More

    ಜನರಿಗೆ ಬೆಲೆ ಏರಿಕೆಯ ಬಿಸಿ?; ಹಣದುಬ್ಬರ ಒತ್ತಡದ ಕಾರಣ ಕಚ್ಚಾವಸ್ತುಗಳ ಬೆಲೆ ಏರಿಕೆ

    ನವದೆಹಲಿ: ಹಣದುಬ್ಬರ ಒತ್ತಡದ ಕಾರಣ ಕಚ್ಚಾ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಪದಾರ್ಥಗಳ (ಎಫ್​ಎಂಸಿಜಿ) ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಮಾರಿಕೊ ಸೇರಿ ಕೆಲವು ಎಫ್​ಎಂಸಿಜಿ ಉದ್ದಿಮೆಗಳು ಈಗಾಗಲೇ ಅಲ್ಪ ಪ್ರಮಾಣದಲ್ಲಿ ದರ ಹೆಚ್ಚಿಸಿವೆ. ಡಾಬರ್, ಪಾರ್ಲೆ, ಪತಂಜಲಿ ಕಂಪನಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಬೆಲೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಕೊಬ್ಬರಿ ಎಣ್ಣೆ, ತಾಳೆ ಎಣ್ಣೆ ಸೇರಿ ಇನ್ನಿತರ ಖಾದ್ಯ ತೈಲಗಳ ಬೆಲೆ ದುಬಾರಿಯಾಗಿ ಉತ್ಪಾದನಾ ವೆಚ್ಚ ಅಧಿಕವಾಗಿದ್ದರೂ ಉತ್ಪನ್ನಗಳ ದರ ಹೆಚ್ಚಿಸಿಲ್ಲ. ಆದರೆ, ಹೆಚ್ಚು ದಿನ ನಷ್ಟ ಭರಿಸಲು ಆಗುವುದಿಲ್ಲ. ಇದರಿಂದ ಬಿಜಿನೆಸ್ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಎಫ್​ಎಂಸಿಜಿ ಉದ್ದಿಮೆಗಳು ಹೇಳಿವೆ. ಎಫ್​ಎಂಸಿಜಿ ಪದಾರ್ಥಗಳಲ್ಲಿ ಖಾದ್ಯ ತೈಲದ ಬಳಕೆ ಹೆಚ್ಚು. ಕಳೆದ ನಾಲ್ಕೈದು ತಿಂಗಳಿಂದ ಇದರ ದರ ಏರುತ್ತಲೇ ಇದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೆಲೆ ಹೆಚ್ಚಿಸುವುದು ಅನಿವಾರ್ಯ ಎಂದು ಪಾರ್ಲೆ ಪ್ರಾಡಕ್ಟ್​ನ ಹಿರಿಯ ಅಧಿಕಾರಿ ಮಯಾಂಕ್ ಷಾ ಹೇಳಿದ್ದಾರೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ ಆಗುತ್ತಿದ್ದರೂ ದರ ಹೆಚ್ಚಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ಇನನಾವು ಕೈಗೊಂಡಿಲ್ಲ ಆದರೆ, ಪರಿಸ್ಥಿತಿ ಕೈಮೀರಿದರೆ ಇಂಥ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಪತಂಜಲಿ ಸಂಸ್ಥೆ ವಕ್ತಾರ ಎಸ್.ಕೆ. ತಿಜರವಾಲಾ ತಿಳಿಸಿದ್ದಾರೆ.

    ವಿದೇಶಿ ಆಸ್ತಿ ತನಿಖೆಗೆ ಐಟಿ ವಿಶೇಷ ಘಟಕ: ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಅಘೋಷಿತ ಆಸ್ತಿ ಮತ್ತು ಕಪು್ಪಹಣದ ಕುರಿತು ತನಿಖೆ ನಡೆಸಲು ಆದಾಯ ತೆರಿಗೆ (ಐಟಿ) ಇಲಾಖೆ ವಿಶೇಷ ಘಟಕ ರಚಿಸಿದೆ.

    ಜಿಎಸ್​ಟಿ ಮೋಸ 215 ಜನರ ಬಂಧನ

    ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ತಪ್ಪಿಸಿಕೊಳ್ಳಲು ಖೋಟಾ ಇನ್​ವಾಯ್್ಸ ಬಳಸಿ ಸರ್ಕಾರಕ್ಕೆ ವಂಚನೆ ನಡೆಸುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿ ಕಳೆದ ಎರಡು ತಿಂಗಳಲ್ಲಿ 215 ಜನರನ್ನು ಬಂಧಿಸಿ, 700 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ವಸೂಲಿ ಮಾಡಲಾಗಿದೆ. ಜಿಎಸ್​ಟಿ ಬೇಹುಗಾರಿಕೆ ಮಹಾ ನಿರ್ದೇಶನಾಲಯ (ಡಿಜಿಜಿಐ) ಮತ್ತು ಸಿಜಿಎಸ್​ಟಿ ಕಮಿಷನರೇಟ್​ಗಳು ಕಾರ್ಯಾಚರಣೆ ನಡೆಸಿ ಈ ಕ್ರಮ ಕೈಗೊಂಡಿವೆ. 2020 ನವೆಂಬರ್, ಡಿಸೆಂಬರ್​ನಲ್ಲಿ ಸುಮಾರು 2,200 ಪ್ರಕರಣಗಳನ್ನು ದಾಖಲಿಸಿ 6,600ಕ್ಕೂ ಹೆಚ್ಚು ನಕಲಿ ಜಿಎಸ್​ಟಿಐಎನ್ ಸಂಸ್ಥೆಗಳನ್ನು ಪತ್ತೆ ಹಚ್ಚಲಾಗಿದೆ. ಬಂಧಿತರಲ್ಲಿ ಆರು ಚಾರ್ಟರ್ಡ್ ಅಕೌಂಟೆಂಟ್​ಗಳು ಮತ್ತು ಒಬ್ಬ ಕಂಪನಿ ಕಾರ್ಯದರ್ಶಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಲವು ಕಂಪನಿಗಳ ಆಡಳಿತ ನಿರ್ದೇಶಕರು, ನಿರ್ದೇಶಕರು, ಮಾಲಿಕರು ಮತ್ತು ಪಾಲುದಾರರು ಕೂಡ ಕಂಬಿ ಎಣಿಸುತ್ತಿದ್ದಾರೆ.

    ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು?

    ತಂದೆಯ ಆಸ್ತಿಯಲ್ಲಿ ಮಗ ಮನೆ ಕಟ್ಟಿಸಿದರೆ ಮನೆಯ ಪಾಲು ಎಲ್ಲಾ ಮಕ್ಕಳಿಗೂ ಕೊಡಬೇಕಾಗತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts