ತಾವರಗೇರಾ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಉತ್ತಮ ಮಳೆಯಾಯಿತು. ಸಿಡಿಲು ಬಡಿದು ಹೋಬಳಿಯ ಜುಮಲಾಪೂರ- ಜೆ.ರಾಂಪೂರದ ರತ್ನಮ್ಮ ಗೊರೇಬಾಳ (43) ಮೃತಪಟ್ಟಿದ್ದಾರೆ.
ಇವರು ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಮಳೆಯೊಂದಿಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಕುಷ್ಟಗಿ ತಹಸೀಲ್ದಾರ್ ರವಿ ಅಂಗಡಿ ಭೆಟ್ಟಿ ನೀಡಿ ಪರಿಶೀಲಿಸಿದರು. ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ಐದು ಲಕ್ಷ ರೂ.ಗಳ ಚೆಕ್ ಕುಟುಂಬಕ್ಕೆ ನೀಡಿದರು.
ತಾವರಗೇರಾದ ಠಾಣಾಧಿಕಾರಿ ಸುಜಾತಾ ನಾಯಕ, ನಾಡ ತಹಸೀಲ್ದಾರ್ ಪ್ರಕಾಶ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಇದ್ದರು. ಈಗಾಗಲೇ ಬಿತ್ತನೆಯಾಗಿರುವ ಹೆಸರು, ತೊಗರಿ, ಎಳ್ಳು ಬೆಳೆಗೆ ಈ ಮಳೆ ಅನುಕೂಲವಾಗಿದೆ. ಪಟ್ಟಣಕ್ಕೆ ನೀರು ಪೂರೈಸುವ ರಾಯನ ಕೆರೆಗೆ ನೀರು ಹರಿದು ಬಂದಿದೆ.