More

    ಥೈಲ್ಯಾಂಡ್ ಆಕಾಶದಲ್ಲಿ ‘ಜೈ ಶ್ರೀ ರಾಮ್’ ಪತಾಕೆ….ನಿವೃತ್ತ ಅಧಿಕಾರಿಯ ಈ ಸಾಧನೆಗೆ ನೆಟ್ಟಿಗರ ಸೆಲ್ಯೂಟ್

    ಅಯೋಧ್ಯೆ: ಕಳೆದ ಸೋಮವಾರ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ನಂತರ ಜನರು ಶ್ರೀರಾಮನ ದರ್ಶನ ಪಡೆಯಲು ಜಮಾಯಿಸುತ್ತಿದ್ದಾರೆ. ಅಯೋಧ್ಯೆಯನ್ನು ತಲುಪಿದ ನಂತರ ಸಾವಿರಾರು ಭಕ್ತರು ಆದಷ್ಟು ಬೇಗ ದೇವಸ್ಥಾನವನ್ನು ತಲುಪಿ, ದೇವರ ದರ್ಶನವನ್ನು ಪಡೆಯಲು ಬಯಸುತ್ತಿದ್ದಾರೆ. ಅಂದಹಾಗೆ ರಾಮ ಭಕ್ತರು ಸಂತೋಷದಿಂದ ಹಾಡುವ ಮತ್ತು ನೃತ್ಯ ಮಾಡುವ ಅನೇಕ ವಿಡಿಯೋಗಳು ದೇಶಾದ್ಯಂತ ಹೊರಬರುತ್ತಿವೆ. ಅಂದಹಾಗೆ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ರಾಜ್ ಕುಮಾರ್ ಅವರ ವಿಡಿಯೋ ಕೂಡ ಈಗ ವೈರಲ್ ಆಗುತ್ತಿದೆ.

    ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ ಇತ್ತ ಲೆಫ್ಟಿನೆಂಟ್ ಕಮಾಂಡರ್ ರಾಜ್‌ಕುಮಾರ್ ಅವರು ಥಾಯ್ಲೆಂಡ್‌ನ ಆಕಾಶದಲ್ಲಿ 10 ಸಾವಿರ ಅಡಿ ಎತ್ತರದಲ್ಲಿ ಸ್ಕೈಡೈವಿಂಗ್ ಮಾಡುತ್ತಾ ‘ಜೈ ಶ್ರೀ ರಾಮ್’ ಧ್ವಜವನ್ನು ಬೀಸಿದರು.

    ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ನೌಕಾಪಡೆಯ ಅಧಿಕಾರಿ ರಾಜ್‌ಕುಮಾರ್ ಸದ್ಯ ನಿವೃತ್ತರಾಗಿದ್ದಾರೆ. ಥೈಲ್ಯಾಂಡ್‌ನಲ್ಲಿ 10,000 ಅಡಿ ಎತ್ತರದಿಂದ ‘ಜೈ ಶ್ರೀ ರಾಮ್’ ಧ್ವಜ ಹಾರಿಸುತ್ತಾ ಸ್ಕೈಡೈವ್ ಮಾಡಿದ್ದಾರೆ. ತಮಿಳುನಾಡಿನ ತೇಣಿ ಜಿಲ್ಲೆಯಿಂದ ಬಂದಿರುವ ನೌಕಾಪಡೆಯ ಈ ಮಾಜಿ ಅಧಿಕಾರಿ ಪ್ರಸ್ತುತ ಸ್ಕೈಡೈವಿಂಗ್ ವಿಶ್ಲೇಷಕ ಮತ್ತು ಕ್ರೀಡೆ ಮತ್ತು ಮಿಲಿಟರಿ ಸಿಬ್ಬಂದಿಗೆ ಬೋಧಕರಾಗಿದ್ದಾರೆ.

    ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪಂಡಿತರ ಮಂತ್ರಗಳ ಪಠಣದ ನಡುವೆ ಆಚರಣೆಗಳನ್ನು ಪ್ರಾರಂಭಿಸಿದರು. ಮಧ್ಯಾಹ್ನ 12.30ಕ್ಕೆ (ಮಧ್ಯಾಹ್ನ 12.29) ರಾಮಲಲ್ಲಾ ನೂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಪ್ರಾಣ ಪ್ರತಿಷ್ಠೆ ನಂತರ ಅವರು ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್ ಅವರ ಕೈಯಿಂದ ಚರಣಮೃತವನ್ನು ತೆಗೆದುಕೊಳ್ಳುವ ಮೂಲಕ ತಮ್ಮ 11 ದಿನಗಳ ಉಪವಾಸವನ್ನು ಮುರಿದರು. ಮೈಸೂರಿನ ಅರುಣ್ ಯೋಗಿರಾಜ್ ಅವರು 51 ಇಂಚಿನ ರಾಮನ ಪ್ರತಿಮೆಯನ್ನು ಕಪ್ಪು ಕಲ್ಲಿನಿಂದ ಮಾಡಿರುವುದು ವಿಶೇಷ.

    View this post on Instagram

    A post shared by India Today (@indiatoday)

    ಅಯೋಧ್ಯೆ ರಾಮ ಮಂದಿರಕ್ಕೆ ಅತಿ ಹೆಚ್ಚು ದೇಣಿಗೆ ನೀಡಿದವರು ದೊಡ್ಡ ಉದ್ಯಮಿ ಅಲ್ಲವೇ ಅಲ್ಲ, ಮತ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts