More

    ಇಸ್ರೇಲ್-ಹಮಾಸ್ ಹಿಂಸಾಚಾರಕ್ಕೆ ಭಾರತ – ಈಜಿಪ್ಟ್​ ಕಳವಳ

    ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಅವರೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಹದಗೆಡುತ್ತಿರುವ ಭದ್ರತೆ ಮತ್ತು ಮಾನವೀಯ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲಿ ಹಿಂಸಾಚಾರ ಮತ್ತು ನಾಗರಿಕರ ಸಾವುನೋವು ಹೆಚ್ಚಳದ ಬಗ್ಗೆ ಉಭಯ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಹಬ್ಬದ ದಿನ ಸ್ಥಳೀಯತೆಗೆ ಆದ್ಯತೆ ಇರಲಿ: ಮತ್ತೆ ವೋಕಲ್​ ಫಾರ್​ ಲೋಕಲ್​​ ಮಂತ್ರ ಜಪಿಸಿದ ಪ್ರಧಾನಿ ಮೋದಿ
    ಸಿಸಿ ಅವರೊಂದಿಗಿನ ಭಾನುವಾರ ದೂರವಾಣಿ ಸಂಭಾಷಣೆಯ ನಂತರ, ಮೋದಿ ಅವರು “ನಾವು ಭಯೋತ್ಪಾದನೆ, ಹಿಂಸಾಚಾರ ಮತ್ತು ನಾಗರಿಕ ಜೀವ ಹಾನಿ ಬಗ್ಗೆ ಚರ್ಚಿಸಿದೆವು ಎಂದು “X”(ಎಕ್ಸ್​) ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

    ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಬೇಕಿದೆ. ಇದರ ಆರಂಭಿಕ ಹೆಜ್ಜೆ ಇದಾಗಿದೆ. ತೊಂದರೆಗೀಡಾದವರಿಗೆ ಮಾನವೀಯ ಸಹಾಯವನ್ನು ತಲುಪಿಸುವ ಕಾರ್ಯವನ್ನು ಸುಗಮಗೊಳಿಸುವ ಅಗತ್ಯವನ್ನು ನಾವು ಒಪ್ಪುತ್ತೇವೆ ಎಂದು ಅವರು ತಿಳಿಸಿದ್ದಾರೆ.

    ಅಧ್ಯಕ್ಷ ಎಲ್-ಸಿಸಿ ಅವರು ಪ್ರಧಾನಿ ಮೋದಿ ಅವರ ದೂರವಾಣಿ ಕರೆಯನ್ನು ಸ್ವೀಕರಿಸಿದ್ದು, ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಮತ್ತು ಇತ್ತೀಚಿನ ಬೆಳವಣಿಗೆಗಳ ಕುರಿತು ಉಭಯ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು ಎಂದು ಈಜಿಪ್ಟ್‌ ಸರ್ಕಾರ ತಿಳಿಸಿದೆ.

    ಕದನ ವಿರಾಮಕ್ಕೆ ಈಜಿಪ್ಟ್ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಿದೆ. ಗಾಜಾ ಆಕ್ರಮಣ, ಮಾನವೀಯತೆ ಮತ್ತು ಭದ್ರತಾ ಪರಿಣಾಮಗಳ ಬಗ್ಗೆ ಅಧ್ಯಕ್ಷರು ಎಚ್ಚರಿಸಿದ್ದಾರೆ ಎಂದು ಈಜಿಪ್ಟ್ ವಕ್ತಾರ ಅಹ್ಮದ್ ಫಹ್ಮಿ ಹೇಳಿದ್ದಾರೆ.

    ರಾಜತಾಂತ್ರಿಕ ಮಟ್ಟದಲ್ಲಿ ತ್ವರಿತ ಪರಿಹಾರವನ್ನು ಕಂಡುಹಿಡಿಯಲು ಅಂತರರಾಷ್ಟ್ರೀಯ ಏಕೀಕೃತ ನಿರ್ಣಾಯಕ ಕ್ರಮದ ಅಗತ್ಯವಿದೆ. ಈಜಿಪ್ಟ್ ಮತ್ತು ಭಾರತದ ನಡುವಿನ ಜಂಟಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಉಭಯ ದೇಶಗಳ ಸಂಸ್ಥೆಗಳನ್ನು ಮುನ್ನಡೆಸುವ ತಮ್ಮ ಸಂಕಲ್ಪವನ್ನು ಅವರು ಒತ್ತಿಹೇಳಿದರು ಎಂದು ಈಜಿಪ್ಟ್ ಕಡೆಯಿಂದ ಹೊರಡಿಸಿದ ಹೇಳಿಕೆ ತಿಳಿಸಿದೆ.

    ಬಿಜೆಪಿಯ ಇಂದಿನ ಸ್ಥಿತಿ ಚಿಂತಿಸಿ ಮಾಜಿ ಸಿಎಂ​ ಬೊಮ್ಮಾಯಿಗೆ ಹಾರ್ಟ್​ ಅಟ್ಯಾಕ್ ಆಗಿದೆ; ಕಾಂಗ್ರೆಸ್​ ಶಾಸಕ ಕೋನರೆಡ್ಡಿ ವ್ಯಂಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts