ಲಿ ಸಜ್ಜೆ, ತೊಗರಿ, ಮೆಕ್ಕೆಜೋಳ, ಸೂರ್ಯಕಾಂತಿ ಬೀಜಗಳ ವಿತರಣೆ ನಡೆದಿದೆ. ಅಧಿಕಾರಿಗಳಿಂದ ಬಿತ್ತನೆ ಬೀಜಗಳ ಬೀಜೋಪಚಾರದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.

    ಮಳೆ ಪ್ರಮಾಣ: ಶನಿವಾರ ಸಾಧಾರಣ ಮಳೆಯಾಗಿದೆ. ಯಲಬುರ್ಗಾ-2 ಎಂಎಂ, ಬೇವೂರು 5.2 ಎಂಎಂ, ಹಿರೇವಂಕಲಕುಂಟಾ 7.2 ಎಂಎಂ, ಯಡ್ಡೋಣಿ 8 ಎಂಎಂ ಮಳೆಯಾಗಿರುವ ವರದಿಯಾಗಿದೆ.

    ಮುಂಗಾರು ಬಿತ್ತನೆಗೆ ಅವಶ್ಯವಿರುವ ಬೀಜಗಳ ದಾಸ್ತಾನು ಮಾಡಲಾಗಿದೆ. ರೈತರು ಭೂಮಿಯ ತೇವಾಂಶ ಖಚಿತ ಪಡಿಸಿಕೊಂಡು ಬಿತ್ತನೆ ಮಾಡಬೇಕು. ಹವಾಮಾನ ಇಲಾಖೆ ಕೊಡುವ ಮಳೆ ಮುನ್ಸೂಚನೆ ಪರಿಗಣಿಸಬೇಕು. ಕೇವಲ ಡಿಎಪಿ ಗೊಬ್ಬರದ ಮೇಲೆ ಅವಲಂಬಿತರಾಗದೇ ಸಂಯುಕ್ತ ಗೊಬ್ಬರಗಳಾದ 20:20:013, 10:26:26 ಇತರ ಗೊಬ್ಬರಗಳನ್ನು ಬಿತ್ತನೆ ವೇಳೆ ಬಳಸುವುದರಿಂದ ಬೆಳೆಗೆ ಹೆಚ್ಚಿನ ಪೋಶಕಾಂಶ ಒದಗಿಸಿದಂತಾಗುತ್ತದೆ. ಇದರಿಂದ ಉತ್ತಮ ಇಳುವರಿ ಪಡೆಯಬಹುದು.
    ಪ್ರಾಣೇಶ ಹಾದಿಮನಿ
    ಸಹಾಯಕ ಕೃಷಿ ನಿರ್ದೇಶಕ, ಯಲಬುರ್ಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts