More

    ವಿದ್ಯಾರ್ಥಿಗಳೇ.. ಧೈರ್ಯವಾಗಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಎದುರಿಸಿ; ಪಾಲಕರೇ ನಿಶ್ಚಿಂತೆಯಿಂದ ಮಕ್ಕಳನ್ನು ಎಕ್ಸಾಮ್​ಗೆ ಕಳಿಸಿ…

    ಬೆಂಗಳೂರು: ಶಾಲೆ ಆರಂಭಿಸಬೇಕೋ-ಬೇಡವೋ, ಕರೊನಾ ಮೂರನೇ ಅಲೆ ಮಾರಕವೋ-ದುರ್ಬಲವೋ ಎಂಬಿತ್ಯಾದಿ ವಿಚಾರಗಳು ಇನ್ನೂ ಚರ್ಚೆಯಲ್ಲಿ ಇರುವಾಗಲೇ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವುದು ಖಚಿತಗೊಂಡಿದೆ. ಇದೇ ಜುಲೈ 19ರಂದು ಎಸ್​ಎಸ್​ಎಲ್​ಸಿ ಎಕ್ಸಾಂ ಆರಂಭಗೊಳ್ಳಲಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಮಕ್ಕಳು ಪರೀಕ್ಷೆಗೆ ಹೋಗುವುದು ಎಷ್ಟು ಸುರಕ್ಷಿತ ಎಂಬ ಕುರಿತು ವಿದ್ಯಾರ್ಥಿಗಳಲ್ಲಷ್ಟೇ ಅಲ್ಲದೆ, ಅವರ ಪಾಲಕರಲ್ಲೂ ಆತಂಕವಿದ್ದರೆ ಅದೇನೂ ಅಚ್ಚರಿಯಲ್ಲ. ಅಂಥ ಪಾಲಕ-ವಿದ್ಯಾರ್ಥಿಗಳಿಗೆಂದೇ ಇಲ್ಲೊಬ್ಬರು ಶಿಕ್ಷಕರು ಧೈರ್ಯದ ನುಡಿಗಳನ್ನು ಹೇಳಿದ್ದಾರೆ.

    ಧಾರವಾಡದ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಚಿಕ್ಕಮಠ ಅವರು ಈ ಸಲದ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿರುವ ವಿಧಾನ, ಶಿಕ್ಷಣ ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿ ವೃಂದ ಹಾಗೂ ಅವರ ಪಾಲಕರಲ್ಲಿನ ಆತಂಕ ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.

    ಇದನ್ನೂ ಓದಿ: ಅಪರಾಧ ನಡೆದ ಸ್ಥಳಕ್ಕೆ ಇನ್ನು ಇವರು ಬರಲಿದ್ದಾರೆ; ಇದು ದೇಶದಲ್ಲೇ ಮೊದಲು!

    ಜುಲೈ 19ರಂದು ಆರಂಭಗೊಳ್ಳಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸುವ ಕುರಿತಂತೆ ಸರ್ಕಾರ, ಮಕ್ಕಳ ಸುರಕ್ಷತೆಗಾಗಿ ಎಲ್ಲ ಮುನ್ನೆಚ್ಚರಿಕೆಯನ್ನು ಕೈಗೊಂಡಿದೆ. ಎಲ್ಲ ಶಾಲೆಗಳಲ್ಲೂ ಮಾಸ್ಕ್​ ವಿತರಿಸಲಾಗುತ್ತದೆ, ಸ್ಯಾನಿಟೈಸರ್​ ಇರಿಸಲಾಗಿರುತ್ತದೆ ಹಾಗೂ ಆಕ್ಸಿಮೀಟರ್​ ಕೂಡ ಇರುತ್ತದೆ. ಇನ್ನು ಪ್ರತಿ ಸಲ ಒಂದು ಬ್ಲಾಕ್​ನಲ್ಲಿ 24 ವಿದ್ಯಾರ್ಥಿಗಳಿದ್ದರೆ, ಈ ಸಲ 10-12 ವಿದ್ಯಾರ್ಥಿಗಳಿಗೊಂದರಂತೆ ಬ್ಲಾಕ್​ಗಳನ್ನು ಮಾಡಲಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳ ನಡುವೆ ಸಹಜವಾಗಿಯೇ ದೈಹಿಕ ಅಂತರವಿರುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಗುಡ್ಡ ಕುಸಿದು ಮನೆಯಂಗಳಕ್ಕೇ ಜಾರಿ ಬಿದ್ದ ಬಂಡೆ; ಅಪಾಯದಲ್ಲಿದೆ ಗುಡ್ಡದ ಮೇಲಿನ ಶಾಲೆ..

    ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲ ಶಿಕ್ಷಕರು ಲಸಿಕೆ ಹಾಕಿಸಿಕೊಂಡವರೇ ಆಗಿರುತ್ತಾರೆ. ಕೆಲವರು ಒಂದು ಡೋಸ್ ಹಾಕಿಸಿಕೊಂಡಿದ್ದರೆ, ಇನ್ನು ಕೆಲವರನ್ನು ಎರಡೂ ಡೋಸ್ ಪೂರ್ಣಗೊಂಡಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆಗೆ ಹಾಜರಾಗಬಹುದು. ಪಾಲಕರು ಕೂಡ ನಿಶ್ಚಿಂತರಾಗಿ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಬಹುದು. ಮಾತ್ರವಲ್ಲ, ಈ ಎಲ್ಲ ಹಿನ್ನೆಲೆಯಲ್ಲಿ ಮಕ್ಕಳನ್ನು ಧೈರ್ಯವಾಗಿ ಪರೀಕ್ಷೆ ಎದುರಿಸುವಂತೆ ಪಾಲಕರು ಸಜ್ಜುಗೊಳಿಸಬೇಕು ಎಂದು ಮಲ್ಲಿಕಾರ್ಜುನ ಚಿಕ್ಕಮಠ ಕೋರಿಕೊಂಡಿದ್ದಾರೆ.

    ಇನ್ನು ಸ್ಮಾರ್ಟ್​ಫೋನ್​ ಇಲ್ಲದೆ ವಾಟ್ಸ್​ಆ್ಯಪ್​ ಬಳಸಬಹುದು; ಬೀಟಾ ಯೂಸರ್ಸ್​ಗೆ ಹೊಸ ಆಪ್ಷನ್​!

    ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲೂ ಇಲ್ಲಿದೆ ವ್ಯಾಪಾರ-ವಹಿವಾಟು ಅವಕಾಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts