ನಗರದಾದ್ಯಂತ ಶ್ರದ್ಧಾ ಭಕ್ತರಯಿಂದ ಬಕ್ರೀದ್ ಆಚರಣೆ

1 Min Read
ನಗರದಾದ್ಯಂತ ಶ್ರದ್ಧಾ ಭಕ್ತರಯಿಂದ ಬಕ್ರೀದ್ ಆಚರಣೆ

ಬೆಂಗಳೂರು: ನಗರದಾದ್ಯಂತ ಮುಸಲ್ಮಾನ ಬಾಂಧವರು ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಸೋಮವಾರ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.

ಮುಂಜಾನೆ ನಗರದ ಮಸೀದಿಗಳಲ್ಲಿ ಹಾಗೂ ಚಾಮರಾಜಪೇಟೆಯ ಈದ್ಗಾ ಮೈದಾನ ಸೇರಿ ವಿವಿಧೆಡೆ ಶ್ವೇತವರ್ಣದ ಉಡುಪು ಹಾಗೂ ಟೋಪಿ ಧರಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ಕೋರಿದರು. ಮಸೀದಿಗಳಲ್ಲಿ ಮೌಲ್ವಿಗಳು ಬಕ್ರೀದ್ ಹಬ್ಬದ ಮಹತ್ವ ಹಾಗೂ ಸಂದೇಶವನ್ನು ತಿಳಿಸಿದರು. ಕುರಾನ್ ಪಠಣ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.

ನಗರದ ಶೇಷಾದ್ರಿಪುರದ ರಿಸಾಲ್ದಾರ್ ಸ್ಟ್ರೀಟ್ ಮಸೀದಿ, ಶಿವಾಜಿನಗರದ ಜುಮ್ಮಾ ಮಸೀದಿ, ಅಕ್ಕಿಪೇಟೆಯ ಹಜರತ್ ತವಕ್ಕಲ್ ಮಸ್ತಾನ್ ಮಸೀದಿ, ಕುಂಬಾರಪೇಟೆ ಬಳಿಯ ಸಂಗೀನ್ ಜಾಮಿಯಾ ಮಸೀದಿ, ಬನ್ನೇರುಘಟ್ಟ ರಸ್ತೆಯಲ್ಲಿರುವ ಬಿಲಾಲ್ ಮಸೀದಿ, ಪಾದರಾಯನಪುರದ ಸುಭಾನಿಯಾ ಮರ್ಕಝ್ ಮಸೀದಿ, ಗುಡ್ಡದಹಳ್ಳಿಯ ಹಝ್ರತ್ ಆಮಿರ್ ಕಲೀಮ್ ಷಾ ಮಸೀದಿ, ಜೆಪಿ ನಗರದ ರಿಜ್ವಾನ್ ಮಸೀದಿ ಸೇರಿದಂತೆ ನಗರದ ಮಸೀದಿಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಮಾಡಿದರು.

ರುಚಿಕರ ಖಾದ್ಯಗಳು: ಬಕ್ರೀದ್ ಅಂಗವಾಗಿ ಪ್ರಾರ್ಥನೆ ಸಲ್ಲಸಿದ ನಂತರ ಮನೆಗಳಲ್ಲಿ ವಿಶೇಷ ಖಾದ್ಯ ತಯಾರಿಸಲಾಗಿತ್ತು. ಮಟನ್ ಬಿರಿಯಾನಿ, ಮಟನ್ ಕೂರ್ಮಾ, ಮಟನ್ ಕೀಮಾ, ಭುನಿ ಕಜಿ ಹಾಗೂ ಸುರಕುಂಬಾ, ಮಿಟ್ಟಾ , ಶೀರ ಕುಮಾ ಹಾಗೂ ಪಾಯಸ ಸೇರಿದಂತೆ ತರಹೇವಾಗಿ ಅಡುಗೆಗಳನ್ನು ಮಾಡಿ ಬಂಧುಗಳು, ಮಿತ್ರರನ್ನು ಆಹ್ವಾನಿಸಿ ಊಟ ಸವಿದರು. ಬಡವರಿಗೆ ದಾನ ಮಾಡುವುದು ಈ ಹಬ್ಬದ ಮತ್ತೊಂದು ವೈಶಿಷ್ಟಯವಾಗಿದೆ.

See also  100 ಏರ್​ಪೋರ್ಟ್ ಅಭಿವೃದ್ಧಿ
Share This Article