More

    ಗುಜರಾತ್​ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ: ಡಿ.1 ಮತ್ತು 5ಕ್ಕೆ ಮತದಾನ, 8ಕ್ಕೆ ಫಲಿತಾಂಶ

    ನವದೆಹಲಿ: ಬಹುನಿರೀಕ್ಷಿತ ಗುಜರಾತ್​ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇಂದು (ನ.03) ಪ್ರಕಟಿಸಿದೆ.

    ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯುಕ್ತ ರಾಜೀವ್​ ಕುಮಾರ್, ಡಿಸೆಂಬರ್​ 1 ಮತ್ತು 5ಕ್ಕೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿ.8ಕ್ಕೆ ಫಲಿತಾಂಶ ಹೊರ ಬೀಳಲಿದೆ ಎಂದು ಹೇಳಿದರು. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶವು ಕೂಡ ಅಂದೇ ಹೊರಬೀಳಲಿದೆ.

    ಮೊದಲ ಹಂತ: ನ. 5ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ನ. 14 ಮತ್ತು ನಾಮಪತ್ರ ಪರಿಶೀಲನೆಗೆ ನ.15 ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ನ.17ರವರೆಗೆ ಕಾಲಾವಕಾಶ ನೀಡಲಾಗಿದೆ. ಡಿ.1ಕ್ಕೆ ಮತದಾನ ನಡೆಯಲಿದ್ದು, 8ಕ್ಕೆ ಫಲಿತಾಂಶ ಹೊರಬೀಳಲಿದೆ.

    ಎರಡನೇ ಹಂತ: ನ. 10ರಂದು ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ನ. 17 ಮತ್ತು ನಾಮಪತ್ರ ಪರಿಶೀಲನೆಗೆ ನ.18 ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ನ.21ರವರೆಗೆ ಕಾಲಾವಕಾಶ ನೀಡಲಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, 8ಕ್ಕೆ ಫಲಿತಾಂಶ ಹೊರಬೀಳಲಿದೆ.

    ಡಿಸೆಂಬರ್​ 10ಕ್ಕೆ ಸಂಪೂರ್ಣ ಚುನಾವಣೆ ಪ್ರಕ್ರಿಯೆ ಮುಗಿಯಲಿದೆ ಎಂದು ಚುನಾವಣಾ ಆಯುಕ್ತಾರದ ರಾಜೀವ್​ ಕುಮಾರ್​ ತಿಳಿಸಿದರು.

    ಗುಜರಾತ್​ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ: ಡಿ.1 ಮತ್ತು 5ಕ್ಕೆ ಮತದಾನ, 8ಕ್ಕೆ ಫಲಿತಾಂಶ

    ಕಳೆದ ಅ. 14ರಂದು ಚುನಾವಣಾ ಆಯೋಗ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಹಿಮಾಚಲ ಪ್ರದೇಶದ 68 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.12ರಂದು ಮತದಾನ ನಡೆಯಲಿದೆ ಡಿ.8ರಂದು ಮತ ಎಣಿಕೆ ನಡೆಯಲಿದೆ.

    ಗುಜರಾತ್ ಅಸೆಂಬ್ಲಿಯ ಅವಧಿಯು 2023ರ ಫೆಬ್ರವರಿ 18ಕ್ಕೆ ಕೊನೆಗೊಳ್ಳುತ್ತದೆ. ಹಿಮಾಚಲ ಪ್ರದೇಶ ಸದನದ ಅವಧಿಯು 2023ರ ಜನವರಿ 8ಕ್ಕೆ ಮುಗಿಯಲಿದೆ. ಹಾಗಾಗಿ ಈ ಎರಡೂ ರಾಜ್ಯಗಳಿಗೆ ಒಂದೇ ಸಮಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೇಂದ್ರ ಚುನಾವಣಾ ಆಯೋಗವು ಅ.14ರಂದು ಹಿಮಾಚಲ ಪ್ರದೇಶಕ್ಕೆ ಮಾತ್ರ ಚುನಾವಣೆ ದಿನಾಂಕ ಘೋಷಿಸಿತು. ಇದೀಗ ಗುಜರಾತ್​ ಚುನಾವಣೆ ದಿನಾಂಕವೂ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿವೆ.

    ಗುಜರಾತ್​ ವಿಧಾನಸಭೆಯು 182 ಸ್ಥಾನಗಳನ್ನು ಹೊಂದಿದ್ದು, ಬಹುಮತ ಪಡೆಯಲು 92 ಸ್ಥಾನ ಅಗತ್ಯ. ಹಿಮಾಚಲಪ್ರದೇಶ ವಿಧಾನಸಭೆಯು 68 ಕ್ಷೇತ್ರಗಳನ್ನ ಹೊಂದಿದ್ದು, ಬಹುಮತ ಪಡೆಯಲು 35 ಸ್ಥಾನ ಅಗತ್ಯ. ಸದ್ಯ ಎರಡೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ನಗುತ್ತಲೇ ಸೆಲ್ಫಿಗೆ ಪೋಸ್​​ ನೀಡಿ ಗರ್ಭಿಣಿ ಪತ್ನಿಯನ್ನು ಬೆಟ್ಟದಿಂದ ನೂಕಿದ ಪತಿಗೆ 30 ವರ್ಷ ಜೈಲು ಶಿಕ್ಷೆ!

    ಅಧಿಕಾರ ಸ್ವೀಕರಿಸುತ್ತಿದ್ದಂತೆ ತಮ್ಮ ನಿರ್ಧಾರದಿಂದ ಯೂಟರ್ನ್​ ಹೊಡೆದ ಬ್ರಿಟನ್​ ಪ್ರಧಾನಿ ರಿಷಿ ಸುನಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts