More

    IPL 2024: ಆರ್​ಸಿಬಿ ಫ್ರಾಂಚೈಸಿ ಮಾಡಿದ ತಪ್ಪಿದು! ಈ ರೀತಿ ಮಾಡಬಾರದಿತ್ತು… ಫ್ಯಾನ್ಸ್ ಬೇಸರ

    ಬೆಂಗಳೂರು: ಇಂಡಿಯನ್​ ಪ್ರೀಮಿಯರ್​ ಲೀಗ್ 2024ರ ಆವೃತ್ತಿ ಪ್ರಾರಂಭವಾಗಿ ಕೇವಲ 9 ದಿನಗಳಷ್ಟೇ ಕಳೆದಿದ್ದು, ಪ್ರತಿ ಪಂದ್ಯದಲ್ಲೂ 10 ತಂಡಗಳು ಕೊಡುತ್ತಿರುವ ಭರ್ಜರಿ ಪೈಪೋಟಿ ಕಂಡು ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೊದಲ ಮ್ಯಾಚ್​ನಿಂದ ಇಂದಿನ ಮ್ಯಾಚ್​ನವರೆಗೆ ಎಲ್ಲಾ ತಂಡಗಳು ಕಡೆಯ ಓವರ್​ವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗುತ್ತಿರುವುದು ವೀಕ್ಷಕರಲ್ಲಿ ಮತ್ತಷ್ಟು ಕೂತೂಹಲ ಹೆಚ್ಚಿಸಿದೆ.

    ಇದನ್ನೂ ಓದಿ: ‘ಶ್ರೀರಾಮನ ಸಂದೇಶ ಅರಿಯಿರಿ’ ಪ್ರಧಾನಿ ಮೋದಿಯವರಿಗೆ ಪ್ರಿಯಾಂಕಾ ಗಾಂಧಿ ಸಲಹೆ..

    ಅಂದಹಾಗೆ, ಈ ಸೀಸನ್​ ಪ್ರಾರಂಭದ ಕಿಕ್​ಸ್ಟಾರ್ಟ್​ ಪಂದ್ಯದಲ್ಲೇ ಸೋಲಿನಿಂದ ಪಂದ್ಯ ಆರಂಭಿಸಿದ ಆರ್​ಸಿಬಿ, ಎಂದಿನಂತೆ ತಮ್ಮ ಅಭಿಮಾನಿಗಳನ್ನು ಬೇಸರಕ್ಕೆ ದೂಡಿತು. ತದನಂತರದಲ್ಲಿ ಎರಡನೇ ಪಂದ್ಯ ಗೆದ್ದು, ಮೂರನೇ ಮ್ಯಾಚ್​ನಲ್ಲಿ ಹೀನಾಯ ಸೋಲು ಅನುಭವಿಸಿತು. ಇದು ಆರ್​ಸಿಬಿ ಅಭಿಮಾನಿಗಳನ್ನು ತೀವ್ರ ಕೆರಳಿಸಿತು. ಅಸಲಿಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಪಂದ್ಯ ಸಿಕ್ಕಾಪಟ್ಟೆ ರೋಚಕವಾಗಿ ಮೂಡಿಬಂದಿದ್ದೇ ಆದರೂ ಗೆಲುವು ಕೆಕೆಆರ್​ಗೆ ಹೋಗಿದ್ದು ಆರ್​ಸಿಬಿ ಅಭಿಮಾನಿ ಬಳಗಕ್ಕೆ ತೀವ್ರ ಘಾಸಿ ಮಾಡಿತು.

    ಇದಕ್ಕೆ ಕಾರಣ ಆರ್​ಸಿಬಿ ಫ್ರಾಂಚೈಸಿ ಮಾಡುತ್ತಿರುವ ಎಡವಟ್ಟು! ಕೊಹ್ಲಿ ಪಡೆ ಕೊಟ್ಟ 182 ರನ್​ ಗುರಿಯನ್ನು ಬೆನ್ನಟ್ಟಿದ ಕೆಕೆಆರ್​ ಬ್ಯಾಟ್ಸ್​ಮನ್​ಗಳನ್ನು ತಡೆಯುವಲ್ಲಿ ಆರ್​ಸಿಬಿ ವೇಗಿಗಳು ವಿಫಲರಾದರು. ಇದು ಕ್ರೀಡಾಂಗಣದಲ್ಲಿ ನೆರೆದಿದ್ದ ಫ್ಯಾನ್ಸ್​ಗಳ ನಿರೀಕ್ಷೆಯನ್ನು ಮೊದಲನೇ ಹಂತದಲ್ಲೇ ಕುಸಿಯುವಂತೆ ಮಾಡಿತು. 10 ಓವರ್​ ಬಳಿಕವೂ ಶ್ರೇಯಸ್​​ ಅಯ್ಯರ್ ಪಡೆಯ ಬ್ಯಾಟ್ಸ್​​ಮನ್​ಗಳ ವಿಕೆಟ್​ ತೆಗೆಯಲು ವೇಗಿಗಳು ಹರಸಾಹಸ ಪಟ್ಟರು. ಇದೇ ಕೆಕೆಆರ್​ ಗೆಲುವಿಗೆ ಪ್ರಮುಖ ಕಾರಣವಾಯಿತು.

    ಇದನ್ನೂ ಓದಿ: ಕೆರೂರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮೆಚ್ಚುಗೆ | ಪಪಂ ಮುಖ್ಯಾಧಿಕಾರಿ ಅಭಿಯಾನಕ್ಕೆ ಪೌರಕಾರ್ಮಿಕರ ಸಾಥ್

    ತಮ್ಮ ನೆಚ್ಚಿನ ತಂಡ ಸೋಲು ಅನುಭವಿಸಿದ್ದು ಆರ್​ಸಿಬಿ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದಷ್ಟು ನೋವುಂಟುಮಾಡಿತು. ಇದನ್ನು ಪ್ರಶ್ನಿಸಿದ ಪ್ರತಿಯೊಬ್ಬ ಅಭಿಮಾನಿಯೂ, ಇದು ಆರ್​ಸಿಬಿ ಆಟಗಾರರ ತಪ್ಪಲ್ಲ, ಬದಲಿಗೆ ಫ್ರಾಂಚೈಸಿಯ ತಪ್ಪು. ಬ್ಯಾಟಿಂಗ್ ಲೈನ್​ನಲ್ಲಿ ವಿರಾಟ್ ಕೊಹ್ಲಿ ಮಾತ್ರ ಅಬ್ಬರಿಸಿದರೆ ಸಾಲದು, ತಂಡದ ಉಳಿದವರು ಕೂಡ ಸಾಥ್ ಕೊಡಬೇಕು. ಬ್ಯಾಟಿಂಗ್ ಲೈನ್​ ಒಪ್ಪಬಹುದು. ಆದರೆ, ಬೌಲಿಂಗ್ ವಿಭಾಗದಲ್ಲಿ ಏಕೆ ಇದೇ ಸಮಸ್ಯೆ? ಫ್ರಾಂಚೈಸಿ ಅವರು ಯಾಕಿಂತ ತಪ್ಪನ್ನು ಪದೇ ಪದೇ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗ್ತಿಲ್ಲ. ನಮ್ಮಲ್ಲಿ ಉತ್ತಮ ಬೌಲಿಂಗ್ ಲೈನ್​ ಇಲ್ಲ ಎಂದು ಅತೀವ ಬೇಸರ ಹೊರಹಾಕಿದ್ದಾರೆ.

    ಈ ದೇವಸ್ಥಾನದಲ್ಲಿ ದೇವರಿಗೆ ಮದ್ಯ ನೈವೇದ್ಯ! ಇಲ್ಲಿನ ಭಕ್ತರಿಗೆ ಇದೇ ತೀರ್ಥ ಪ್ರಸಾದ

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts