More

    ಜಾತ್ರೆ ನಿಷೇಧ ನಿರ್ಧಾರಕ್ಕೆ ಸಹಕರಿಸಿ

    ಹುಕ್ಕೇರಿ: ಆದಾಯಕ್ಕಿಂತ ಜೀವ ಮುಖ್ಯ. ಹಾಗಾಗಿ ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ಜಾತ್ರೆ ನಿಷೇಧಿಸಿದ್ದು, ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಅಮ್ಮಣಗಿ ಜಿಪಂ ಕ್ಷೇತ್ರದ ಸದಸ್ಯ ಮತ್ತು ಸಂಕೇಶ್ವರ ಹಿರಾ ಶುಗರ್ಸ್‌ ಚೇರ್ಮನ್ ನಿಖಿಲ್ ಕತ್ತಿ ಹೇಳಿದ್ದಾರೆ.

    ತಾಲೂಕಿನ ಅಮ್ಮಣಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ತಾಲೂಕು ಆಡಳಿತದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವಸ್ಥ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಶ್ರೀಶೈಲ ಎಂದು ಖ್ಯಾತಿ ಗಳಿಸಿರುವ ಅಮ್ಮಣಗಿಯ ಮಲ್ಲಿಕಾರ್ಜುನ ದೇವಸ್ಥಾನ ಜಾತ್ರೆ ಜ.13ರಂದು ಆರಂಭವಾಗಿ 17ರಂದು ಸಂಪನ್ನಗೊಳ್ಳುತ್ತದೆ. ಆದರೆ, ಕರೊನಾ ಸೋಂಕು ಹರಡುವಿಕೆ ನಿಯಂತ್ರಣ ದೃಷ್ಟಿಯಿಂದ ಸರ್ಕಾರ ಜಾತ್ರೆ ರದ್ದುಗೊಳಿಸಿದೆ. ಜಾತ್ರೆ ಅಂಗವಾಗಿ ಪ್ರತಿವರ್ಷ ನಡೆಯುತ್ತಿದ್ದ ಕ್ರೀಡಾಕೂಟ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಹಾಗಾಗಿ, ದೇವಸ್ಥಾನ ವಿಶ್ವಸ್ಥ ಮಂಡಳಿ ಮತ್ತು ಭಕ್ತರು ಸಹಕರಿಸಬೇಕು ಎಂದು ಸಭೆಯಲ್ಲಿ ಕೋರಿದರು.

    ಗ್ರೇಡ್-2 ತಹಸೀಲ್ದಾರ್ ಕಿರಣ ಬೆಳವಿ, ಪಿಎಸ್‌ಐ ಗಣಪತಿ ಕೊಂಗನೊಳಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸಬಹುದು. 100ಕ್ಕಿಂತ ಅಧಿಕ ಜನರು ದೇವಸ್ಥಾನದಲ್ಲಿ ಸೇರಬಾರದು ಎಂದರು. ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಲ್. ಎ.ಪಾಟೀಲ ಮಾತನಾಡಿ, ಜ.13ರಂದು ಸಂಜೆ 5ಗಂಟೆ ಒಳಗೆ ನೇರಲಿ, ಹಂದಿಗುಡ, ಅಮ್ಮಣಗಿ ಗ್ರಾಮದ ಪಲ್ಲಕ್ಕಿ ಸೇವಕರು, ಹಕ್ಕುದಾರರು ದೇವಸ್ಥಾನಕ್ಕೆ ಆಗಮಿಸಬೇಕು. ಸಂಪ್ರದಾಯದಂತೆ ಅವರ ಜತೆಗೆ ಅರ್ಚಕರು ಪೂಜೆ ನೆರವೇರಿಸಬೇಕು. ಜಾತ್ರೆ ದಿನಗಳಂದು ದೇವಸ್ಥಾನ ಮಹಾದ್ವಾರ ಬಂದ್ ಮಾಡಲಾಗುವುದು ಎಂದರು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಜಯಗೌಡ ಪಾಟೀಲ, ಎಪಿಎಂಸಿ ರಾಜ್ಯ ನಿರ್ದೇಶಕ ಪ್ರಶಾಂತ ಪಾಟೀಲ, ಜಯಾನಂದ ಹುಣಶ್ಯಾಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts