More

    ಫೇಸ್​ಬುಕ್​ನಲ್ಲೇನಿದು ಒಳಗೊಂದು, ಹೊರಗೊಂದು?!; ಆಗಿದ್ದಾದರೂ ಏನು?

    ಬೆಂಗಳೂರು: ಇಂದು ಬೆಳಗ್ಗೆಯಿಂದ ಫೇಸ್​ಬುಕ್​ನಲ್ಲಿ ಫಾಲೋವರ್ಸ್​ ಸಂಖ್ಯೆ ಕುಸಿತಗೊಂಡಿದ್ದೇ ಸುದ್ದಿ. ರಾತ್ರಿ ನೋಡುವಾಗ ಅಷ್ಟಿತ್ತು, ಬೆಳಗ್ಗೆ ನೋಡಿದರೆ ಇಷ್ಟೇ ಇದೆ ಎಂದು ಹಲವರು ಅಲವತ್ತುಕೊಂಡಿದ್ದರು. ಹೀಗೆ ಹಲವು ಮಂದಿ ತಮ್ಮ ಫಾಲೋವರ್ಸ್ ಸಂಖ್ಯೆ ಕಡಿಮೆಯಾಗಿ ಫೇಸ್​ಬುಕ್ ತೋರಿಸುತ್ತಿರುವುದರ ಕುರಿತು ಹೇಳಿಕೊಂಡಿದ್ದರು.

    ಆದರೆ ಫಾಲೋವರ್ಸ್ ಸಂಖ್ಯೆ ನಿಜವಾಗಿಯೂ ಕುಸಿತಗೊಂಡಿಲ್ಲ. ಆ ಸಂಖ್ಯೆಯ ಡಿಸ್​ಪ್ಲೇ ನಂಬರ್​ನಲ್ಲಿ ವ್ಯತ್ಯಾಸ ಆಗಿರುವುದು ಅದಾದ ಕೆಲವು ನಿಮಿಷಗಳ ಬಳಿಕ ಗಮನಕ್ಕೆ ಬಂದಿದೆ. ಅಂದರೆ ಫೇಸ್​ಬುಕ್ ಖಾತೆದಾರರು ತಮ್ಮ ಖಾತೆಯಲ್ಲಿನ ಫಾಲೋವರ್ಸ್ ಸಂಖ್ಯೆ ತೋರಿಸುವಲ್ಲಿ, ಆ ಸಂಖ್ಯೆ ಮೇಲೆ ಕ್ಲಿಕ್ ಮಾಡಿದರೆ ಅದಕ್ಕೂ ಮೊದಲಿದ್ದ ಫಾಲೋವರ್ಸ್ ಸಂಖ್ಯೆಯನ್ನೇ ತೋರಿಸುತ್ತದೆ.

    ಇದನ್ನೂ ಓದಿ: ನಿಗೂಢವಾಗಿ ಕುಸಿಯುತ್ತಿದೆ ಫೇಸ್​ಬುಕ್​ ಫಾಲೋವರ್ಸ್​ ಸಂಖ್ಯೆ: 100 ಮಿಲಿಯನ್​ನಿಂದ​ 9 ಸಾವಿರಕ್ಕಿಳಿದ ಜುಕರ್​ಬರ್ಗ್ ಫಾಲೋವರ್ಸ್​

    ಈ ವಿಷಯ ಒಬ್ಬರಿಂದ ಒಬ್ಬರಿಗೆ ಗೊತ್ತಾಗುತ್ತಿದ್ದಂತೆ ಹಲವರು ಇದನ್ನು ಪರಿಶೀಲಿಸಿಕೊಂಡು ಸಮಾಧಾನಗೊಂಡಿದ್ದರೆ, ಇನ್ನು ಕೆಲವರ ಖಾತೆಯಲ್ಲಿನ ಸಮಸ್ಯೆ ನಿವಾರಣೆಯಾಗಿದ್ದು, ಮೊದಲಿದ್ದ ಫಾಲೋವರ್ಸ್ ಸಂಖ್ಯೆಯನ್ನೇ ತೋರಿಸಲಾರಂಭಿಸಿದೆ. ಇನ್ನು ಕೆಲವರ ಖಾತೆಯ ಫಾಲೋವರ್ಸ್ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದರೂ, ಈ ಮೇಲೆ ತಿಳಿಸಿದಂತೆ ಮಾಡಿದಲ್ಲಿ ಮೊದಲಿದ್ದ ಫಾಲೋವರ್ಸ್ ಸಂಖ್ಯೆ ಎಷ್ಟೆಂಬುದನ್ನು ಪರಿಶೀಲಿಸಿಕೊಳ್ಳಬಹುದು. ಅದಾಗ್ಯೂ ಆಗಿದ್ದೇನು ಎಂದು ಬಳಕೆದಾರರು ಕುತೂಹಲಗೊಂಡಿದ್ದರೂ ಫೇಸ್​ಬುಕ್​ ಅಥವಾ ಅದರ ಮಾತೃಕಂಪನಿ ಮೆಟಾ ಅಧಿಕೃತ ಖಾತೆಗಳಲ್ಲಿ ಈ ಕುರಿತು ಯಾವುದೇ ಸ್ಪಷ್ಟನೆ ಇನ್ನೂ ಪ್ರಕಟಗೊಂಡಿಲ್ಲ.

    ಇದನ್ನೂ ಓದಿ: ಹ್ಯಾಕ್​ ಮಾಡಿದ್ದಕ್ಕೂ ಈಕೆಗೆ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ತು; ಮೈಕ್ರೋಸಾಫ್ಟ್​, ಫೇಸ್​ಬುಕ್​ನಿಂದ್ಲೇ ಬಹುಮಾನ

    ಇನ್ನು ವಾರದ ಹಿಂದೆ ಫೇಸ್​​ಬುಕ್​ ಮಾಲೀಕತ್ವ ಹೊಂದಿರುವ ಮೆಟಾ ಅಧೀನದಲ್ಲಿರುವ ವಾಟ್ಸ್​ಆ್ಯಪ್​ ಕುರಿತು ಟೆಲಿಗ್ರಾಂ ಸಂಸ್ಥಾಪಕ, ಸಿಇಒ ಪಾವೆಲ್ ಡುರೊವ್ ಆರೋಪ ಮಾಡಿದ್ದು, ವಾಟ್ಸ್​ಆ್ಯಪ್​ ಆ್ಯಪ್​ ಮೊಬೈಲ್​ಫೋನ್​ನಲ್ಲಿದ್ದರೆ ಹ್ಯಾಕರ್ಸ್​​ಗೆ ಅಂಥ ಉಪಕರಣ ಹ್ಯಾಕ್​ ಮಾಡಲು ದಾರಿ ಮಾಡಿಕೊಟ್ಟಂತೆ ಎಂದು ಹೇಳಿದ್ದಲ್ಲದೆ, ಬೇರೆ ಯಾವ ಮೆಸೇಜಿಂಗ್ ಆ್ಯಪ್​ ಬೇಕಿದ್ದರೂ ಬಳಸಿ, ವಾಟ್ಸ್​ಆ್ಯಪ್​ ಮಾತ್ರ ಬಳಸಬೇಡಿ ಎಂದು ಹೇಳಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಫೇಸ್​ಬುಕ್​ನಲ್ಲಿ ಹೀಗಾಗಿರುವುದು ಬಳಕೆದಾರರಲ್ಲಿ ಆತಂಕಭರಿತ ಕುತೂಹಲವನ್ನು ಮೂಡಿಸಿದ್ದರೂ ಅಚ್ಚರಿ ಏನಲ್ಲ.

    ವಾಟ್ಸ್​ಆ್ಯಪ್​ ಬಳಕೆ ಅಪಾಯಕಾರಿಯೇ?; ಇಲ್ಲಿದೆ ಆತಂಕಕಾರಿ ಮಾಹಿತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts