More

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ವಿಜಯಾನಂದ’ ಬಯೋಪಿಕ್ ಪ್ರದರ್ಶನ; ನೂರಾರು ಜನರಿಂದ ವೀಕ್ಷಣೆ, ಮೆಚ್ಚುಗೆ

    ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂದು ‘ವಿಜಯಾನಂದ’ ಸಿನಿಮಾ ಪ್ರದರ್ಶನಗೊಂಡಿದೆ. ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಈ ಸಿನಿಮಾ ಚಿತ್ರೋತ್ಸವದ ಅಂಗವಾಗಿ ಒರಾಯನ್​ ಮಾಲ್​ನ ಪಿವಿಆರ್​ ಚಿತ್ರಮಂದಿರದ ಆಡಿ 4ನಲ್ಲಿ ಪ್ರದರ್ಶನವಾಯಿತು.

    ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರಗಳ ಸ್ಪರ್ಧೆ ವಿಭಾಗದಲ್ಲಿ ಪ್ರದರ್ಶನಗೊಂಡ ಈ ಚಿತ್ರವನ್ನು ನೂರಾರು ಪ್ರೇಕ್ಷಕರು ವೀಕ್ಷಿಸಿದ್ದು, ಅವರೆಲ್ಲರ ಮೆಚ್ಚುಗೆಗೆ ಈ ಸಿನಿಮಾ ಪಾತ್ರವಾಯಿತು. ವಿಆರ್​​ಎಲ್ ಫಿಲ್ಮ್​ ಪ್ರೊಡಕ್ಷನ್ಸ್​ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಹಾಗೂ ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಡಾ. ಆನಂದ ಸಂಕೇಶ್ವರ ಅವರು ಕೂಡ ಚಿತ್ರೋತ್ಸವಕ್ಕೆ ಆಗಮಿಸಿದ್ದರು.

    ಇದನ್ನೂ ಓದಿ: ಡಾ.ವಿಜಯ ಸಂಕೇಶ್ವರ ಅವರಿಗೆ ‘ಶ್ರೀ ಸಿದ್ಧಶ್ರೀ ಪ್ರಶಸ್ತಿ’, ವಿಜಯಾನಂದ ಚಿತ್ರಕ್ಕೆ ‘ಅತ್ಯುತ್ತಮ ಬಯೋಪಿಕ್​’ ಪ್ರದಾನ

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ‘ವಿಜಯಾನಂದ’ ಸಿನಿಮಾ ಪ್ರದರ್ಶನವಾಗುತ್ತಿರುವುದು ಸಂತಸದ ಸಂಗತಿ. ನಮ್ಮ ತಂದೆ ಡಾ.ವಿಜಯ ಸಂಕೇಶ್ವರ ಅವರು ಒಂದು ಟ್ರಕ್​ನಿಂದ ತಮ್ಮ ವೃತ್ತೀಜಿವನ ಪ್ರಾರಂಭಿಸಿದವರು. ಈ ಚಿತ್ರದಲ್ಲಿ ಅವರ ಜೀವನ ಚಿತ್ರಣ ಇದ್ದು, ಯುವಕರಿಗೆ ಈ ಸಿನಿಮಾದಲ್ಲಿ ಒಂದು ಸಂದೇಶವಿದೆ. ಎಷ್ಟೇ ಕಷ್ಟ ಬಂದರೂ ಮುಂದಿಟ್ಟ ಹೆಜ್ಜೆಯಿಂದ ಹಿಂದೆ ಸರಿಯಬೇಡ ಎಂಬ ಸಂದೇಶವಿರುವ ಈ ಚಿತ್ರ ಕನ್ನಡದಲ್ಲಿ ತಯಾರಾಗಿ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್​ ಆಗಿ ಬಿಡುಗಡೆಯಾಗಿದೆ. ಈ ಚಿತ್ರ ನೋಡಿ ಯುವಕರು ಸ್ಫೂರ್ತಿಗೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಡಾ.ಆನಂದ ಸಂಕೇಶ್ವರ ಅವರು ತಿಳಿಸಿದರು.

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ವಿಜಯಾನಂದ' ಬಯೋಪಿಕ್ ಪ್ರದರ್ಶನ; ನೂರಾರು ಜನರಿಂದ ವೀಕ್ಷಣೆ, ಮೆಚ್ಚುಗೆ

    ಡಾ.ಆನಂದ ಸಂಕೇಶ್ವರ ಅವರೊಂದಿಗೆ ವಿಜಯಾನಂದ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮ, ನಾಯಕ ನಿಹಾಲ್​ ಮುಂತಾದವರು ಇದ್ದರು. ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ನರಹರಿ ರಾವ್​ ಅವರು ಡಾ.ಆನಂದ ಸಂಕೇಶ್ವರ ಅವರಿಗೆ ಚಿತ್ರೋತ್ಸವದ ಸ್ಮರಣಿಕೆ ನೀಡಿ ಗೌರವಿಸಿದರು.

    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ವಿಜಯಾನಂದ' ಬಯೋಪಿಕ್ ಪ್ರದರ್ಶನ; ನೂರಾರು ಜನರಿಂದ ವೀಕ್ಷಣೆ, ಮೆಚ್ಚುಗೆ
    ವಿಜಯಾನಂದ ಸಿನಿಮಾ ಕುರಿತು ಮಾತನಾಡಿದ ಡಾ.ಆನಂದ ಸಂಕೇಶ್ವರ. ಚಿತ್ರೋತ್ಸವದ ನಿರ್ದೇಶಕ ನರಹರಿ ರಾವ್, ವಿಜಯಾನಂದ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮಾ, ನಾಯಕ ನಿಹಾಲ್ ಇದ್ದರು.
    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ವಿಜಯಾನಂದ' ಬಯೋಪಿಕ್ ಪ್ರದರ್ಶನ; ನೂರಾರು ಜನರಿಂದ ವೀಕ್ಷಣೆ, ಮೆಚ್ಚುಗೆ
    ವಿಜಯಾನಂದ ಸಿನಿಮಾ ವೀಕ್ಷಣೆಯಲ್ಲಿ ಡಾ.ಆನಂದ ಸಂಕೇಶ್ವರ, ಚಿತ್ರೋತ್ಸವದ ನಿರ್ದೇಶಕ ನರಹರಿ ರಾವ್ ಮತ್ತಿತರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts