More

    ಸ್ವಾದಮ್ ಅಡುಗೆ ಎಣ್ಣೆಯ ಬೆಂಗಳೂರು ಕಚೇರಿ ಆರಂಭ: ಎಣ್ಣೆಯು ಏನೆಲ್ಲ ಆರೋಗ್ಯ ಗುಣಗಳನ್ನು ಹೊಂದಿದೆ ಗೊತ್ತಾ?

    ಬೆಂಗಳೂರು: ಉತ್ತರ ಕರ್ನಾಟಕದ ಹಲವೆಡೆ ಈಗಾಗಲೇ ಜನಪ್ರಿಯವಾಗಿರುವ ಡಾ. ವಿಜಯ ಸಂಕೇಶ್ವರ ಸಾರಥ್ಯದ ಸಂಕೇಶ್ವರ ಫುಡ್ಸ್ ಆೃಂಡ್ ಬೆವರೇಜಸ್‌ನ ಸ್ವಾದಮ್ ಅಡುಗೆ ಎಣ್ಣೆಯು ಮತ್ತಷ್ಟು ಗ್ರಾಹಕರಿಗೆ ತನ್ನ ಸೇವೆಯನ್ನು ನೀಡಬೇಕೆಂಬ ಉದ್ದೇಶದಿಂದ ತನ್ನ ಹೊಸ ಶಾಖೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.

    ಸ್ವಾದಮ್ ಅಡುಗೆ ಎಣ್ಣೆಯ ಬೆಂಗಳೂರು ಕಚೇರಿ ಆರಂಭ: ಎಣ್ಣೆಯು ಏನೆಲ್ಲ ಆರೋಗ್ಯ ಗುಣಗಳನ್ನು ಹೊಂದಿದೆ ಗೊತ್ತಾ?

    ಸೋಮವಾರ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಸಂಕೇಶ್ವರ ಫುಡ್ಸ್ ಆೃಂಡ್ ಬೆವರೇಜಸ್ ಸಂಸ್ಥೆಯ ಮಾಲೀಕ ಕಿರಣ್ ಸಂಕೇಶ್ವರ ಅವರು ಕಚೇರಿಯನ್ನು ಉದ್ಘಾಟಿಸಿದರು.

    ಚಾಮರಾಜಪೇಟೆ ಪಂಪಾ ಮಹಾಕವಿ ರಸ್ತೆಯಲ್ಲಿರುವ ಕೆಸಿಸಿಎಫ್ ಕಟ್ಟಡದಲ್ಲಿ (ವಿಆರ್‌ಎಲ್ ಲಾಜಿಸ್ಟಿಕ್ ಕಚೇರಿ) ತನ್ನ ಹೊಸ ಖಾಖೆಯನ್ನು ಆರಂಭಿಸಲಾಗಿದೆ.

    ಕೆಲವು ತಿಂಗಳ ಹಿಂದೆ ಹುಬ್ಬಳ್ಳಿ, ಗದಗದಲ್ಲಿ ಕಚೇರಿಯನ್ನು ಆರಂಭಿಸಲಾಗಿತ್ತು. ತಮ್ಮ ಸಂಸ್ಥೆಯ ಉತ್ಪನ್ನವನ್ನು ಬೆಂಗಳೂರಿನ ಜನರಿಗೂ ತಲುಪಿಸಿ ಉತ್ತಮ ಆರೋಗ್ಯ ಕಲ್ಪಿಸುವ ದೃಷ್ಟಿಯಿಂದ ಕಚೇರಿಯನ್ನು ಬೆಂಗಳೂರಿನಲ್ಲಿಯೂ ಆರಂಭಿಸಲಾಗಿದೆ.

    ಪರಿಶುದ್ಧ ಶೇಂಗಾ ಎಣ್ಣೆಗೆ ಹೆಸರಾಗಿರುವ ಸ್ವಾದಮ್ ಪ್ರಸ್ತುತ ಬಹು ಬೇಡಿಕೆಯ ಉತ್ಪನ್ನವಾಗಿದ್ದು, ಕೈಗೆಟಕುವ ದರ ಹಾಗೂ ಶುದ್ಧತೆಯಿಂದಾಗಿ ಗ್ರಾಹಕರ ಪ್ರಶಂಸೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಕುಸುಬಿ, ಎಳ್ಳೆಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಕೂಡ ಮಾರುಕಟ್ಟೆಗೆ ತರುವ ಗುರಿಯನ್ನು ಹೊಂದಿದೆ.

    ಒಂದು ಲೀಟರ್ ಬೆಲೆ 320 ರೂ.:

    ಒಂದು ಲೀಟರ್ ಶೇಂಗಾ ಎಣ್ಣೆಗೆ 320 ರೂ. ದರ ನಿಗದಿ ಮಾಡಲಾಗಿದೆ. ಆನ್‌ಲೈನ್ ಮೂಲಕವೂ ಗ್ರಾಹಕರು ಆರ್ಡರ್ ನೀಡಬಹುದು. ಆನ್‌ಲೈನ್ ಮೂಲಕ ಆರ್ಡರ್ ಮಾಡುವವರಿಗೆ ಪ್ಯಾಕಿಂಗ್, ಕೊರಿಯರ್ ಚಾರ್ಜ್ ಸೇರಿ ಪ್ರತಿ ಲೀಟರ್‌ಗೆ 350 ರೂ. ದರ ವಿಧಿಸಲಾಗುತ್ತದೆ. ಜಿಲ್ಲಾ, ತಾಲ್ಲೂಕು ಮತ್ತು ನಗರ ಪ್ರದೇಶದ ಆಸುಪಾಸಿನ ವ್ಯಾಪ್ತಿಯಲ್ಲಿ ಈ ಸೇವೆ ಲಭ್ಯವಾಗಲಿದೆ.

    ಸದ್ಯ ಗದಗ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಕಚೇರಿ ಹೊಂದಿದೆ. ಒಂದು ಲೀ. 320, ಒಂದು ಲೀ. ಪೌಚ್ ಬಾಕ್ಸ್ 3,200 ರೂ. ಮತ್ತು 15 ಲೀ. ಟಿನ್ 4,800 ರೂ.ಗಳಾಗಿವೆ. ಹೆಚ್ಚಿನ ಮಾಹಿತಿಗಾಗಿ 63643 77168 ಸಂಪರ್ಕಿಸಬಹುದು.

    ರಾಜ್ಯ, ದೇಶದಲ್ಲಿ ವಿಜಯ ಸಂಕೇಶ್ವರ ಎಂದಾಕ್ಷಣ ವಿಆರ್‌ಎಲ್ ಹೆಸರು ಬರುತ್ತದೆ. ಹಾಗೆಯೇ ಸಂಕೇಶ್ವರ ಅವರು ಯಾವುದೇ ಕ್ಷೇತ್ರಕ್ಕೆ ಕಾಲಿಟ್ಟರೂ ಗುಣಮಟ್ಟ ಕಾಯ್ದುಕೊಳ್ಳುತ್ತಾರೆಂಬ ಭರವಸೆ ಜನರಲ್ಲಿದೆ. ಆ ನಂಬಿಕೆಯನ್ನು ಸ್ವಾದಮ್ ಶೇಂಗಾ ಎಣ್ಣೆ ಕೂಡ ಉಳಿಸಿಕೊಳ್ಳಲಿದೆ. ಸ್ವಾದಮ್ ಎಣ್ಣೆಯಲ್ಲಿ ಯಾವುದೇ ರಾಸಾಯನಿಕಗಳ ಮಿಶ್ರಣವಿಲ್ಲ. ನೂರಕ್ಕೆ ನೂರು ಪರಿಶುದ್ಧವಾಗಿದೆ. ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಉತ್ಪನ್ನ ತಯಾರಿಸಲಾಗುತ್ತಿದೆ.
    – ಕಿರಣ್ ಸಂಕೇಶ್ವರ್, ಮಾಲೀಕ, ಸಂಕೇಶ್ವರ ಫುಡ್ಸ್ ಆೃಂಡ್ ಬೆವರೇಜಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts