More

  ಆ ಗಾಯಕಿ ಹಾಡಿದ ಗೀತೆಗಳೆಲ್ಲಾ ಸೂಪರ್‌ಹಿಟ್…ಆದರೂ ಇದ್ದಕ್ಕಿದ್ದಂತೆ ಸಂಗೀತ ಕ್ಷೇತ್ರದಿಂದ ದೂರವಾದರು!

  ಬೆಂಗಳೂರು: ಬಾಲಿವುಡ್ ಇಂಡಸ್ಟ್ರಿಯಲ್ಲಿ ಇಲ್ಲಿಯವರೆಗೆ ತಮ್ಮ ಮಧುರ ಕಂಠದಿಂದ ಪ್ರೇಕ್ಷಕರ ಹೃದಯವನ್ನು ಆಳಿದ ಅನೇಕ ಗಾಯಕರು ಇದ್ದಾರೆ. ಕೆಲವು ಗಾಯಕರು ನಮ್ಮೊಂದಿಗಿಲ್ಲ. ಮತ್ತೆ ಕೆಲವರು ಇಂಡಸ್ಟ್ರಿಯಿಂದ ದೂರ ಸರಿದಿದ್ದಾರೆ. ಇಂದು ನಾವು ಇಂತಹ ಗಾಯಕರ ಪೈಕಿ ಒಬ್ಬರ ಬಗ್ಗೆ ಹೇಳುತ್ತೇವೆ, ಅವರ ಹೆಸರು ಅಲಿಶಾ ಚಿನೈ. ‘ಮೇಡ್ ಇನ್ ಇಂಡಿಯಾ’ ಎಂಬ ಬಾಲಿವುಡ್ ಹಾಡನ್ನು ಹಾಡುವ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಈ ಗಾಯಕಿ ಇಂದು 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಚಿತ್ರೋದ್ಯಮಕ್ಕೆ ಅನೇಕ ಬ್ಲಾಕ್ಬಸ್ಟರ್ ಹಾಡುಗಳನ್ನು ನೀಡಿದರು. ಆದರೆ ಇಂದು ಅವರು ಗಾಯನ ಪ್ರಪಂಚದಿಂದ ಬಹುತೇಕ ಕಣ್ಮರೆಯಾಗಿದ್ದಾರೆ.

  ಒಂದು ಕಾಲದಲ್ಲಿ ಅಲಿಶಾ ಚಿನೈ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು. ಅವರ ಮೊದಲ ಆಲ್ಬಂ 1985 ರಲ್ಲಿ ‘ಜಾದೂ’ ಎಂಬ ಹೆಸರಿನಲ್ಲಿ ಬಂದಿತು. ಆದರೆ, ‘ಮೇಡ್ ಇನ್ ಇಂಡಿಯಾ’ದಿಂದ ಅವರಿಗೆ ಹೆಚ್ಚಿನ ಮನ್ನಣೆ ಸಿಕ್ಕಿತು. ರುಕ್ ರುಕ್ ರುಕ್, ಕಾಂತೆ ನಹೀ, ಕಜರಾರೆ, ದಿಲ್ ಯೇ ಕೆಹ್ತಾ ಹೈ, ದಿಲ್ಬರ್ ಜಾನಿಯಾ, ದಿಲ್ ತೂ ಹಿ ಬಾತಾ ಮುಂತಾದ ಅವರ ಅನೇಕ ಹಾಡುಗಳು ಇಂದಿಗೂ ಜನರ ಬಾಯಲ್ಲಿ ಉಳಿದಿವೆ. ಅಲಿಷಾ ಅವರ ಸೂಪರ್‌ಹಿಟ್ ಹಾಡುಗಳ ಪಟ್ಟಿ ಸಾಕಷ್ಟು ದೊಡ್ಡದಾಗಿದೆ ಎಂದೇ ಹೇಳಬಹುದು.

  ಮ್ಯಾನೇಜರ್ ಮದುವೆಯಾದ ಅಲಿಶಾ
  ಮಾಧ್ಯಮ ವರದಿಗಳ ಪ್ರಕಾರ, ಅಲಿಶಾ ತಮ್ಮ ಮ್ಯಾನೇಜರ್ ರಾಜೇಶ್ ಝವೇರಿ ಅವರನ್ನು ವಿವಾಹವಾದರು. ಆದರೆ, ಅವರಿಬ್ಬರೂ ಹೆಚ್ಚು ಕಾಲ ಜೊತೆಯಾಗಿರಲಿಲ್ಲ. ಮದುವೆಯಾಗಿ 8 ವರ್ಷವಾದ ಮೇಲೆ ಒಟ್ಟಿಗೆ ಬಾಳಲು ಸಾಧ್ಯವಿಲ್ಲ ಎಂದು ಇಬ್ಬರಿಗೂ ಅರಿವಾಗಿತ್ತು. ಆದ್ದರಿಂದ 1994 ರಲ್ಲಿ ಅಲಿಶಾ ತನ್ನ ಪತಿ ರಾಜೇಶ್ ಝವೇರಿಯಿಂದ ಬೇರೆಯಾದರು.

  ಅಲಿಶಾಗೆ ಉದ್ಯಮದಲ್ಲಿ ಫಸ್ಟ್ ಬ್ರೇಕ್ ನೀಡಿದ್ದು ಗಾಯಕ ಬಪ್ಪಿ ಲಹರಿ. ಇವರಿಬ್ಬರೂ ಸೇರಿ ಹಲವು ಹಿಟ್ ಹಾಡುಗಳನ್ನು ನೀಡಿದ್ದಾರೆ. ಅನು ಮಲಿಕ್ ಅವರೊಂದಿಗೆ ಸಹ ಅನೇಕ ಹಿಟ್ ಹಾಡುಗಳನ್ನು ಸಹ ಹಾಡಿದ್ದಾರೆ. ಇವರಿಬ್ಬರೂ ಅನೇಕ ಸಿಂಗಿಂಗ್ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿದ್ದರು. ಆದರೆ ಅಲಿಶಾ ಅನು ಮಲಿಕ್ ಅವರನ್ನು ಮೃಗ ಎಂದು ಕರೆದರು ಮತ್ತು ತನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದಾಗ ಜನರು ಶಾಕ್ ಆದರು. ಆದರೆ, ಈ ವಿಷಯ ಹೆಚ್ಚು ಗಮನ ಸೆಳೆದಿರಲಿಲ್ಲ.

  ಮಾಧ್ಯಮ ವರದಿಗಳ ಪ್ರಕಾರ, ಗಾಯಕಿ ಅಲಿಶಾ ಅವರ ಗಾಯನ ವೃತ್ತಿಜೀವನವು ಟ್ರ್ಯಾಕ್​​​​ನಲ್ಲಿತ್ತು. ಆದರೆ ಆ ಸಮಯದಲ್ಲಿ ಅವರ ತಂದೆಗೆ ಕ್ಯಾನ್ಸರ್ ಬಂದಿತು. ಈ ವಿಷಯ ತಿಳಿದಾಗ ತಂದೆಯ ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯವೆಂದು ಭಾವಿಸಿ ಗಾಯನ ಲೋಕದಿಂದ ದೂರವಾದರು. ಆದರೆ ಅವರ ತಂದೆ ಮಧುಕರ್ ಚಿನೈ 2019 ರಲ್ಲಿ ಜಗತ್ತಿಗೆ ವಿದಾಯ ಹೇಳಿದರು.

  ಆ ಗಾಯಕಿ ಹಾಡಿದ ಗೀತೆಗಳೆಲ್ಲಾ ಸೂಪರ್‌ಹಿಟ್…ಆದರೂ ಇದ್ದಕ್ಕಿದ್ದಂತೆ ಸಂಗೀತ ಕ್ಷೇತ್ರದಿಂದ ದೂರವಾದರು!

  ಆದರೆ ಆ ಸಮಯದಲ್ಲಿ ಅಲಿಶಾ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಲಿಶಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು, ತಮ್ಮ ಹಳೆಯ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಬಹಳ ಕಾಲ ಇಂಡಸ್ಟ್ರಿಯಿಂದ ದೂರ ಉಳಿದಿದ್ದ ಈ ಗಾಯಕಿ ಮತ್ತೆ ಗಾಯನ ಲೋಕಕ್ಕೆ ಮರಳಿದ್ದಾರೆ. ಅವರ ಹೊಸ ಹಾಡು ಝೀ ಮ್ಯೂಸಿಕ್ ಕಂಪನಿಯಲ್ಲಿ ಲಭ್ಯವಿದೆ. ಅಲಿಶಾ ಇನ್ನೂ ಉದ್ಯಮದಲ್ಲಿ ಸಂಪೂರ್ಣವಾಗಿ ಸಕ್ರಿಯವಾಗಿಲ್ಲ.

  ಸಲ್ಮಾನ್ ಖಾನ್ ಮನೆಯಿಂದ ಮತ್ತೊಬ್ಬ ಸ್ಟಾರ್ ಬಾಲಿವುಡ್​​ಗೆ ಎಂಟ್ರಿ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts