More

    ಶೀಗೆ ಹುಣ್ಣಿಮೆ ಆಚರಣೆ

    ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ಶುಕ್ರವಾರ ರೈತಾಪಿ ಕುಟುಂಬದವರು ಜಮೀನುಗಳಿಗೆ ಪೂಜೆ ಸಲ್ಲಿಸಿ, ಚರಗಾ ಚೆಲ್ಲುವ ಮೂಲಕ ಹುಣ್ಣಿಮೆ ಆಚರಿಸಿದರು.

    ರೈತರು ಬೆಳಗ್ಗೆ ಎತ್ತುಗಳ ಮೈತೊಳದು ಕೊಂಬಿಗೆ ಕೋಡಂಚು, ಮೈಗೆ ಜೂಲಾ, ಕೊರಳಿಗೆ ಗೆಜ್ಜೆ ಕಟ್ಟಿ ಶೃಂಗರಿಸಿದರು. ಮಹಿಳೆಯರು ಗೋಧಿ ಹುಗ್ಗಿ, ನವನಕ್ಕಿ ಬುತ್ತಿ, ನಲ್ಲಕ್ಕಿ ಬುತ್ತಿ, ಎಳ್ಳು ರೊಟ್ಟಿ, ಚಪಾತಿ, ಮೊಸರನ್ನ, ಕಟ್ಟಿನ ಸಾಂಬಾರ್, ಮುಳಗಾಯಿ, ಹೆಸರುಕಾಳು, ವಟಾಣಿಕಾಳು ಪುಂಡಿ ಪಲ್ಯ, ಉಂಡಗಡಬು, ಶೇಂಗಾ ಚೆಟ್ನಿ, ಗುರಳ್ಳು ಚೆಟ್ನಿ, ಖರ್ಚಿಕಾಯಿ, ಕಡಗು, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ ತಯಾರಿಸಿದರು.

    ಎಲ್ಲರೂ ಹೊಸ ಬಟ್ಟೆಯುಟ್ಟು ಕುಟುಂಬ ಸಮೇತ ತಮ್ಮ ಬಂಧು ಬಳಗದವರೊಂದಿಗೆ ಎತ್ತಿನ ಗಾಡಿಯಲ್ಲಿ, ಟ್ರ್ಯಾಕ್ಟರ್​ಗಳಲ್ಲಿ ಇನ್ನು ಕೆಲವರು ಆಟೋಗಳಲ್ಲಿ ಹೊಲಕ್ಕೆ ತೆರಳಿ ಬನ್ನಿ ಹಾಗೂ ಬೇವಿನ ಮರಕ್ಕೆ ಹಸಿರು ಸೀರೆ, ಹಸಿರು ಬಳೆ ತೊಡಿಸಿ ಉಡಿ ತುಂಬಿ ಪೂಜೆ ಸಲ್ಲಿಸಿದರು.

    ಬಳಿಕ ಉತ್ತಮ ಬೆಳೆ ಬರಲಿ ಎಂದು ಪ್ರಾರ್ಥಿಸಿ ಹೊಲದ ಸುತ್ತಲೂ ಭೂ ತಾಯಿಗೆ ಚರಗಾ ಚಲ್ಲುವ ಮೂಲಕ ಮೊದಲನೇ ತುತ್ತು ಭೂತಾಯಿಗೆ ಎನ್ನುವ ಸಂದೇಶ ಸಾರಿದರು. ನಂತರ ವಿವಿಧ ಬಗೆಯ ಪದಾರ್ಥಗಳೊಂದಿಗೆ ಸಂತಸದಿಂದ ಭರ್ಜರಿ ಭೋಜನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts