More

    ಅಧಿಕಾರ ಸ್ವೀಕರಿಸುತ್ತಿದ್ದಂತೆ ತಮ್ಮ ನಿರ್ಧಾರದಿಂದ ಯೂಟರ್ನ್​ ಹೊಡೆದ ಬ್ರಿಟನ್​ ಪ್ರಧಾನಿ ರಿಷಿ ಸುನಕ್​!

    ಲಂಡನ್​: ಈಜಿಪ್ಟ್​ನಲ್ಲಿ ನಡೆಯಲಿರುವ​ ಸಿಒಪಿ27 ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ತಮ್ಮ ಮೊದಲಿನ ನಿರ್ಧಾರದಿಂದ ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಇದೀಗ ಯೂಟರ್ನ್​ ಹೊಡೆದಿದ್ದಾರೆ. ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯ ನಿರ್ಮಾಣಕ್ಕಾಗಿ ಸಭೆಯಲ್ಲಿ ಭಾಗವಹಿಸುವುದಾಗಿ ರಿಷಿ ಸುನಕ್​ ಬುಧವಾರ ತಿಳಿಸಿದ್ದಾರೆ. ​

    ಬುಧವಾರ ಟ್ವೀಟ್​ ಮಾಡಿರುವ ರಿಷಿ, ಹವಾಮಾನ ಬದಲಾವಣೆಯ ಮೇಲೆ ಕ್ರಮ ತೆಗೆದುಕೊಳ್ಳದೇ ಹೋದರೆ, ದೀರ್ಘಾವಧಿಯ ಸಮೃದ್ಧಿ ಇರುವುದಿಲ್ಲ. ನವೀಕರಿಸಬಹುದಾದ ವಸ್ತುಗಳಲ್ಲಿ ಹೂಡಿಕೆ ಮಾಡದೆ ಇಂಧನ ಭದ್ರತೆ ಇರುವುದಿಲ್ಲ. ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯ ನಿರ್ಮಾಣಕ್ಕಾಗಿ ನಾನು ಮುಂದಿನ ವಾರ ನಡೆಯಲಿರುವ ಸಿಒಪಿ27 ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.

    ಅಂದಹಾಗೆ ಸಿಒಪಿ27 ಹವಾಮಾನ ಶೃಂಗಸಭೆ ಮುಂದಿನ ವಾರ ಈಜಿಪ್ಟ್​ನಲ್ಲಿ ನಡೆಯಲಿದೆ. ಈ ಹಿಂದೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ರಿಷಿ ಹೇಳಿದ್ದರು. ನವೆಂಬರ್​ 17ರಂದು ಮಂಡನೆಯಾಗಲಿರುವ ಬಜೆಟ್​ ಮತ್ತು ದೇಶದ ಆರ್ಥಿಕತೆ ಬಗ್ಗೆ ಗಮನಹರಿಸಬೇಕಿದೆ ಎಂದಿದ್ದರು. ಸಭೆಯಲ್ಲಿ ಭಾಗವಹಿಸದ ರಿಷಿ ನಿರ್ಧಾರವನ್ನು ಪರಿಸರವಾದಿಗಳು ಮತ್ತು ಹವಾಮಾನ ಪ್ರಚಾರಕರು ತೀವ್ರವಾಗಿ ಖಂಡಿಸಿದ್ದರು. ಹವಾಮಾನ ಸಲಹೆಗಾಗ ಅಲೋಕ್​ ಶರ್ಮಾ ಸಹ ರಿಷಿ ನಿರ್ಧಾರವನ್ನು ಟೀಕಿಸಿದ್ದರು.

    ಸಿಒಪಿ26 ಹವಾಮಾನ ಶೃಂಗಸಭೆಯು 2021ರಲ್ಲಿ ಯುನೈಟೆಡ್​ ಕಿಂಗ್​​ಡಮ್​ನ ಗ್ಲಾಸ್ಗೋದಲ್ಲಿ ಯುಕೆ ಕ್ಯಾಬಿನೆಟ್​ ಮಿನಿಸ್ಟರ್​ ಅಲೋಕ್​ ಶರ್ಮಾ ನೇತೃತ್ವದಲ್ಲಿ ನಡೆದಿತ್ತು. (ಏಜೆನ್ಸೀಸ್​)

    ‘ಡ್ರೋನ್​ ಪ್ರತಾಪ್​ ನಾನು ಒಂದೇ ತಾಯಿಯ ಮಕ್ಕಳಿದ್ದಂಗೆ, ನಾನು ಹುಣ್ಣಿಮೇಲಿ ಹುಟ್ಟಿದೆ ಆತ ಹುಟ್ಟಿದಾಗ ಕರೆಂಟ್ ಹೋಗಿತ್ತು’

    47 ಲಕ್ಷ ರೂ. ಕೊಟ್ಟರೆ ಜೀವಂತ ಸಮಾಧಿ ಮಾಡ್ತಾರಂತೆ​! ಈ ಆಫರ್ ಹಿಂದಿನ ಕಾರಣ ಕೇಳಿದ್ರೆ ನೀವು ಬೆರಗಾಗ್ತೀರಾ​

    ಈ ಪಾಕಿಸ್ತಾನದ ರಜಿನಿಕಾಂತ್​ಗೆ ಸೂಪರ್​ಸ್ಟಾರ್​ ರಜಿನಿಕಾಂತ್​ ನೋಡುವ ಆಸೆ: ಇಲ್ಲಿದೆ ವಿಶೇಷ​ ವಿಡಿಯೋ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts