More

    ಉಪ ನೋಂದಣಿ ಕಚೇರಿಗೆ ಬರುವ ವೃದ್ಧರಿಗಿಲ್ಲ ಸೌಲಭ್ಯ

    ಕೋಲಾರ: ಬಾಡಿಗೆ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಉಪ ನೋಂದಣಾಧಿಕಾರಿಯನ್ನು ನಗರದ ತಾಲೂಕು ಕಚೇರಿ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ.

    ತಾಲೂಕು ಕಚೇರಿಯಲೇ ಶೌಚಾಲಯ, ಕುಡಿಯುವ ನೀರು ಸೇರಿದಂತೆ ವಿವಿಧ ಸೌಲಭ್ಯಗಳ ಕೊರತೆಯಿದೆ. ಕಚೇರಿಗೆ ಆಗಮಿಸುವ ವೃದ್ಧರಿಗೆ, ಅಂಗವಿಕಲರಿಗೆ ರ್ಯಾಂಪ್​ ವ್ಯವಸ್ಥೆಯಿಲ್ಲ. ಇದೇ ಕಟ್ಟಡದ 2ನೇ ಹಂತಸ್ತಿಗೆ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದೆ.
    2ನೇ ಹಂತಸ್ತಿನ ಕಚೇರಿಯಲ್ಲಿ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಗೆ ತೆರಳಲು ವೃದ್ದರು ಹಾಗು ಅಂಗವಿಕಲರು ಪರದಾಡುವ ಸ್ಥಿತಿ ನಿಮಾರ್ಣವಾಗಿದೆ. ಗುರುವಾರ ಆಸ್ತಿ ನೋಂದಣಿಗೆ ಕಚೇರಿಗೆ ಆಗಮಿಸಿದ್ದ ವೃದ್ಧ ಮಹಿಳೆಯನ್ನು ಚೇರ್​ ಮೇಲೆ ಕುರಿಸಿ, ಕೆಳಗೆ ಕರೆ ತರಲಾಯಿತು.
    ಈ ಮೊದಲು ಖಾಸಗಿ ಕಟ್ಟಡದಲ್ಲಿದ್ದ ನೊಂದಣಾಧಿಕಾರಿ ಕಚೇರಿಯನ್ನು 15 ದಿನಗಳ ಹಿಂದೆಯಷ್ಟೇ ಕೋಲಾರ ತಾಲೂಕು ಕಚೇರಿಯ 2 ನೇ ಹಂತಸ್ತಿಗೆ ಸ್ಥಳಾಂತರ ಮಾಡಲಾಗಿದೆ. ತಾಲೂಕು ಕಚೇರಿಯ ಎರಡನೆ ಮಹಡಿಗೆ ಸ್ಥಳಾಂತರವಾದ ಬಳಿಕ ಲಿಫ್ಟ್​ ವ್ಯವಸ್ಥೆ ಇಲ್ಲದ ಕಾರಣ ಪರದಾಡುವ ಸ್ಥಿತಿ ನಿಮಾರ್ಣವಾಗಿದೆ.
    ವಯಸ್ಸಾದವರು ಹಾಗೂ ಮಹಿಳೆಯರನ್ನ ಚೇರ್​ ಮೇಲೆ ಕುಳ್ಳಿರಿಸಿ ಮೇಟ್ಟುಗಳ ಮೇಲೆ ಹೊತ್ತುಕೊಂಡು ಹೋಗುವ ಪರಿಸ್ಥಿತಿ ನಿಮಾರ್ಣವಾಗಿದೆ. ಮೆಟ್ಟಿಲುಗಳ ಮೇಲೆ ವೃದ್ದೆಯನ್ನ ಹೊತ್ತುಕೊಂಡು ಹೋಗುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ಕೋಲಾರ ತಾಲ್ಲೂಕು ಕಚೇರಿಯಲ್ಲಿರುವ ನೊಂದಣಾಧಿಕಾರಿ ಕಚೇರಿ ಅವ್ಯವಸ್ಥೆ ವಿರುದ್ದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
    ಇನ್ನೂ ಈ ಹಿಂದೆಯೂ ತಹಶೀಲ್ದಾರ್​ ಕಚೇರಿಯ 2 ನೇ ಹಂತಸ್ತಿನ ಮಹಿಡಿಗೆ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಾರ್ವಜನಿಕರು, ಸದ್ಯ ವೃದ್ಧರು ಹಾಗೂ ಅಂಗವಿಕಲರ ಪರದಾಟ ವಿಡಿಯೋ ಎಲ್ಲೆಡೆ ವೈರಲ್​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts