More

    ತಂದೆಯ ಆಸ್ತಿಯಲ್ಲಿ ಮಗ ಮನೆ ಕಟ್ಟಿಸಿದರೆ ಮನೆಯ ಪಾಲು ಎಲ್ಲಾ ಮಕ್ಕಳಿಗೂ ಕೊಡಬೇಕಾಗತ್ತಾ?

    ತಂದೆಯ ಆಸ್ತಿಯಲ್ಲಿ ಮಗ ಮನೆ ಕಟ್ಟಿಸಿದರೆ ಮನೆಯ ಪಾಲು ಎಲ್ಲಾ ಮಕ್ಕಳಿಗೂ ಕೊಡಬೇಕಾಗತ್ತಾ? ಪ್ರಶ್ನೆ:ನನ್ನ ಪತಿಯ ತಂದೆ ತಾಯಿಗೆ ನಾಲ್ಕು ಜನ ಗಂಡು ಮಕ್ಕಳು. ನನ್ನ ಪತಿ ಮೂರನೆಯವರು. ಮನೆ ಮತ್ತು ಖಾಲೀ ಜಾಗ ನಮ್ಮ ಮಾವನವರ ಆಸ್ತಿ. ನಮ್ಮ ಮಾವನವರು ತೀರಿಕೊಂಡಿದ್ದಾರೆ.

    ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮ ಮನೆಯವರು ಸ್ವಂತ ದುಡಿಮೆಯಿಂದ ಮನೆ ಕಟ್ಟಿಸಿದ್ದು. ಈಗ ದೊಡ್ಡ ಮಗ ಸೊಸೆ ಮನೆ ತಮಗೇ ಬರಬೇಕು ಎನ್ನುತ್ತಿದ್ದಾರೆ. ಆದರೆ ನಮ್ಮ ಇಷ್ಟ ಏನೆಂದರೆ ಮನೆಯನ್ನು ನಮ್ಮ ಮನೆಯವರಿಗೆ ಮತ್ತು ನನ್ನ ಮನೆಯವರ ಒಬ್ಬ ತಮ್ಮನ ಹೆಸರಿಗೆ ಮಾಡಬೇಕು , ಖಾಲೀ ಜಾಗ ಉಳಿದವರ ಹೆಸರಿಗೆ ಮಾಡಬೇಕು ಎಂದು. ಈ ರೀತಿ ಆಗಬೇಕಾದರೆ ನಾವು ಏನು ಮಾಡಬೇಕು. ಯಾವುದೇ ಕಾರಣಕ್ಕೂ ಮನೆ ನಮಗೇ ಉಳಿಯ ಬೇಕು ಅಂದರೆ ಏನು ಮಾಡಬೇಕು?

    ಉತ್ತರ:  ನಿಮ್ಮ ಮಾವನವರು ತೀರಿಕೊಂಡ ನಂತರ ಅವರ ಆಸ್ತಿಯಲ್ಲಿ ಅವರ ನಾಲ್ಕೂ ಮಕ್ಕಳಿಗೆ ಮತ್ತು ಅವರ ಪತ್ನಿ( ನಿಮ್ಮ ಅತ್ತೆಗೆ ) ಸಮವಾಗಿ ಪಾಲು ಇರುತ್ತದೆ. ಕಾನೂನಿನ ಪ್ರಕಾರ ಹೋದರೆ, ನಿಮ್ಮ ಮಾವನ ಹೆಸರಿನ ಆಸ್ತಿಯಲ್ಲಿ ನಿಮ್ಮ ಪತಿ ಖರ್ಚು ಮಾಡಿ ಮನೆ ಕಟ್ಟಿದ ಮಾತ್ರಕ್ಕೆ ಆಸ್ತಿ ಅವರಿಗೆ ಹೋಗಬೇಕು ಎಂದು ಆದೇಶ ಮಾಡಿ ಎಂದು ಕೇಳಲು ಆಗುವುದಿಲ್ಲ. ಎಲ್ಲ ವಾರಸುದಾರರಿಗೂ ಸಮಭಾಗ ಇದ್ದೇ ಇರುತ್ತದೆ.

    ಎಲ್ಲರೂ ಒಪ್ಪಿಕೊಂಡರೆ ಕುಟುಂಬ ವ್ಯವಸ್ಥಾ ಪತ್ರ /ಸೆಟಲ್ಮೆಂಟ್‌ ಡೀಡ್‌ ಅಥವಾ ವಿಭಾಗ ಪತ್ರದ ಮೂಲಕ ಆಸ್ತಿಯನ್ನು, ನೀವೆಲ್ಲಾ ಕೂತು ಮಾತಾಡಿ ಪರಸ್ಪರ ಒಪ್ಪಿಗೆಯಂತೆ ಹಂಚಿಕೊಂಡು ನೋಂದಣಿ ಮಾಡಿಸಿಕೊಳ್ಳಬಹುದು. ಯಾರಾದರೂ ಹಿರಿಯರನ್ನೂ ಕರೆಯಿಸಿ ಮಾತಾಡಿ ನೋಡಿ.

    ಬೇಕಿದ್ದರೆ ಉಳಿದ ಸಹೋದರರಿಗೆ ಸ್ವಲ್ಪ ಹಣ ಕೊಟ್ಟು ಮನೆಯನ್ನು ನೀವೇ ಉಳಿಸಿಕೊಳ್ಳಬಹುದಾ ಎಂದು ನೋಡಿ. ಹಾಗೆ ಒಪ್ಪಿದರೆ, ವಿಭಾಗ ಪತ್ರದಲ್ಲಿ ಹಣ ಕೊಟ್ಟ ಬಗ್ಗೆಯೂ ನಮೂದಿಸಲು ಮರೆಯಬೇಡಿ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಅನಾರೋಗ್ಯದಿಂದ ಬಳಲುತ್ತಿರುವವರು ವಿಲ್‌ ಬರೆದರೆ ಅದು ಮಾನ್ಯವಾಗುತ್ತಾ?

    ಅಪ್ಪನ ಆಸ್ತಿಯಲ್ಲಿ ತನ್ನಿಚ್ಛೆಯಂತೆ ಭಾಗ ಮಾಡುವ ಅಧಿಕಾರ ಅಮ್ಮನಿಗೆ ಇದೆಯೆ?

    ಅನೇಕ ಮಕ್ಕಳಲ್ಲಿ ಇಬ್ಬರಿಗೆ ಮಾತ್ರ ವಿಲ್​ ಮಾಡಿದರೆ ಮುಂದೆ ಸಮಸ್ಯೆ ಆಗತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts