More

    ದುಡ್ಡು ಬೇಕೆಂದು ಮೆಸೆಂಜರ್​ನಲ್ಲಿ ಬೇಡಿಕೆಯಿಟ್ಟ ಶಾಸಕ! ವಾಯ್ಸ್​ ಮೆಸೇಜ್​ ಕಳಿಸಲು ಹೇಳಿದಾಗ ಹೊರಬಿತ್ತು ಸತ್ಯ

    ಯಾದಗಿರಿ: ತುಂಬಾ ಕಷ್ಟವಿದೆ ಕಣ್ರೀ.. ದಯವಿಟ್ಟು ಒಂದಿಪ್ಪತ್ತು ಸಾವಿರ ದುಡ್ಡು ಹಾಕಿ ಸಹಾಯ ಮಾಡಿ ಎಂದು ಮೆಸೆಂಜರ್​ನಲ್ಲಿ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಅನೇಕ ಸೆಲೆಬ್ರಿಟಿಗಳ ಹೆಸರಿನಲ್ಲಿರುವ ಖಾತೆಯಿಂದಲೂ ಸಾಕಷ್ಟು ಮೆಸೇಜ್​ಗಳು ಬರಲಾರಂಭಿಸಿದ್ದು, ಇದು ಆನ್​ಲೈನ್​ ದಂಧೆಕೋರರ ಕೆಲಸ ಎನ್ನುವುದು ಜನರ ಅರಿವಿಗೆ ಬಂದಿದೆ. ಇದೀಗ ಅದೇ ರೀತಿಯ ಪ್ರಕರಣ ಶಾಸಕರೊಬ್ಬರ ಹೆಸರಿನಲ್ಲೂ ನಡೆದಿದೆ.

    ಶಹಾಪುರ್ ಶಾಸಕ ಶರಣಬಸಪ್ಪ ದರ್ಶನಾಪುರ ಅವರ ಹೆಸರಿನಲ್ಲಿ ಫೇಸ್​ಬುಕ್​ ಖಾತೆ ತೆರೆದಿರುವ ದಂಧೆಕೋರರು ಶಾಸಕರ ಆಪ್ತರ ಬಳಿಯೇ ಹಣ ಪೀಕಲು ಮುಂದಾಗಿದ್ದಾರೆ. ಫೇಸ್​ಬುಕ್ ಮೆಸೆಂಜರ್​ನಲ್ಲಿ ಶಾಸಕರ ಹೆಸರಿನಲ್ಲಿ ಮೆಸೇಜ್​ ಮಾಡಿದ ದಂಧೆಕೋರರು, ಅರ್ಜೆಂಟಾಗಿ 20 ಸಾವಿರ ರೂಪಾಯಿ ಬೇಕೆಂದಿದ್ದಾರೆ. ಈಗಲೇ ಕೊಡು ನಾನು ಸಂಜೆ 6 ಗಂಟೆಯೊಳಗೆ ವಾಪಸ್​ ಕೊಡುತ್ತೇನೆ ಎಂದು ಹೇಳಿದ್ದಾರೆ. ಅನುಮಾನ ಬಂದ ಸ್ನೇಹಿತರು ವಾಯ್ಸ್ ಮೆಸೇಜ್​ ಕಳುಹಿಸು ಎಂದಿದ್ದಾರೆ. ಆಗ ದಂಧೆಕೋರರು ಸುಮ್ಮನಾಗಿದ್ದಾರೆ.

    ತಮ್ಮ ಹೆಸರಿನಲ್ಲಿ ಈ ರೀತಿ ಮೋಸ ಆಗುತ್ತಿರುವುದನ್ನು ಮನಗೊಂಡಿರುವ ಶಾಸಕರು ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ. ದಯವಿಟ್ಟು ಯಾರೂ ಇಂತಹ ಮೆಸೇಜ್​ಗಳಿಗೆ ಪ್ರತಿಕ್ರಿಯಿಸಿ ಹಣ ಕಳೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.

    ಲಸಿಕೆ ಇಲ್ಲದೆ ಬರೀ ಸಿರಿಂಜ್​ ಚುಚ್ಚಿ ಮೋಸ? ಅನುಮಾನ ಹುಟ್ಟಿಸಿದ ವಿಡಿಯೋ

    ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts