More

    ರೈತರ ಹೋರಾಟಕ್ಕೆ ವಿದೇಶಗಳಿಂದ ಬರುತ್ತಿದೆ ಹಣ! ಫೋರೆಕ್ಸ್​ ಇಲಾಖೆಯಿಂದ ಬಂತು ನೋಟಿಸ್​!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತ ಹೋರಾಟ 25ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿನಿತ್ಯ ಹೋರಾಟಗಾರರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದ್ದು, ಹೋರಾಟ ನಿರತ ಗುಂಪುಗಳಲ್ಲಿ ಒಂದು ಗುಂಪಿಗೆ ವಿದೇಶಗಳಿಂದ ಹಣ ಬರುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತಾಗಿ ವಿದೇಶಿ ವಿನಿಮಯ ಇಲಾಖೆಯು ನೋಟಿಸ್​ ನೀಡಿರುವುದಾಗಿಯೂ ತಿಳಿಸಲಾಗಿದೆ.

    ಇದನ್ನೂ ಓದಿ: ಅಬ್ದುಲ್​ ಕಲಾಂರ ಪ್ರತಿಮೆಗೆ ಹೂವಿಟ್ಟು ವೈರಲ್​ ಆದ ಬಡ ವೃದ್ಧ! ಅಸೂಯೆಯಿಂದ ವೃದ್ಧನನ್ನೇ ಕೊಂದ ಪಾಪಿಗಳು!

    ಭಾರತೀಯ ಕಿಸಾನ್​ ಯೂನಿಯನ್​ಗೆ ವಿದೇಶದಿಂದ ಹಣ ಬರುತ್ತಿರುವುದಾಗಿ ಹೇಳಲಾಗಿದೆ. ಈ ಕುರಿತಾಗಿ ವಿದೇಶಿ ವಿನಿಮಯ ಇಲಾಖೆಯು ಪಂಜಾಬ್​ ಮತ್ತು ಮೊಘಾ ಜಿಲ್ಲೆಯ ಪಂಜಾಬ್​ ಮತ್ತು ಸಿಂಧ್​ ಬ್ಯಾಂಕ್​ ಅಧಿಕಾರಿಗಳಿಗೆ ಮಿಂಚಂಚಿ ಕಳುಹಿಸಿದೆ. ಕಳೆದ ಎರಡು ತಿಂಗಳಲ್ಲಿ 8ರಿಂದ 9 ಲಕ್ಷ ಹಣ ವರ್ಗಾವಣೆ ಆಗಿದೆ. ವಿದೇಶಿ ವಿನಿಮಯದ ಬಗ್ಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಬ್ಯಾಂಕಿನ ಅಧಿಕಾರಿಗಳು ರೈತ ಸಂಘಟನೆಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ.

    ಇದನ್ನೂ ಓದಿ: ಇನ್ನೂ ಆರು ತಿಂಗಳು ಮಾಸ್ಕ್​ ಬಿಡುವಂತಿಲ್ಲ! ಲಾಕ್​ಡೌನ್​ ಮಾಡಲ್ಲ; ಸರ್ಕಾರದ ಹೊಸ ರೂಲ್ಸ್​

    ವಿದೇಶಗಳಲ್ಲಿರುವ ಪಂಜಾಬಿಗಳು ರೈತ ಹೋರಾಟಕ್ಕೆ ಬೆಂಬಲ ತೋರುವ ನಿಟ್ಟಿನಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಭಾರತೀಯ ಕಿಸಾನ್​ ಯೂನಿಯನ್​ನ ಪ್ರಧಾನ ಕಾರ್ಯದರ್ಶಿ ಸುಖದೇವ್​ ಸಿಂಗ್​ ಕೊಕ್ರಿ ಕಲಾನ್ ಹೇಳಿದ್ದಾರೆ. ಕೇಂದ್ರ ಸರ್ಕಾರವು ರೈತ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಈ ರೀತಿಯ ಉಪಾಯಗಳನ್ನು ಮಾಡುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ ದೂರಿದ್ದಾರೆ. (ಏಜೆನ್ಸೀಸ್​)

    21 ವರ್ಷ ರೇಪ್​ ಮಾಡಿ ಕೊನೆಗೂ ಕೊಂದೇ ಬಿಟ್ಟ ಪಾಗಲ್​ ಪ್ರೇಮಿ! ಅಮ್ಮನ ಬಾಯಿಯಿಂದಲೇ ಹೊರಬಿತ್ತು ಮಗಳ ನೋವಿನ ಕಥೆ

    ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts