More

    ಥಾಯ್ಲೆಂಡ್​ನ ಪ್ರತಿಷ್ಠಿತ ಶ್ರೀನಗರೀಂದ್ರ ಗ್ಲೋಬಲ್ ಲೀಡರ್ ಪುರಸ್ಕಾರಕ್ಕೆ ಭಾಜನರಾದ ಡಾ.ದಿಲೀಪ್ ಕುಮಾರ್​

    ಬ್ಯಾಂಕಾಕ್: ವಿಶ್ವದ ನರ್ಸಿಂಗ್ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ಮೀಸಲಾಗಿರುವ ಪ್ರತಿಷ್ಠಿತ ಶ್ರೀನಗರೀಂದ್ರ ನಾಮಾಂಕಿತ ಗ್ಲೋಬಲ್ ಲೀಡರ್ ಪುರಸ್ಕಾರಕ್ಕೆ ಡಾ. ದಿಲೀಪ್ ಕುಮಾರ್ ತಿಮ್ಮಪ್ಪ ಭಾಜನರಾಗಿದ್ದಾರೆ.

    ಇದನ್ನೂ ಓದಿ: ವಾಯು ಮಾಲಿನ್ಯವನ್ನು ತಡೆಗಟ್ಟಲು ಆನಂದ್ ಮಹೀಂದ್ರಾ ನೀಡಿದ್ರು ಸೂಪರ್ ಐಡಿಯಾ
    ಥಾಯ್ಲೆಂಡ್​ನ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಣಿ ಮಹಾಸ್ಚತ್ರಿ ಸಿರಿಡೋನ್ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿಯು ಇಪ್ಪತ್ತೆರಡು ಲಕ್ಷ ರೂ.ನಗದು.ಪ್ರಶಸ್ತಿ ಫಲಕ ಒಳಗೊಂಡಿತ್ತು.

    ಚಿತ್ರದುರ್ಗ ಜಿಲ್ಲೆ ತುಮ್ಮಿಗ್ರಾಮದವರಾದ ಡಾ.ದಿಲೀಪ್ ಕುಮಾರ್ ತಿಮ್ಮಪ್ಪ ನಾಲ್ಕು ದಶಕಗಳಿಂದ ನರ್ಸಿಂಗ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಇಂಡಿಯನ್ ನರ್ಸಿಂಗ್ ಕೌನ್ಸಿಲ್ ನ ಅಧ್ಯಕ್ಷರಾಗಿ ದೇಶದ ನರ್ಸಿಂಗ್ ವ್ಯವಸ್ಥೆ ಗೆ ಹೊಸ ಆಯಾಮವನ್ನು ಮೂಡಿಸಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ತಂದುಕೊಟ್ಟಿದ್ದಾರೆ.

    ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ವದ ನಾನಾ ಕಡೆಯಿಂದ ಗಣ್ಯರು, ಆರೋಗ್ಯ ಕ್ಷೇತ್ರದ ವೃತ್ತಿಪರರು ಮತ್ತು ಹಿತೈಷಿಗಳು ಭಾಗವಹಿಸಿದ್ದರು.
    ಜಾಗತಿಕ ಗುಣಮಟ್ಟದ ಶುಶ್ರೂಷಾ ಶಿಕ್ಷಣ: ರಾಜಕುಮಾರಿ ಶ್ರೀನಗರಿಂದ್ರ ಅವರ ಗೌರವಾರ್ಥ 2001 ರಲ್ಲಿ ಸ್ಥಾಪಿಸಲಾದ ಪ್ರಿನ್ಸೆಸ್ ನಗರಿಂದ್ರ ಪ್ರಶಸ್ತಿಯನ್ನು ಶುಶ್ರೂಷಾ ಕ್ಷೇತ್ರಕ್ಕೆ ನೀಡಲಾದ ಕೊಡುಗೆ, ಬದ್ಧತೆ ಮತ್ತು ಸಮರ್ಪಣಾ ಮನೋಭಾವ ಪ್ರದರ್ಶಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ ಕೊಡಲಾಗುತ್ತದೆ.

    ಡಾ. ದಿಲೀಪ್ ಕುಮಾರ್ ತಿಮ್ಮಪ್ಪ ಅವರು ಭಾರತದಲ್ಲಿ ಶುಶ್ರೂಷಕ ವೃತ್ತಿಯಲ್ಲಿ 49 ವರ್ಷದಿಂದ ಸೇವೆ ಸಲ್ಲಿಸುತ್ತ ಬಂದಿದ್ದು, ಆರೋಗ್ಯ ಕ್ಷೇತ್ರ ಸುಧಾರಣೆಗೆ ಪೂರಕವಾಗಿವೆ. ತಮ್ಮ ವೃತ್ತಿಜೀವನದುದ್ದಕ್ಕೂ ನರ್ಸಿಂಗ್​ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿಯನ್ನು ಉತ್ತೇಜಿಸುತ್ತ, ನರ್ಸಿಂಗ್ ವೃತ್ತಿಪರರ ಹಕ್ಕುಗಳು ಮತ್ತು ಯೋಗಕ್ಷೇಮಕ್ಕಾಗಿ ಶ್ರಮಿಸುತ್ತ ಬಂದಿದ್ದಾರೆ.

    ಇನ್ನು ಇಂಡಿಯನ್ ನರ್ಸಿಂಗ್ ಕೌನ್ಸಿಲ್ (ಐಎನ್​ಸಿ) ನಲ್ಲಿ ಅಧ್ಯಕ್ಷರಾಗಿ ಪ್ರಮುಖ ಪಾತ್ರವನ್ನು ವಹಿಸಿರುವ ಅವರು, ತಮ್ಮ ನಾಯಕತ್ವದಲ್ಲಿ ಶುಶ್ರೂಷಾ ಶಿಕ್ಷಣವು ಜಾಗತಿಕ ಗುಣಮಟ್ಟಕ್ಕೆ ಸಮನಾಗಿರುವಂತಹ ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತಂದಿದ್ದಾರೆ. ಇದು ಇತರರಿಗೂ ಸ್ಫೂರ್ತಿಯಾಗಿದೆ ಎಂದರೆ ತಪ್ಪಾಗಲಾರದು.

    ಪೊಲೀಸ್ ಉದ್ಯೋಗ ಆಕಾಂಕ್ಷಿ ಮಹಿಳೆ ಈಗ ಬಸ್ ಡ್ರೈವರ್; ಪತ್ನಿ ಬಸ್​​ ಚಾಲಕಿ, ಪತಿ ಕಂಡೆಕ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts