More

    ಇಂದು ಮುಂಬೈ-ಲಖನೌ ಕಾದಾಟ; ಔಪಚಾರಿಕ ಪಂದ್ಯದಲ್ಲಿ ಸಮಾಧಾನಕರ ಗೆಲುವಿಗೆ ಪೈಪೋಟಿ

    ಮುಂಬೈ: ಪ್ಲೇಆಫ್​​ ರೇಸ್​ನಿಂದ ಹೊರಬಿದ್ದಿರುವ ತಂಡಗಳಾದ ಮುಂಬೈ ಇಂಡಿಯನ್ಸ್​ ಮತ್ತು ಲಖನೌ ಸೂಪರ್​ಜೈಂಟ್ಸ್​ ಐಪಿಎಲ್​-17ರಲ್ಲಿ ಶುಕ್ರವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿವೆ. ಉಭಯ ತಂಡಗಳಿಗೂ ಇದು ಟೂರ್ನಿಯಲ್ಲಿ ಕೊನೇ ಲೀಗ್​ ಪಂದ್ಯವಾಗಿದ್ದು, ಗೆಲುವಿನೊಂದಿಗೆ ನಿರ್ಗಮಿಸುವ ತವಕದಲ್ಲಿವೆ.

    ನಾಯಕತ್ವ ಬದಲಾವಣೆಯೊಂದಿಗೆ ಕಣಕ್ಕಿಳಿದ ಮುಂಬೈ ತಂಡ ಟೂರ್ನಿಯುದ್ದಕ್ಕೂ ಲಯ ಕಂಡುಕೊಳ್ಳಲು ಪರದಾಡಿದ್ದು, ಮೊದಲ ತಂಡವಾಗಿ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿತ್ತು. ಮತ್ತೊಂದೆಡೆ ಲಖನೌ ತಂಡ ಕಳೆದ ಪಂದ್ಯದವರೆಗೂ ಪ್ಲೇಆಫ್​ ಆಸೆ ಹೊಂದಿತ್ತು. ಆದರೆ ಡೆಲ್ಲಿ ಎದುರು 19 ರನ್​ಗಳಿಂದ ಸೋಲು ಕಾಣುವುದರೊಂದಿಗೆ ಕೆಎಲ್​ ರಾಹುಲ್​ ಬಳಗ ಬಹುತೇಕ ಆಸೆ ಕೈಚೆಲ್ಲಿದೆ. ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 6 ಜಯ, 7 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಲಖನೌಗೆ ಈಗಲೂ 14 ಅಂಕ ಕಲೆಹಾಕುವ ಅವಕಾಶವಿದ್ದರೂ, ಕಳಪೆ ರನ್​ರೇಟ್​ ಅದರ ಪ್ಲೇಆ್​ ಕನಸು ಭಗ್ನಗೊಳಿಸಿದೆ.

    ಲಖನೌ ತಂಡದ ಮಾಲೀಕರ ಜತೆಗಿನ ಬಿಸಿಬಿಸಿ ಮಾತುಕತೆಯ ಬಳಿಕ ಕನ್ನಡಿಗ ಕೆಎಲ್​ ರಾಹುಲ್​ ನಾಯಕತ್ವ ತೊರೆಯುವ ಬಗ್ಗೆ ವರದಿ ಹರಡಿದ್ದರೂ, ಅದು ಹುಸಿಯಾಗಿದೆ. ಕಳೆದ ಪಂದ್ಯದಲ್ಲಿ ರಾಹುಲ್​ ಕೀಪಿಂಗ್​ ತ್ಯಜಿಸಿದ್ದರೂ, ಬ್ಯಾಟಿಂಗ್​ನಲ್ಲೂ ಹೆಚ್ಚಿನ ಕೊಡುಗೆ ನೀಡಲಿಲ್ಲ. ಟೂರ್ನಿಯಲ್ಲಿ 465 ರನ್​ ಗಳಿಸಿದ್ದರೂ, 136.36 ಸ್ಟ್ರೆ$ಕ್​ರೇಟ್​ ಸಮಾಧಾನಕರ ಎನಿಸಿಲ್ಲ.

    ಕೊನೇ ಸ್ಥಾನ ತಪ್ಪಿಸಲು ಹಾರ್ದಿಕ್​ ಪಡೆ ಫೈಟ್
    ಮುಂಬೈ ತಂಡ 13 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದು 9ರಲ್ಲಿ ಸೋತಿದೆ. ಇದರಿಂದ ಸದ್ಯ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿದೆ. ಕೊನೇ ಪಂದ್ಯದಲ್ಲಿ ಗೆದ್ದರೆ ಮುಂಬೈಗೆ ಕೊನೇ ಸ್ಥಾನ ತಪ್ಪಿಸಿಕೊಳ್ಳುವ ಅವಕಾಶವಿದೆ. ಪಂಜಾಬ್​ ತನ್ನ ಕೊನೇ ಪಂದ್ಯದಲ್ಲಿ ಸೋತರೆ ಆಗ ಹಾರ್ದಿಕ್​ ಪಾಂಡ್ಯ ಪಡೆ ಕನಿಷ್ಠ 9ನೇ ಸ್ಥಾನಕ್ಕಾದರೂ ಏರುವ ಅವಕಾಶ ಹೊಂದಿದೆ. ರೋಹಿತ್​ ಶರ್ಮ ನಾಯಕತ್ವ ಕಸಿದು ಹಾರ್ದಿಕ್​ ಪಾಂಡ್ಯಗೆ ನೀಡಿದ್ದು ಹಾಲಿ ಋತುವಿನಲ್ಲಿ ಮುಂಬೈಗೆ ಯಾವುದೇ ಲಾಭ ತಂದುಕೊಟ್ಟಿಲ್ಲ. ಜಸ್​ಪ್ರೀತ್​ ಬುಮ್ರಾ (13 ಪಂದ್ಯಗಳಲ್ಲಿ 20 ವಿಕೆಟ್​) ಬಿಗಿ ಬೌಲಿಂಗ್​ ದಾಳಿ ನಡೆಸಿದರೂ ಇತರ ಬೌಲರ್​ಗಳು ಮತ್ತು ಬ್ಯಾಟರ್​ಗಳು ಅಸ್ಥಿರ ನಿರ್ವಹಣೆ ತೋರಿದರು.

    ಟಿ20 ವಿಶ್ವಕಪ್​ನಲ್ಲಿ ಭಾರತ ಸೆಮಿಫೈನಲ್​ಗೇರಿದರೆ ಗಯಾನಾದಲ್ಲಿ ಜೂನ್​ 27ರಂದು ಪಂದ್ಯ; ಹೀಗಿದೆ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts